ಕಾಂಗ್ರೆಸ್ ಸರಕಾರ ಹಗಲು ದರೋಡೆಯಲ್ಲಿ ತೊಡಗಿದೆ: ಬಿಎಸ್‌ವೈ

ಬೆಂಗಳೂರು, ಮಂಗಳವಾರ, 12 ಸೆಪ್ಟಂಬರ್ 2017 (16:00 IST)

ಕಾಂಗ್ರೆಸ್ ಸರಕಾರ ಹಗಲು ದರೋಡೆಯಲ್ಲಿ ತೊಡಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇತೃತ್ವದ ಸರಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆಯಿಲ್ಲವಾಗಿದೆ. ಭ್ರಷ್ಟರಿಗೆ ಮಾತ್ರೆ ಮಣೆಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ನಗರಾಭಿವೃದ್ಧಿ ಸಚಿವ.ಕೆ.ಜೆ.ಜಾರ್ಜ್ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಒಹಿಸಿ ವ್ಯವಸ್ಥಿತವಾಗಿ ಸಾಕ್ಷ್ಯಗಳನ್ನು ನಾಶಪಡಿಸುತ್ತಿದೆ. ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೂ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕಾಂಗ್ರೆಸ್ ಬಿಜೆಪಿ ಯಡಿಯೂರಪ್ಪ ಕೆ.ಜೆ.ಜಾರ್ಜ್ ಸಿಎಂ ಸಿದ್ದರಾಮಯ್ಯ Congress Bjp Yeddyurappa Cm Siddaramaiah K.j.george

ಸುದ್ದಿಗಳು

news

ಜೆಡಿಎಸ್ ಸದಸ್ಯರಿಂದ ಮೇಯರ್ ಸ್ಥಾನಕ್ಕಾಗಿ ಒತ್ತಡ: ಕುಮಾರಸ್ವಾಮಿ

ಬೆಂಗಳೂರು: ಬಿಬಿಎಂಪಿಯ ಜೆಡಿಎಸ್ ಸದಸ್ಯರು ಮೇಯರ್ ಸ್ಥಾನ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಾಜಿ ...

news

ಗಣಪತಿ ಸಾವಿಗೆ ನ್ಯಾಯ ಮುಖ್ಯವೋ, ರಾಜೀನಾಮೆ ಮುಖ್ಯವೋ: ಬಿಎಸ್‌ವೈಗೆ ಚಾರ್ಜ್ ತರಾಟೆ

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ.ಗಣಪತಿ ಸಾವಿಗೆ ನ್ಯಾಯ ಮುಖ್ಯವೋ ರಾಜೀನಾಮೆ ಮುಖ್ಯವೋ ಎಂದು ನಗರಾಭಿವೃದ್ಧಿ ...

news

ಇಡೀ ದೇಶದಲ್ಲಿಯೇ ಸಿಎಂ ಸಿದ್ದರಾಮಯ್ಯ ಬಡವರ ಸಿಎಂ: ಸಚಿವ ಲಾಡ್

ಬಳ್ಳಾರಿ: ಇಡೀ ದೇಶದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಸಿಎಂ ಎನ್ನುವ ಹೆಗ್ಗಳಿಕೆಗೆ ...

news

ಸಚಿವ ಎಂ.ಬಿ.ಪಾಟೀಲರನ್ನ ಮಂಪರು ಪರೀಕ್ಷೆಗೊಳಪಡಿಸಿ: ವಿ.ಸೋಮಣ್ಣ

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ವೀರಶೈವ ಲಿಂಗಾಯತರ ಮಧ್ಯೆ ಒಡಕು ಮೂಡಿಸಲು ಸಚಿವ ಎಂ.ಬಿ.ಪಾಟೀಲ್ ...

Widgets Magazine