‘ಕೃಷ್ಣ ಮಠಕ್ಕೆ ನನ್ನನ್ನು ಯಾರೂ ಕರೆದಿಲ್ಲ, ಅದಕ್ಕೇ ಹೋಗಿಲ್ಲ’ ಸಿಎಂ ಸ್ಪಷ್ಟನೆ

ಮಂಗಳೂರು, ಸೋಮವಾರ, 20 ನವೆಂಬರ್ 2017 (09:20 IST)

ಮಂಗಳೂರು: ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ನಿನ್ನೆ ಉಡುಪಿಗೆ ಭೇಟಿ ನೀಡಿದ್ದ ಕೃಷ್ಣಮಠಕ್ಕೆ ಭೇಟಿ ಕೊಡದೇ ಇರುವುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
 

ಐದನೇ ಬಾರಿ ಉಡುಪಿಗೆ ಭೇಟಿ ನೀಡಿದ್ದರೂ ಒಮ್ಮೆಯೂ ಕೃಷ್ಣಮಠಕ್ಕೆ ಹೋಗದಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಿಎಂ ‘ನನ್ನನ್ನು ಯಾರೂ ಕೃಷ್ಣಮಠಕ್ಕೆ ಕರೆದಿರಲಿಲ್ಲ. ಅದಕ್ಕೇ ಹೋಗಿರಲಿಲ್ಲ’ ಎಂದಿದ್ದಾರೆ.
 
‘ನಾನು ಕೃಷ್ಣ ಮತ್ತು ಈಶ್ವರನ ಭಕ್ತ. ಕೃಷ್ಣ ಮಠಕ್ಕೆ ಹಿಂದೆ ಹೋಗಿದ್ದೆ. ಈಗ ಯಾರೂ ಕರೆದಿಲ್ಲ. ಅದಕ್ಕೇ ಹೋಗಲಿಲ್ಲ. ಉದ್ದೇಶಪೂರ್ವಕವಾಗಿ ಹೋಗಲಿಲ್ಲ, ಮಠದೊಂದಿಗೆ ಮನಸ್ತಾಪವಿದೆ ಎಂಬುದೆಲ್ಲಾ ಸುಳ್ಳು’ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ದೇವಸ್ಥಾನಕ್ಕೆ ಹೋಗುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು ಎಂದು ಸಿಎಂ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ನರೇಂದ್ರ ಮೋದಿ ಸರ್ಕಾರಕ್ಕೂ ಹಗರಣಗಳ ಮಸಿ ತಟ್ಟದೇ ಬಿಡಲ್ಲ’

ನವದೆಹಲಿ: ಹಗರಣ ಮುಕ್ತ ಸರ್ಕಾರ ಎಂದು ಬೀಗುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೂ ...

news

ವಿಶ್ವಸುಂದರಿಗೇ ಅವಮಾನ ಮಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್

ನವದೆಹಲಿ: 2017 ನೇ ಸಾಲಿನ ವಿಶ್ವಸುಂದರಿಯಾಗಿ ಆಯ್ಕೆಯಾದ ಭಾರತದ ಮಾನುಷಿ ಚಿಲ್ಲರ್ ಗೆ ಅಭಿನಂದಿಸುವ ...

news

ಖಾಸಗಿ ಆಸ್ಪತ್ರೆ ವಿಧೇಯಕ ಕತೆ ಏನು? ಸಚಿವರೊಂದಿಗೆ ಇಂದು ಸಿಎಂ ಮಹತ್ವದ ಸಭೆ

ಬೆಂಗಳೂರು: ಖಾಸಗಿ ವೈದ್ಯರ ಹಣೆಬರಹ ನಿರ್ಧರಿಸುವ ಖಾಸಗಿ ಆಸ್ಪತ್ರೆ ವಿಧೇಯಕ ತಿದ್ದುಪಡಿ ಮಾಡುವ ಕುರಿತಂತೆ ...

news

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗ್ತಾ? ದೆಹಲಿಯಲ್ಲಿ ಮಹತ್ವದ ಸಭೆ

ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಕಟ್ಟುವ ಬಗ್ಗೆ ದೆಹಲಿಯಲ್ಲಿ ಇಂದು ...

Widgets Magazine