ಐಟಿ ದಾಳಿ: ಕಾಂಗ್ರೆಸ್‌ನಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು

ಬೆಂಗಳೂರು, ಬುಧವಾರ, 2 ಆಗಸ್ಟ್ 2017 (17:33 IST)

ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆಯದೆ ಕೇಂದ್ರದ ಸಿಆರ್‌ಪಿಎಫ್ ಭದ್ರತಾ ಪಡೆಗಳ ಸಹಾಯ ಪಡೆದಿದ್ದಾರೆ ಎಂದು ಕಾಂಗ್ರೆಸ್, ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.
 
ಕಾನೂನಿನ ಪ್ರಕಾರ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆಯಬೇಕಾಗುತ್ತದೆ. ಆದರೆ, ಸ್ಥಳೀಯ ಪೊಲೀಸರ ನೆರವು ಪಡೆಯದೇ ಕೇಂದ್ರದ ಭದ್ರತಾ ಪಡೆಗಳ ನೆರವು ಪಡೆದಿರುವುದು ಕಾನೂನುಬಾಹಿರ ಎಂದು ಕಿಡಿಕಾರಿದೆ.
 
ಸಿಎಂ ಸಿದ್ದರಾಮಯ್ಯ, ಐಟಿ ದಾಳಿಯ ವಿರುದ್ಧ ವಾಗ್ದಾಳಿ ನಡೆಸಿ ಕೇಂದ್ರ ಸರಕಾರದ ಕುಮ್ಮಕ್ಕಿನಿಂದಾಗಿ ಕೇಂದ್ರ ಭದ್ರತಾ ಪಡೆಗಳ ನೆರವು ಪಡೆದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿಯಿಂದಾಗಿ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ಕೇಂದ್ರ ಚುನಾವಣೆ ಆಯೋಗ ಐಟಿ ದಾಳಿ Congress Cm Siddaramaiah It Raid Central Election Comission

ಸುದ್ದಿಗಳು

news

ಐಟಿ ದಾಳಿಗೆ ಭಯಪಡುವ ಅಗತ್ಯವಿಲ್ಲ: ಸಿಎಂಗೆ ವೇಣುಗೋಪಾಲ್ ಅಭಯ

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿಗೆ ಭಯಪಡುವ ಅಗತ್ಯವಿಲ್ಲ ...

news

11 ಕೋಟಿ ರೂಪಾಯಿ ಸಿಕ್ಕಿದೆ ಎಂಬ ಮಾಹಿತಿ ತಪ್ಪು: ಐಟಿ ಅಧಿಕಾರಿಗಳು

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ನವದೆಹಲಿಯ ನಿವಾಸದಲ್ಲಿ 11 ಕೋಟಿ ರೂಪಾಯಿಗಳು ಸಿಕ್ಕಿವೆ ಎನ್ನುವ ...

news

ಇಂತಹ ಸಾಕಷ್ಟು ಆಟಗಳನ್ನು ನೋಡಿದ್ದೇನೆ: ಐಟಿ ದಾಳಿಗೆ ಗೌಡರ ಪ್ರತಿಕ್ರಿಯೆ

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ...

news

ಐಟಿ ದಾಳಿಯ ಸಂದರ್ಭ ಚರ್ಚೆಗೆ ದಾರಿ ಮಾಡಿಕೊಟ್ಟಿದೆ: ಸಂತೋಷ್ ಹೆಗ್ಡೆ

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವವರ ಮೇಲೆ ಆದಾಯ ತೆರಿಗೆ ದಾಳಿ ನಡೆಸುವುದು ...

Widgets Magazine