‘ಮೀನು ಜತೆ ಕೋಳಿ ಮಾಂಸವೂ ತಿಂದು ಧರ್ಮಸ್ಥಳಕ್ಕೆ ಹೋಗಿದ್ದೆ. ಏನಿವಾಗ?’

ಬೆಂಗಳೂರು, ಮಂಗಳವಾರ, 31 ಅಕ್ಟೋಬರ್ 2017 (09:34 IST)

ಬೆಂಗಳೂರು: ಪ್ರಧಾನಿ ಮೋದಿ ನಿರಾಹಾರದಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಂತರ ಮೀನಿನೂಟ ಮಾಡಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿತ್ತು.


 
ಇದೀಗ ತಮ್ಮ ವಿರುದ್ಧದ ಟೀಕೆಗಳಿಗೆ ಟಾಂಗ್ ಕೊಟ್ಟಿರುವ ಸಿಎಂ ಸಿದ್ದರಾಮಯ್ಯ ‘ಮೀನು ಮಾತ್ರವಲ್ಲ, ಕೋಳಿ ಮಾಂಸವನ್ನೂ ತಿಂದು ದೇವಾಲಯಕ್ಕೆ ಹೋಗಿದ್ದೆ. ಆದರೆ ಗರ್ಭಗುಡಿಗೆ ಹೋಗಿರಲಿಲ್ಲ. ದೇವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದಿದ್ದವರು ಏನೇನೋ ಮಾತನಾಡುತ್ತಾರೆ’ ಎಂದು ಉತ್ತರಿಸಿದ್ದಾರೆ.
 
ಧರ್ಮಸ್ಥಳಕ್ಕೆ ಹೋಗಿದ್ದಾಗ ಧರ್ಮಾದಿಕಾರಿಗಳು ದೇವರ ದರ್ಶನ ಮಾಡಿಕೊಂಡು ಹೋಗಿ ಎಂದಿದ್ದರು. ಆದರೆ ನಾನು ಗರ್ಭಗುಡಿಗೆ ಪ್ರವೇಶಿಸದೇ ಹೊರಗಿನಿಂದಲೇ ನಮಸ್ಕಾರ ಮಾಡಿ ಬಂದೆ. ಹಾಗಾಗಿ ದೇಗುಲ ಹೇಗೆ ಅಪವಿತ್ರವಾದೀತು? ಎಂದು ಸಿಎಂ ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಾರತದ ವಿರುದ್ಧ ಚೀನಾ ‘ಕುರಿಗಾಹಿಗಳ’ ಅಸ್ತ್ರ!

ನವದೆಹಲಿ: ಡೋಕ್ಲಾಂ ವಿವಾದದ ನಂತರ ಪೆಟ್ಟು ತಿಂದ ಹಾವಿನಂತಾಡುತ್ತಿರುವ ನೆರೆಯ ಚೀನಾ ಎಲ್ಲೆಲ್ಲಿ ಸಾಧ್ಯವೋ ...

news

ಹೆಂಡ್ತಿ ಸತ್ತಿದ್ದಾಳೆಂದು ಸರೆಂಡರ್ ಆದ: ಸ್ಥಳಕ್ಕೆ ಬಂದ ಪೊಲೀಸರಿಗೆ ಬಿಗ್ ಶಾಕ್…!

ಬೆಂಗಳೂರು: ಕುಡಿದ ಮತ್ತಲ್ಲಿ ಹೆಂಡತಿಯನ್ನು ಹತ್ಯೆ ಮಾಡಿದ್ದೇನೆ ಎಂದು ಪತಿ ಪೊಲೀಸ್ ಠಾಣೆಗೆ ಹೋಗಿ ...

news

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು: ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು, ಬಹುಭಾಷಾ ಗಾಯಕ ಯೇಸುದಾಸ್, ನಟ ...

news

ಹೊಯ್ಸಳ ಪೊಲೀಸ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಬೆಂಗಳೂರು: ದುಷ್ಕರ್ಮಿಗಳ ತಂಡ ಜಾಲಹಳ್ಳಿ ಪೊಲೀಸ್ ಹೊಯ್ಸಳ ಸಿಬ್ಬಂದಿ ಮೇಲೆ ದಾಳಿ ಮಾಡಿರುವ ಘಟನೆ ನಿನ್ನೆ ...

Widgets Magazine
Widgets Magazine