ಬಿಜೆಪಿ ನಾಯಕರಿಂದ ಆರ್.ಅಶೋಕ್ ವಿರುದ್ಧವೇ ಹೈಕಮಾಂಡ್‌ಗೆ ದೂರು

ಬೆಂಗಳೂರು, ಶನಿವಾರ, 4 ನವೆಂಬರ್ 2017 (12:15 IST)

ಬಿಜೆಪಿ ಪರಿವರ್ತನಾ ಯಾತ್ರೆಯ ಅವ್ಯವಸ್ಥೆಗೆ ಮಾಜಿ ಸಚಿವ ಆರ್.ಅಶೋಕ್ ಕಾರಣವೆಂದು ಬಿಜೆಪಿ ಮುಖಂಡರೇ ಹೈಕಮಾಂಡ್‌ಗೆ ದೂರು ನೀಡಿದ್ದಾರೆ.
ಬಿಜೆಪಿ ಪರಿವರ್ತನೆ ಯಾತ್ರೆಯಲ್ಲಿ ಎದುರಾದ ಹಲವು ದೋಷಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಆರ್.ಅಶೋಕ್ ನಡುವಿನ ಸಮನ್ವಯದ ಕೊರತೆ ಮೂಲ ಕಾರಣ ಎನ್ನಲಾಗುತ್ತಿದೆ. ಮತ್ತೊಂದೆಡೆ ಕರಂದ್ಲಾಜೆ ಸರ್ವಾಧಿಕಾರಿ ಧೋರಣೆಯಿಂದ ಯಾತ್ರಾ ಕಾರ್ಯಕ್ರಮ ವಿಫಲವಾಗಿದೆ ಎಂದು ಅಶೋಕ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಹಿರಿಯ ನಾಯಕ ಬಿ.ಎಲ್.ಸಂತೋಷ್ ಅವರನ್ನು ಕಾರ್ಯಕ್ರಮದಿಂದ ದೂರವಿಟ್ಟಿರುವುದು ಕೂಡಾ ಕಾರ್ಯಕ್ರಮದ ಅವ್ಯವಸ್ಥೆಗೆ ಕಾರಣವೆಂದು ಹೇಳಲಾಗುತ್ತಿದೆ. ಆದರೆ, ಇದೀಗ ಅಶೋಕ್ ಅವರಿಗೆ ವಿಫಲತೆಯ ಹೊಣೆಪಟ್ಟಿ ಹೊರಿಸಿ ಹೈಕಮಾಂಡ್‌ಗೆ ದೂರು ನೀಡಲಾಗಿದೆ ಎನ್ನಲಾಗುತ್ತಿದೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ ಮತ್ತು ಬೆಂಗಳೂರಿನ ಶಾಸಕರು ಅಶೋಕ್ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

40ರ ಮಹಿಳೆ ಜತೆ 20 ವರ್ಷದ ಹುಡುಗನ ಲವ್ವಿಡವ್ವಿ..!

ಬೆಂಗಳೂರು: ನಲವತ್ತರ ಆಂಟಿಗಾಗಿ 20 ವರ್ಷದ ಹುಡುಗ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

news

ಸರ್ಕಾರದ ವಿರುದ್ಧ ಬಿಎಸ್ ವೈ ವಾಗ್ದಾಳಿ

ಬೆಂಗಳೂರು: ಖಾಸಗಿ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸರ್ಕಾರದ ...

news

ವಿವಾದಾತ್ಮಕ ಹೇಳಿಕೆ: ಕಮಲ್ ಹಾಸನ್ ವಿರುದ್ಧ ಕೇಸ್, ಇಂದೇ ವಿಚಾರಣೆ

ಉತ್ತರ ಪ್ರದೇಶ: ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ವಾರಣಾಸಿ ಕೋರ್ಟ್ ನಲ್ಲಿ ಕೇಸ್ ದಾಖಲಾಗಿದ್ದು, ಇಂದೇ ...

news

ಬಿಎಸ್ ವೈಗೆ ಜನರೇ ಬುದ್ಧಿ ಕಲಿಸುತ್ತಾರೆ: ಸಿಎಂ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಾವು ಏನೇ ಹೇಳಿದರೂ ಕೇಳುವುದಿಲ್ಲ. ಅವರಿಗೆ ಜನರೇ ...

Widgets Magazine
Widgets Magazine