ಭೂವಿವಾದಗಳಿಂದ ದೂರವಿರಿ: ಪೊಲೀಸರಿಗೆ ಸಿಎಂ ವಾರ್ನಿಂಗ್

ಬೆಂಗಳೂರು, ಶುಕ್ರವಾರ, 5 ಮೇ 2017 (10:43 IST)

Widgets Magazine

ಭೂ ವಿವಾದಗಳನ್ನು ಇತ್ಯರ್ಥಗೊಳಿಸುವಲ್ಲಿ ಪೊಲೀಸರು ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವುದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.
 
ಭೂ ವಿವಾದಗಳನ್ನು ಬಲಪ್ರಯೋಗವಾಗಿ ಇತ್ಯರ್ಥಗೊಳಿಸಲು ಪೊಲೀಸರು ಮಧ್ಯಪ್ರವೇಶಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಪೊಲೀಸರ ವಿರುದ್ಧ ನಿರಂತರವಾಗಿ ದೂರುಗಳು ಬರುತ್ತಿವೆ. ಇದರಿಂದ ಸರಕಾರಕ್ಕೆ ಕೆಟ್ಟಹೆಸರು ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  
 
ಭೂ ವಿವಾದಗಳಲ್ಲಿ ತಲೆತೂರಿಸುವುದು ಪೊಲೀಸರ ಕೆಲಸವಲ್ಲ. ಪೊಲೀಸರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ವೈಟ್‌ಫೀಲ್ಡ್ ಪ್ರದೇಶ ಐಟಿ ಕಾರಿಡಾರ್ ಆಗಿರುವುದರಿಂದ ಉದ್ಯೋಗಿಗಳು ರಾತ್ರಿ ಕೂಡಾ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ, ಪೊಲೀಸರು ರಾತ್ರಿ ವೇಳೆಯಲ್ಲಿ ಜಾಗರೂಕರಾಗಿರಬೇಕು ಎಂದು ಕರೆ ನೀಡಿದರು.
 
ಪೊಲೀಸರು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜನತೆ ಬಯಸುವುದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪೊಲೀಸರಿಗೆ ಸಲಹೆ ನೀಡಿದರು.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಎಚ್.ವಿಶ್ವನಾಥ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲ್ಲ: ಎಚ್.ಎಂ.ರೇವಣ್ಣ

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ...

news

ಶಾಸಕರ ಅಧ್ಯಯನ ವಿದೇಶ ಪ್ರವಾಸಕ್ಕೆ ಬ್ರೇಕ್: ಕೋಳಿವಾಡ

ಬೆಂಗಳೂರು: ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದ ಶಾಸಕರ ಪ್ರವಾಸಕ್ಕೆ ಬ್ರೇಕ್ ...

news

ಜೆಡಿಎಸ್‌ನೊಂದಿಗೆ ಯಾವುದೇ ಮೈತ್ರಿಯಿಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿಯಾಗುವುದಿಲ್ಲ ಎಂದು ಸಿಎಂ ...

news

ಯಡಿಯೂರಪ್ಪಗೆ ಸೆಡ್ಡು ಹೊಡೆಯಲು ಈಶ್ವರಪ್ಪ ಮಾಸ್ಟರ್ ಪ್ಲಾನ್

ಬೆಂಗಳೂರು: ಪ್ರಧಾನಿ ಮೋದಿಯವರ ಕಾರ್ಯಕ್ರಮಗಳನ್ನು ರಾಯಣ್ಣ ಬ್ರಿಗೇಡ್ ಮೂಲಕ ಅಹಿಂದ ವರ್ಗಗಳ ತಲುಪಿಸಿ ...

Widgets Magazine Widgets Magazine