Widgets Magazine
Widgets Magazine

ಡಿಕೆಶಿ ಮನೆ ಮೇಲಿನ ಐಟಿ ರಾಜಕೀಯಪ್ರೇರಿತವಾಗಿದೆ: ಕಾಂಗ್ರೆಸ್ ನಾಯಕರ ಕಿಡಿ

ಬೆಂಗಳೂರು, ಬುಧವಾರ, 2 ಆಗಸ್ಟ್ 2017 (11:10 IST)

Widgets Magazine

ರಾಜ್ಯಸಭಾ ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತವಾಗಿ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕೇಂದ್ರ ಸರ್ಕಾರ ಇನ್ನಿಲ್ಲದಂತೆ ಅಕ್ರಮ ನಡೆಸುತ್ತಿದೆ. ಆಡಳಿತ ಯಂತ್ರವನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ. ಸಚಿವ ಡಿ.ಕೆ. ಶಿವಕುಮಾರ್ ನಿವಾಸಗಳ ಮೇಲಿನ ದಾಳಿ ಹಿಂದೆ ಕೇಂದ್ರ ಸರ್ಕಾರ ಹತಾಶೆ ಕೃತ್ಯ ಎಂದು ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಟ್ವೀಟ್ ಮಾಡಿದ್ದಾರೆ.

ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಐಟಿ ದಾಳಿಯನ್ನ ಖಂಡಿಸಿದ್ದಾರೆ. ಇದು ರಾಜಕೀಯ ದುರುದ್ದೇಶದ ದಾಳಿ, ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡುತ್ತಿರುವುದಕ್ಕೆ ಈ ದಾಳಿ ನಡೆಸಲಾಗಿದೆ. ಪಕ್ಷದ ಭಿವೃದ್ಧಿ ಹತ್ತಿಕ್ಕುವ ಯತ್ನ ಎಂದು ಆರೋಪಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ದಾಳಿಯನ್ನ ಖಂಡಿಸಿದ್ದಾರೆ.

ದೇವರ ಮಗನೆಂದು ಹೇಳಲು ಹೊರಟಿರುವ ಪ್ರಧಾನಮಂತ್ರಿ ನಿದರಿಂದ ವರೇಂದ್ರಮೋದಿಯವರ ಸಣ್ಣತನ ಇದಿದರಿಂದ ಬಯಲಾಗಿದೆ. ಐಟಿ ದಾಳಿ ನಡೆಸಿರುವ ಸಂದರ್ಭ ರಾಜಕೀಯ ಪ್ರೇರಿತವಾದದ್ದು. ನರೇಂದ್ರಮೋದಿಗೆ ಇದು ಗೌರವ ತರುವುದಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಕಿಡಿ ಕಾರಿದ್ದಾರೆ,

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಐಟಿ ರೇಡ್: ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿದ ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?

ನವದೆಹಲಿ: ಡಿಕೆ ಶಿವಕುಮಾರ್ ನಿವಾಸಗಳ ಮೇಲೆ ನಡೆದ ಐಟಿ ದಾಳಿಗಳ ಬೆನ್ನಲ್ಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...

news

ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ವಶಪಡಿಸಿಕೊಂಡ ಹಣ ಎಷ್ಟು ಗೊತ್ತಾ..?

ಆದಾಯ ತೆರಿಗೆ ಇಲಾಖೆ ಕರ್ನಾಟಕದ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದೆ. ಡಿ.ಕೆ. ಶಿವಕುಮಾರ್ ...

news

ಬೆಳಂ ಬೆಳಗ್ಗೆ ಸಚಿವ ಡಿ.ಕೆ. ಶಿವಕುಮಾರ್`ಗೆ ಐಟಿ ಶಾಕ್

ಬೆಳ್ಳಂ ಬೆಳಗ್ಗೆ ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್`ಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ...

news

ಸಹವರ್ತಿಗೇ ಅಶ್ಲೀಲ ಸಂದೇಶ ರವಾನಿಸಿದ ಆರೋಪದಲ್ಲಿ ಕ್ರಿಕೆಟಿಗ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ವಿರುದ್ಧ ಅವರದ್ದೇ ಪಕ್ಷದ ಮಹಿಳಾ ...

Widgets Magazine
Widgets Magazine Widgets Magazine