‘ಸದ್ಯಕ್ಕೆ ಮೋದಿಗೆ ಸರಿಸಮ ಸಿದ್ದರಾಮಯ್ಯ, ಮುಂದೆ ಅವರೇ ಪ್ರಧಾನಿ ಆಗಲಿ’

ಬೆಂಗಳೂರು, ಶುಕ್ರವಾರ, 9 ಫೆಬ್ರವರಿ 2018 (16:19 IST)


ಬೆಂಗಳೂರು: ದೇಶದಲ್ಲಿ ಸದ್ಯಕ್ಕೆ ಮೋದಿಗೆ ಸರಿಸಮರಾದ ನಾಯಕರೆಂದರೆ ಸಿಎಂ ಸಿದ್ದರಾಮಯ್ಯ. ಮುಂದೊಂದು ದಿನ ಅವರೇ ದೇಶದ ಪ್ರಧಾನಿ ಆಗಲಿ. ಕರಿಕೋಟು ಹಾಕಿಕೊಂಡು ಕೆಂಪುಕೋಟೆಯಲ್ಲಿ ಧ್ವಜ ಹಾರಿಸುವುದಾದರೆ ನಾವೆಲ್ಲಾ ಬೆಂಬಲಿಸೋಣ ಎಂದು ಕನಕಗುರು ಪೀಠಾಧ್ಯಕ್ಷ ನಿರಂಜನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
 
ಸಿಎಂ ಸಿದ್ದರಾಮಯ್ಯಗೆ ಪ್ರಧಾನಿ ಆಗುವ ಶಕ್ತಿಯಿದೆ. ಮುಂದೊಂದು ದಿನ ಅವರೇ ಏಕೆ ಪ್ರಧಾನಿ ಆಗಬಾರದು? ಅವರಿಗೆ ಆ ಸಾಮರ್ಥ್ಯವಿದೆ. ಅವರ ಒಳ್ಳೆ ಕೆಲಸದಿಂದ ಮುಂದೊಂದು ದಿನ ಅವರು ಆ ಹುದ್ದೆಗೇರಿದರೆ ನಾವೆಲ್ಲಾ ಬೆಂಬಲಿಸೋಣ ಎಂದು ಸ್ವಾಮೀಜಿ ತಮ್ಮ ಸಮುದಾಯದವರಿಗೆ ಕರೆಕೊಟ್ಟಿದ್ದಾರೆ.
 
ಒಂದೆಡೆ ಸ್ವಾಮೀಜಿ ಈ ರೀತಿ ಹೇಳಿಕೆ ನೀಡಿದರೆ ಇನ್ನೊಂದೆಡೆ ಸ್ವತಃ ಕೂಡಾ ಪರೋಕ್ಷವಾಗಿ ತಮ್ಮ ಪ್ರಧಾನಿ ಪಟ್ಟದ ಗುರಿ ಹಂಚಿಕೊಂಡಿದ್ದಾರೆ. ‘ಮೋದಿಗೆ ಕರ್ನಾಟಕವನ್ನು ಗೆಲ್ಲುವುದು ಗುರಿಯಾದರೆ, ನಮಗೆ ದೇಶವೇ ಟಾರ್ಗೆಟ್’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
 
ಈ ಮೂಲಕ ಪರೋಕ್ಷವಾಗಿ ಸಿಎಂ ತಮ್ಮ ಪ್ರಧಾನಿ ಪಟ್ಟದ ಮೇಲಿರುವ ಆಸೆಯನ್ನು ಸೂಚಿಸಿದರು ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿಯಿಂದ ಐಟಿ ಮತ್ತು ಇಡಿ ದುರ್ಬಳಕೆ-ಕೆ.ಸಿ.ವೇಣುಗೋಪಾಲ್ ಆರೋಪ

ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಲೆ ಐಟಿ ಅಥವಾ ಇಡಿ ದಾಳಿ ವಿಚಾರ ಹಿನ್ನೆಲೆ, ಚುನಾವಣೆ ಲಾಭಕ್ಕಾಗಿ ಈ ...

news

ಸತತ 5 ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ

ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಬಿಸಿಯೂಟ ಕಾರ್ಯಕರ್ತೆಯರ ಹೋರಾಟ ಇನ್ನು ಮುಂದುವರಿದಿದೆ. ...

news

ಇನ್ನೂ ಆರಂಭವಾಗದ ವಿಧಾನಸಭೆ ಕಲಾಪ: ಕಾರಣವೇನು ಗೊತ್ತಾ?!

ಬೆಂಗಳೂರು: ರಾಜ್ಯ ವಿಧಾನಸಭೆ ಕಲಾಪ ಸಾಮಾನ್ಯವಾಗಿ 11 ಗಂಟೆಗೆಲ್ಲಾ ಪ್ರಾರಂಭವಾಗುತ್ತದೆ. ಆದರೆ ಇಂದು ಮಾತ್ರ ...

news

ಧರ್ಮಗಳನ್ನು ಒಡೆಯಬೇಡಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯವನ್ನು ಬೇರ್ಪಡಿಸಬೇಡಿ-ಯು.ಟಿ ಖಾದರ್

ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರಾವಳಿ ...

Widgets Magazine
Widgets Magazine