ಶಶಿಕಲಾಗೆ ವಿಐಪಿ ಟ್ರೀಟ್ ಮೆಂಟ್ ಕೊಡಲು ಸಿಎಂ ಸಿದ್ದರಾಮಯ್ಯನವರೇ ಸೂಚಿಸಿದ್ರಾ?! ಸಿಎಂ ಹೇಳಿದ್ದೇನು?

ಬೆಂಗಳೂರು, ಬುಧವಾರ, 7 ಮಾರ್ಚ್ 2018 (12:31 IST)

ಬೆಂಗಳೂರು: ಅಕ್ರಮ ಆಸ್ಥಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ  ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಗೆ ವಿಐಪಿ ಟ್ರೀಟ್ ಮೆಂಟ್ ನೀಡಲು ಸ್ವತಃ ಸಿಎಂ ಸೂಚಿಸಿದ್ರಾ?
 
ಈ ಬಗ್ಗೆ ತನಿಖಾಧಿಕಾರಿಗಳ ಮುಂದೆ ಡಿಜಿಪಿ ಸತ್ಯನಾರಾಯಣ ರಾವ್ ನೀಡಿದ ಹೇಳಿಕೆ ವಿವಾದಕ್ಕೀಡುಮಾಡಿದೆ. ಶಶಿಕಲಾಗೆ ಜೈಲಿನಲ್ಲಿ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳ ಹಿನ್ನಲೆಯಲ್ಲಿ ಸರ್ಕಾರ ವಿಶೇಷ ತನಿಖಾ ತಂಡ ನಿಯೋಜಿಸಿತ್ತು. ಈ ಬಗ್ಗೆ ಡಿಜಿಪಿಯವರನ್ನು ವಿಚಾರಣೆ ನಡೆಸಿದಾಗ ಸಿಎಂ ಸೂಚನೆಯಂತೆ ಶಶಿಕಲಾಗೆ ಹಾಸಿಗೆ ದಿಂಬು ನೀಡಲಾಗುತ್ತಿದೆ ಎಂದಿದ್ದರು.
 
ಈ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದು, ‘ತಮಿಳುನಾಡಿನಿಂದ ಬಂದ ನಿಯೋಗವೊಂದು ನನ್ನ ಬಳಿ ಶಶಿಕಲಾಗೆ ಕನಿಷ್ಠ ಸೌಲಭ್ಯವನ್ನೂ ಜೈಲಿನಲ್ಲಿ ನೀಡಲಾಗಿಲ್ಲ ಎಂದಿತ್ತು. ಹೀಗಾಗಿ ಡಿಜಿಪಿ ಸತ್ಯನಾರಾಯಣ ರಾವ್ ರನ್ನು ಕರೆದು ಜೈಲಿನ ಮ್ಯಾನ್ಯುವಲ್ ಪ್ರಕಾರ ಏನು ಸೌಲಭ್ಯ ಕೊಡಬಹುದೋ ಅದನ್ನು ಕೊಡಬಹುದು ಎಂದಿದ್ದೆ ಅಷ್ಟೇ. ವಿಶೇಷ ಸೌಲಭ್ಯ ಕೊಡಿ ಎಂದಿಲ್ಲ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೈಲಿನಲ್ಲಿರುವ ಶಶಿಕಲಾಗೆ ರಾಜಾತಿಥ್ಯ ನೀಡಲು ಹೇಳಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ-ಡಿಜಿಪಿ ಸತ್ಯನಾರಾಯಣರಾವ್ ಆರೋಪ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆಯಲ್ಲಿ ಜೈಲು ಸೇರಿರೋ ಶಶಿಕಲಾ ನಟರಾಜನ್‍ಗೆ ರಾಜಾತಿಥ್ಯ ನೀಡಲು ...

news

ಸಿರಿಯಾದ ಬಳಿ ರಷ್ಯಾ ವಿಮಾನ ಪತನ; 39 ಮಂದಿ ಸಾವು

ಬೇರೂತ್‌ : ರಷ್ಯಾದ ಸೇನಾ ಸರಕು ಸಾಗಣೆ ವಿಮಾನವೊಂದು ಸಿರಿಯದಲ್ಲಿನ ವಾಯು ನೆಲೆ ಸಮೀಪ ಪತನಗೊಂಡು ...

news

ವಾಜಪೇಯಿ, ಅಡ್ವಾಣಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು; ಸಿಎಂ ಸಿದ್ದರಾಮಯ್ಯ ಹೀಗ್ಯಾಕೆ ಟ್ವಿಟ್ ಮಾಡಿದ್ರು ಗೊತ್ತಾ…?

ಬೆಂಗಳೂರು: ಸಿಎಂ ನರಹಂತಕ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ ಹಿನ್ನೆಲೆ, ಬಿಜೆಪಿ ನಾಯಕರಿಗೆ ...

news

ನಮ್ಮ ಕೇಸ್ ಮೊದಲು ತಗೊಳ್ಳಿ ಎಂದ ಮೊಹಮ್ಮದ್ ನಲಪಾಡ್ ಪರ ವಕೀಲರಿಗೆ ನ್ಯಾಯಾಧೀಶರು ಕೊಟ್ಟ ಉತ್ತರವೇನು ಗೊತ್ತಾ?!

ಬೆಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿರುವ ಶಾಸಕ ...

Widgets Magazine
Widgets Magazine