ಕರಾವಳಿಯಲ್ಲಿ ಕಾಂಗ್ರೆಸ್ ಗೆ ಬಲ ತುಂಬಲು ಹೊಸ ಪ್ರಯತ್ನ

ಮಂಗಳೂರು, ಮಂಗಳವಾರ, 10 ಜುಲೈ 2018 (11:13 IST)

ಮಂಗಳೂರು: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾದ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದಾರೆ.
 
ಕರಾವಳಿ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಅಲ್ಲಿನ ನಾಯಕರಿಗೆ ಪ್ರಮುಖ ಹುದ್ದೆ ನೀಡಿ ಆ ಭಾಗಕ್ಕೆ ಹೆಚ್ಚು ಒತ್ತು ಕೊಡಲು ನಿರ್ಧರಿಸಿದ್ದಾರೆ. ಕೆಪಿಸಿಸಿಯಲ್ಲಿ ಪ್ರಮುಖ ಹುದ್ದೆಗೆ ಕಾಪು ಮೂಲದ ವಿನಯ್ ಕುಮಾರ್ ಸೊರಕೆಯವರನ್ನು ಆಯ್ಕೆ ಮಾಡಲು ರಾಜ್ಯ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.
 
ಈ ಮೂಲಕ ಕರಾವಳಿಯಲ್ಲಿ ಮತ್ತೆ ಕೈ ಪಕ್ಷದ ಬಲವರ್ಧನೆಗೆ ಮುಂದಾಗಿದ್ದಾರೆ. ಕೆಪಿಸಿಸಿಯಲ್ಲಿ ಕಾರ್ಯಾಧ್ಯಕ್ಷ ಹುದ್ದೆ ಆಯ್ಕೆ ನಡೆಯಬೇಕಿದ್ದು, ಈ ಸ್ಥಾನಕ್ಕೆ ಸತೀಶ್ ಜಾರಕಿ ಹೊಳಿ ಕೂಡಾ ಪ್ರಮುಖ ಆಕಾಂಕ್ಷಿ ಎನ್ನಲಾಗಿದೆ. ಆದರೆ ಕರಾವಳಿಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ವಿನಯ್ ಕುಮಾರ್ ಸೊರಕೆಗೆ ಈ ಜವಾಬ್ಧಾರಿ ನೀಡಲು ಕಾಂಗ್ರೆಸ್ ನಾಯಕರು ಒಲವು ತೋರಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿವೈಎಸ್ ಪಿ ಗಣಪತಿ ಸಾವು ಪ್ರಕರಣ: ಸಚಿವ ಕೆಜೆ ಜಾರ್ಜ್ ಪರ ಸಿಎಂ ಬ್ಯಾಟಿಂಗ್

ಬೆಂಗಳೂರು: ಡಿವೈಎಸ್ ಪಿ ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸದನದಲ್ಲಿ ಸಿಎಂ ಕುಮಾರಸ್ವಾಮಿ ...

news

ಸಭಾಪತಿ ವಿವಾದ: ಸಿದ್ದರಾಮಯ್ಯ ಬಳಿ ದೂರಿಕೊಂಡ ಕಾಂಗ್ರೆಸ್ ಶಾಸಕರು

ಬೆಂಗಳೂರು: ವಿಧಾನಪರಿಷತ್ ನ ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ...

news

ದುಬೈನಲ್ಲಿ ಈ ರೀತಿ ಮಾಡಿದರೆ ದಂಡವನ್ನು ತೆರಬೇಕಾದೀತು. ಎಚ್ಚರದಿಂದಿರಿ!

ದುಬೈ : ದುಬೈ ಮುನ್ಸಿಪಾಲಿಟಿ ಅಧಿಕಾರಿಗಳು ಸ್ವಚ್ಛತೆಯನ್ನು ಕಾಪಾಡಿ ಜನರಿಗೆ ಸ್ವಚ್ಛ ಹಾಗೂ ಉತ್ತಮ ...

news

ಕಾಶ್ಮೀರದಲ್ಲಿ ಮುಸ್ಲಿಮರೇ ಸಿಎಂ ಯಾಕೆ ಆಗಬೇಕು? ಹಿಂದೂಗಳು ಸಿಎಂ ಆಗಲಿ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಕಾಶ್ಮೀರದಲ್ಲಿ ಯಾವಾಗಲೂ ಮುಸ್ಲಿಮರೇ ಮುಖ್ಯಮಂತ್ರಿಯಾಗುವುದನ್ನು ಸಹಿಸಲಾಗದು. ಹಿಂದೂ ಧರ್ಮೀಯರು ...

Widgets Magazine