ಅಂಬರೀಷ್ ಮನೆಗೆ ಸಿಎಂ ದಿಢೀರ್ ಭೇಟಿ: ಕುತೂಹಲ ಕೆರಳಿಸಿದ ಮಾತುಕತೆ

ಬೆಂಗಳೂರು, ಗುರುವಾರ, 20 ಏಪ್ರಿಲ್ 2017 (09:33 IST)

Widgets Magazine

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಿಎಂ ಅಂಡ್ ಟೀಮ್ ಮಾಜಿ ಸಚಿವ ಅಂಬರೀಷ್ ಮನೆಗೆ ತೆರಳಿ ಮಾತುಕತೆ ನಡೆಸಿದೆ. ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್ ಸಿಎಂ ಸಾಥ್ ನೀಡಿದ್ದರು. ಅಂಬಿ ನಿವಾಸದಲ್ಲಿಯೇ ಸಿಎಂ ಟೀಮ್ ಭೋಜನವನ್ನೂ ಮಾಡಿದೆ.ಗಳಲ್ಲಿ ಭಾಗವಹಿಸಿರಲಿಲ
 


ಸಚಿವ ಸ್ಥಾನದಿಂದ ಇಳಿಸಿದ ಬಳಿಕ ಬೇಸರಗೊಂಡಿದ್ದ ಅಂಬರೀಷ್ ಅಷ್ಟಾಗಿ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿರಲಿಲ್ಲ. ಉಪಚುನಾವಣೆಯ ಪ್ರಚಾರಕ್ಕೂ ಅಂಬಿ ಬಂದಿರಲಿಲ್ಲ. ಈ ಮಧ್ಯೆ, ಅಂಬರೀಷ್ ಬಿಜೆಪಿ ಸೇರಲಿದ್ದಾರೆ ಎಂಬ ೂಹಾಪೋಹಗಳ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎನ್ನಲಾಗಿದೆ. ಭೋಜನದ ನೆಪದಲ್ಲಿ ನಡೆದ ಈ ಮಾತುಕತೆ ವೇಳೆ ಹಲವು ರಾಜಕೀಯ ವಿಚಾರಗಳ ಚರ್ಚೆ ನಡೆದಿದೆ ಎನ್ನಲಾಗಿದೆ.
 
ಸದ್ಯ, ಎಸ್.ಎಂ. ಕೃಷ್ಣ ಬಿಜೆಪಿ ಸೇರಿರುವುದರಿಂದ ಮಂಡ್ಯದಲ್ಲಿ ಕಾಂಗ್ರೆಸ್`ನ ಪ್ರಭಾವಿ ನಾಯಕರಿಲ್ಲ. ಕೆಲ ನಾಯಕರೂ ಜೆಡಿಎಸ್ ಕಡೆ ವಾಲಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ. ಹೀಗಾಗಿ, ಅಂಬರೀಷ್ ಅವರ ಮನವೊಲಿಸಿ ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಬಲಗೊಳಿಸುವ ಯತ್ನ ನಡೆದಿದೆ ಎನ್ನಲಾಗಿದೆ. ಇದಕ್ಕಾಗಿ ಅಂಬರೀಷ್`ಗೆ ಮತ್ತೆ ಸಚಿವ ಸ್ಥಾನ ನೀಡಲಾಗುತ್ತಾ..? ಎಂಬ ಪ್ರಶ್ನೆಗಳೂ ಏಳುತ್ತಿವೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅಂಬರೀಷ್ ಸಿದ್ದರಾಮಯ್ಯ ಕಾಂಗ್ರೆಸ್ Siddaramaiah Congress Ambareesh

Widgets Magazine

ಸುದ್ದಿಗಳು

news

ದಿನಕರನ್`ಗೆ ಮಧ್ಯರಾತ್ರಿ ದೆಹಲಿ ಪೊಲೀಸರ ಸಮನ್ಸ್

ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ವಿರುದ್ಧ ದೆಹಲಿ ಪೊಲೀಸರು ಮತ್ತೊಂದು ಸಮನ್ಸ್ ಜಾರಿಮಾಡಿದ್ದಾರೆ. ಪಕ್ಷದ ...

news

ಎಚ್.ಡಿ. ಕುಮಾರಸ್ವಾಮಿ ಮೇಲೆ ನೋಟಿನ ದಾಳಿ

ಮಂಡ್ಯ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೇಲೆ ಕಾರ್ಯಕರ್ತನೊಬ್ಬ ನೋಟುಗಳ ಕಂತೆ ಕಂತೆಯನ್ನು ...

news

ಸ್ವಾಭಿಮಾನದ ಕಿಚ್ಚು ಎಲ್ಲರಿಗಿಂತ ನನಗೆ ಹೆಚ್ಚು: ಸತೀಶ್ ಜಾರಕಿಹೊಳಿ

ಯಮಕನಮರಡಿ: ಸ್ವಾಭಿಮಾನದ ಕಿಚ್ಚು ಎಲ್ಲರಿಗಿಂತ ನನಗೆ ಹೆಚ್ಚಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ...

news

ಅಶ್ಲೀಲ ವೆಬ್‌ಸೈಟ್‌ನಲ್ಲಿ ಮೈಸೂರು ವಿವಿ ವಿದ್ಯಾರ್ಥಿನಿಯರ ಫೋಟೋ

ಮೈಸೂರು: ಅಶ್ಲೀಲ ವೆಬ್‌ಸೈಟ್‌ನಲ್ಲಿ ಮೈಸೂರು ವಿವಿ ವಿದ್ಯಾರ್ಥಿನಿಯರ ಫೋಟೋಗಳು ಪತ್ತೆಯಾಗಿದ್ದು, ...

Widgets Magazine