ಆರೋಪ ಬಂದ ಮಾತ್ರಕ್ಕೆ ರಾಜೀನಾಮೆ ನೀಡಿದ್ರೆ ವಿಧಾನಸೌಧ ಖಾಲಿಯಾಗುತ್ತೆ: ದೇಶಪಾಂಡೆ

ಕಲಬುರ್ಗಿ, ಶನಿವಾರ, 28 ಅಕ್ಟೋಬರ್ 2017 (13:39 IST)

Widgets Magazine

ಕಲಬುರ್ಗಿ: ಸಚಿವ ಜಾರ್ಜ್ ಮೇಲೆ ಸಿಬಿಐ ಎಫ್ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಚಿವ ದೇಶಪಾಂಡೆ ಹೇಳಿದ್ದಾರೆ.


ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಿಎಂ ಕೈಗೊಂಡ ತೀರ್ಮಾನ ಸರಿಯಾಗಿಯೆ ಇದೆ. ಜಾರ್ಜ್ ವಿರುದ್ಧ ಈಗಾಗಲೇ ಬಿ ರಿಪೋರ್ಟ ಸಲ್ಲಿಸಲಾಗಿದೆ. ಆರೋಪ ಬಂದ ಮಾತ್ರಕ್ಕೆ ರಾಜೀನಾಮೆ ನೀಡಿದ್ರೆ ವಿಧಾನಸೌಧ ಖಾಲಿಯಾಗುತ್ತೆ. ಕೇಂದ್ರದ ಹತ್ತಾರು ಮಂತ್ರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಲವು ಕೇಂದ್ರ ಸಚಿವರು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಮೊದಲು ಅವರೆಲ್ಲರಿಂದ ರಾಜೀನಾಮೆ ಪಡೆದು ನಂತರ ಬೇಕಾದ್ರೆ ಬಿಜೆಪಿ ಮಾತನಾಡಲಿ. ಗಾಜಿನ ಮನೆಯಲ್ಲಿದ್ದವರು ಬೇರೆಯವರ ಮೇಲೆ ಕಲ್ಲೆಸೆಯುವ ಮುನ್ನ ಯೋಚಿಸಬೇಕು ಎಂದರು.

ಸಂಸದ ಮಲ್ಲಿಕಾರ್ಜುನ ಖರ್ಗೆಗೆ ಸಾಕಷ್ಟು ವರ್ಷದ ಹಿಂದೆಯೇ ಸಿಎಂ ಸ್ಥಾನ ಸಿಗಬೇಕಿತ್ತು. ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಜತೆಗೆ ಸಾಕಷ್ಟು ಅನುಭವ ಹೊಂದಿದ್ದಾರೆ. ಸಿಎಂ ಆಗಲು ಅವಕಾಶ ಮುಖ್ಯವಲ್ಲ, ಅದೃಷ್ಟವೂ ಬೇಕು. ಸಿದ್ದರಾಮಯ್ಯಗೆ ಅದೃಷ್ಟ ಇತ್ತು ಸಿಎಂ ಆದರು. ಚುನಾವಣೆ ಮುಗಿದ ನಂತರ ಯಾರು ಸಿಎಂ ಆಗ್ತಾರೆ ಎನ್ನುವುದರ ಬಗ್ಗೆ ಚರ್ಚೆ ನಡೆಯಲಿದೆ ಎಂದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಕ್ಕಳಾಗಲಿಲ್ಲ ಎಂದು ಪತ್ನಿಯನ್ನೇ ಕೊಂದ ಪಾಪಿ ಪತಿ

ಕಲಬುರ್ಗಿ: ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ...

news

ಸಿಎಂ, ಆರೆಸ್ಸೆಸ್, ಬಿಜೆಪಿ ನಡುವೆ ಒಳಒಪ್ಪಂದ: ಎಚ್ ವಿಶ್ವನಾಥ್ ಆರೋಪ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಘಪರಿವಾರ ಮತ್ತು ಬಿಜೆಪಿ ನಡುವೆ ಒಳಒಪ್ಪಂದವಿದೆ ಎಂದು ಜೆಡಿಎಸ್ ...

news

ಬಿಜೆಪಿಗೆ ಗುಡ್‌ಬೈ ಹೇಳಿದ ಮಾಜಿ ಸಂಸದ, ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಮೈಸೂರು: ಬಿಜೆಪಿ ಪಕ್ಷದ ಹಿರಿಯ ನಾಯಕರ ನಿರ್ಲಕ್ಷ್ಯಧೋರಣೆಯಿಂದ ಬೇಸತ್ತು ಮಾಜಿ ಸಂಸದ ಸಿ.ಎಚ್.ವಿಜಯ್ ...

news

ಸೆಕ್ಯೂರಿಟಿ ಗಾರ್ಡ್, ಆತನ ಪತ್ನಿ ಮೇಲೆ ಹಲ್ಲೆ ಮಾಡಿದ ಮೇಯರ್…?

ಮಂಗಳೂರು: ಕರಾಟೆ ಚಾಂಪಿಯನ್ ಮಂಗಳೂರು ಮೇಯರ್ ಕವಿತಾ ಸನಿಲ್ ತಾವು ನೆಲೆಸಿರುವ ಅಪಾರ್ಟ್ ಮೆಂಟ್ ನ ...

Widgets Magazine