ಸಮುದಾಯ ಭವನ ಅಕ್ರಮ ನಿರ್ಮಾಣ: ಹೋರಾಟ

ಹಾವೇರಿ, ಬುಧವಾರ, 11 ಜುಲೈ 2018 (17:38 IST)


ಗ್ರಾಮ ಪಂಚಾಯಿತಿ ಮತ್ತು ಜನ ಪ್ರತಿನಿಧಿಗಳಿಂದ ಮಹಾ ಮೋಸವಾಗಿದೆಂದು ಹಾವೇರಿ ಜಿಲ್ಲೆಯ ಕಬ್ಬುರಿನ ಸಿದ್ದೇಶ್ವರ  ತಾಂಡಾದಲ್ಲಿ ಗ್ರಾಮಸ್ಥರು  ಪ್ರತಿಭಟನೆ ನಡೆಸಿದರು. ಹಾವೇರಿ ಜಿಲ್ಲೆಯ ಕಬ್ಬೂರಿನ ಸಿದ್ದೇಶ್ವರ ತಾಂಡಾದಲ್ಲಿ ದೇವಸ್ಥಾನದ ಸರ್ವೆ ನಂಬರ್ ತೋರಿಸಿ ಸರ್ಕಾರಿ ಗೋಮಾಳದ ಜಾಗದಲ್ಲಿ ಗ್ರಾಮ ಪಂಚಾಯತಿ ಮತ್ತು ಜನ ಪ್ರತಿನಿಧಿಗಳು ಅಕ್ರಮವಾಗಿ ಸಮುದಾಯ ಭವನವನ್ನು  ನಿರ್ಮಾಣ ಮಾಡಿ, ಜನರಿಗೆ ಮೋಸವನ್ನು ಮಾಡಿದ್ದಾರೆಂದು ಗ್ರಾಮಸ್ಥರು  ಆರೋಪಿಸಿದ್ರು.

ಗ್ರಾಮ ಪಂಚಾಯಿತಿಯವರು ಲಕ್ಷಾಂತರ ರೂಪಾಯಿ ಅನುದಾನ ಪಡೆದು ನಿರ್ಮಾಣ ಮಾಡಿದ್ದು, ಸರ್ವೆ ನಂಬರ್ 131 ರ ಸರ್ವೆ ನಂಬರ್ ನಲ್ಲಿ ದೇವಸ್ಥಾನವನ್ನು ಬಿಟ್ಟು ಕಿಂಚಿತ್ತು ಜಾಗವಿಲ್ಲದ ದೇವಸ್ಥಾನ ತೋರಿಸಿ ಲಕ್ಷಾಂತರ ರೂಪಾಯಿ ಹಣವನ್ನು ಪಡೆದು 216 ರ ಸರ್ವೆ ನಂಬರ್ ನ ಸರ್ಕಾರಿ  ಗೋಮಾಳ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಿದ್ದಾರೆ.
 
 
ಹೀಗೆ ಲಕ್ಷಾಂತರ ಹಣವನ್ನು ಖರ್ಚು ಮಾಡಿ ಅಭಿವೃಧ್ದಿ ಹೆಸರಿನಲ್ಲಿ ಗ್ರಾಮ ಪಂಚಾಯಿತಿಯು ಅಕ್ರಮವಾಗಿ  ಸಮುದಾಯ ಭವನ  ನಿರ್ಮಾಣ ಮಾಡಿ ಗ್ರಾಮಸ್ಥರಿಗೆ ಮೋಸ ಮಾಡಿ ಗೊಲ್ ಮಾಲ್ ಮಾಡುತ್ತಿದ್ದಾರೆ ಎಂದು ನಾಗರಿಕರು ಜನಪ್ರತಿನಿಧಿಗಳ ವಿರುದ್ದ ಪ್ರತಿಭಟನೆ ನಡೆಸಿದ್ರು. ಸಮುದಾಯ ಭವನ ಕಟ್ಟಿಸಿ ಅಂತಾ ಕೇಳಿದ್ರೆ ಹೀಗೆ ಸರ್ಕಾರಿ ಗೋಮಾಳದ ಜಾಗದಲ್ಲಿ ಭವನ ಕಟ್ಟಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನಾದರೂ ಗ್ರಾಮ ಪಂಚಾಯತಿಯವರು ಇದರ ಬಗ್ಗೆ ಪರೀಶಿಲನೆ ನಡೆಸಿ ಸೂಕ್ತವಾದ ಕ್ರಮವನ್ನು  ತೆಗೆದುಕೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಗ್ರಾಮಸ್ಥರ ಪ್ರತಿಭಟನೆ ಅಕ್ರಮ ಜನಪ್ರತಿನಿಧಿಗಳು Illegal Representatives Villagers Protest

ಸುದ್ದಿಗಳು

ಮೋಸ ಹೋದ ಚಿನ್ನದ ವ್ಯಾಪಾರಿ: ಸೆಲ್ಫಿ ವಿಡಿಯೋ ಸಾವಿನ ಸುಳಿವು ನೀಡಿ ಕಾಣೆ

ತನ್ನ ಆಸ್ತಿಯನ್ನ ಅಡವಿಟ್ಟು ಹಣ ಪಡೆಯದೆ ಮೋಸ ಹೋದ ಚಿನ್ನದ ವ್ಯಾಪಾರಿಯೊಬ್ಬ ಮನನೊಂದು ವಾಟ್ಸ್ ಆಪ್ ನಲ್ಲಿ ...

news

ಉಚಿತ ಬಸ್‍ಗಾಗಿ ಪ್ರತಿಭಟನೆ; ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿಗಳು ಹಾಜರ್

ಉಚಿತ ಬಸ್ ಪಾಸ್ ಗಾಗಿ ಪೊಲೀಸರ ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿ ಮುಖಂಡರು ಮಾಧ್ಯಮಗಳ ಮುಂದೆ ...

news

ಶಾಲಾ ಮಕ್ಕಳಿಂದ ಶೌಚಾಲಯ ಕ್ಲಿನಿಂಗ್

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಒಂದು ಕಡೆ ಆದರೆ ಇನ್ನೊಂದು ...

news

ಬಾಳೆ ಬುಡದಲ್ಲಿ ಆದ ಪವಾಡವಾದ್ರೂ ಏನು ಗೊತ್ತಾ?

ಇದು ಪವಾಡ ಕ್ಷೇತ್ರ ಅನ್ನೋದಿಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಹೌದು ಅಂಥ ಪವಾಡ ಕ್ಷೇತ್ರ ಯಾವುದು ಆ ...

Widgets Magazine