ಬಿಬಿಎಂಪಿ ಪಟಾಕಿ ಸಿಡಿಸಿದ ಕಾಂಗ್ರೆಸ್, ಕಸಗುಡಿಸಿದ ಬಿಜೆಪಿ

ಬೆಂಗಳೂರು, ಗುರುವಾರ, 28 ಸೆಪ್ಟಂಬರ್ 2017 (13:33 IST)

Widgets Magazine

ಬಿಬಿಎಂಪಿಯ 51ನೇ ಮೇಯರ್ ಆಗಿ ಸಂಪತ್‌ರಾಜ್, ಉಪಮೇಯರ್ ಆಗಿ ಪದ್ಮಾವತಿ ನರಸಿಂಹಮೂರ್ತಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರೆ, ಸಿಡಿಸಿದ ಪಟಾಕಿಯ ಕಸ ಗುಡಿಸಿ ಬಿಜೆಪಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.
ಬಿಬಿಎಂಪಿ ಕಚೇರಿಯ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ನಾಯಕನ ಆಯ್ಕೆಯ ಸಂಭ್ರಮಾಚರಣೆಯಲ್ಲಿ ತೊಡಗಿ ಮನಬಂದಂತೆ ಪಟಾಕಿ ಸಿಡಿಸಿದ್ದರಿಂದ ಭಾರಿ ಕಸ ಬಿದ್ದಿತ್ತು. ಬಿಬಿಎಂಪಿ ಮೇಯರ್ ಆಯ್ಕೆ ವಿರೋಧಿಸಿ ಸಭಾತ್ಯಾಗ ಮಾಡಿದ್ದ ಬಿಜೆಪಿ ಸದಸ್ಯರು ಕಸ ಗುಡಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
 
ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭ್ ರೆಡ್ಡಿ ನೇತೃತ್ವದಲ್ಲಿ, ಬಿಜೆಪಿ ಕಸಗುಡಿಸಿ ಮೇಯರ್ ಆಯ್ಕೆಯನ್ನು ವಿರೋಧಿಸಿತು. ನಕಲಿ ಮತದಾನ ಮೂಲಕ ಮೇಯರ್ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕಾಂಗ್ರೆಸ್ ಬಿಜೆಪಿ ಬಿಬಿಎಂಪಿ ಪ್ರತಿಭಟನೆ Congress Bjp Bbmp Protest

Widgets Magazine

ಸುದ್ದಿಗಳು

news

ನಾಡಹಬ್ಬ ದಸರಾಗೆ ಕ್ಷಣಗಣನೆ… ಕ್ಯಾಪ್ಟನ್ ಅರ್ಜುನನಿಗೆ ಭರ್ಜರಿ ತಾಲೀಮು

ಮೈಸೂರು: ವಿಶ‍್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇನ್ನೆರಡು ದಿನ ಮಾತ್ರ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ...

news

ಬಿಬಿಎಂಪಿ ಅಡಳಿತ ಪಕ್ಷದ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಬಿಬಿಎಂಪಿ ಅಡಳಿತ ಪಕ್ಷದ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ...

news

ಬಿಬಿಎಂಪಿ ಮೇಯರ್ ಆಗಿ ಸಂಪತ್‌ರಾಜ್, ಉಪಮೇಯರ್ ಪದ್ಮಾವತಿ ಆಯ್ಕೆ

ಬೆಂಗಳೂರು: ಬಿಬಿಎಂಪಿ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಸಂಪತ್‌ರಾಜ್, ಉಪಮೇಯರ್ ಆಗಿ ಜೆಡಿಎಸ್ ಪಕ್ಷದ ...

news

ಅರಮನೆಯಲ್ಲಿ ಯದುವೀರ್ ಒಡೆಯರ್ ರಿಂದ ಸರಸ್ವತಿ ಪೂಜೆ

ಮೈಸೂರು: ನವರಾತ್ರಿಯ 7ನೇ ದಿನವಾದ ನಿನ್ನೆ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಮೈಸೂರು ಮಹಾ ಸಂಸ್ಥಾನದ ...

Widgets Magazine