ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐಗೆ ದೂರು

ಬೆಂಗಳೂರು, ಶನಿವಾರ, 5 ಆಗಸ್ಟ್ 2017 (19:01 IST)

ಐಟಿ ದಾಳಿಯ ನೆನಪು ಮಾಸುವ ಮುನ್ನವೇ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐಗೆ ದೂರು ಸಲ್ಲಿಸಲಾಗಿದೆ.
 
ಬಿಡದಿಯ ಗುರುಪ್ರಸಾದ್ ಎನ್ನುವವರು ಸಿಬಿಐಗೆ ದೂರು ಸಲ್ಲಿಸಿದ್ದು, ಸಚಿವ ಶಿವಕುಮಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿ ಅಕ್ರಮ ಸಂಪತ್ತು ಸಂಗ್ರಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
 
ಸಚಿವ ಶಿವಕುಮಾರ್ ಆದಾಯ ಮೀರಿ ಆಸ್ತಿ ಗಳಿಸಿದ್ದರಿಂದ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವಂತೆ ಸಿಬಿಐಗೆ ಮನವಿ ಮಾಡಿ ದೆಹಲಿಯ ಕಚೇರಿ ಮತ್ತು ಬೆಂಗಳೂರಿನ ಸಿಬಿಐ ಎಸಿಬಿಗೆ ದೂರು ನೀಡಿದ್ದಾರೆ.
 
ಕಳೆದ ಎರಡು ದಿನಗಳ ಹಿಂದೆ ಸಚಿವ ಶಿವಕುಮಾರ್ ವಿರುದ್ಧ ಇದೇ ಗುರುಪ್ರಸಾದ್ ಎನ್ನುವವರು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು.
 
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನಿವಾಸಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಸುಮಾರು 76 ಗಂಟೆಗಳ ತನಿಖೆ ನಡೆಸಿ ದಾಳಿಯನ್ನು ಅಂತ್ಯಗೊಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಾಯಿ ಗೌರಮ್ಮ ಪರವಾಗಿ ಸಿಎಂ ಕ್ಷಮೆಯಾಚಿಸಿದ ಡಿ.ಕೆ.ಶಿವಕುಮಾರ್

ಬೆಂಗಳೂರು: ಐಟಿ ದಾಳಿಯ ಕುರಿತಂತೆ ವಾಗ್ದಾಳಿ ನಡೆಸಿದ್ದ ತಾಯಿ ಗೌರಮ್ಮ ಪರವಾಗಿ ಸಿಎಂ ಸಿದ್ದರಾಮಯ್ಯ ಅವರ ...

news

ಮಹದಾಯಿ ವಿವಾದ ಬಗೆಹರಿಸಲು ಮೋದಿ ಸೂತ್ರ

ಕರ್ನಾಟಕದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿವಾದಿತ ಮಹದಾಯಿ ಯೋಜನೆಗೆ ಪರಿಹಾರ ಕಂಡು ...

news

ಆಗಸ್ಟ್ 16ರಂದು ಇಂದಿರಾ ಕ್ಯಾಂಟೀನ್`ಗೆ ಚಾಲನೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್`ಗೆ ಆಗಸ್ಟ್ 16ರಂದು ಚಾಲನೆ ಸಿಗಲಿದೆ ಎಂದು ...

news

ಸೋನಿಯಾರಿಂದ ರಾಖಿ ಕಟ್ಟಿಸಿಕೊಳ್ಳಲಿರುವ ಗುಜರಾತ್ ಕಾಂಗ್ರೆಸ್ ಶಾಸಕರು

ಬೆಂಗಳೂರು: ಗುಜರಾತ್ ಕಾಂಗ್ರೆಸ್ ಶಾಸಕರು ನಾಳೆ ದೆಹಲಿಗೆ ತೆರಳುತ್ತಿದ್ದು, ನಾಡಿದ್ದು ರಕ್ಷ ಬಂಧನ ಅಂಗವಾಗಿ ...

Widgets Magazine