ರಾಜ್ಯವನ್ನು ಲೂಟಿ ಮಾಡಿರುವುದೇ ಕಾಂಗ್ರೆಸ್ ಪಕ್ಷದ ಸಾಧನೆ: ಕುಮಾರಸ್ವಾಮಿ

ಸಿಂಧನೂರು, ಮಂಗಳವಾರ, 1 ಆಗಸ್ಟ್ 2017 (18:23 IST)

ನಮ್ಮದು ನುಡಿದಂತೆ ನಡೆದ ಸರಕಾರ ಎಂದು ಹೇಳುತ್ತಿದ್ದಾರೆ. ನುಡಿದಂತೆ ಏನು ನಡೆದುಕೊಂಡಿದ್ದಾರೆ ಎನ್ನುವುದನ್ನು ದುರ್ಬಿನ್ ಹಿಡಿದು ಹುಡುಕುತ್ತಿದ್ದೇನೆ ಎಂದು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
 
ಜಾಹಿರಾತಿಗೆ ಬಳಸಿದ್ದ ಹಣ ಯೋಜನೆಗಳಿಗೆ ಬಳಸಬಹುದಿತ್ತು. ಹಾಗೆ ಮಾಡಿದ್ರೆ ಸರಕಾರ ಜನರ ವಿಶ್ವಾಸ ಗಳಿಸಬಹುದಿತ್ತು. ಯೋಜನೆಗಳ ಹೆಸರಲ್ಲಿ ಲೂಟಿ ಮಾಡಿರುವುದೇ ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ ಎಂದು ಆರೋಪಿಸಿದರು.
 
ಅಂಬೇಡ್ಕರ್ ಹೆಸರಲ್ಲಿ ನಾಲ್ಕು ದಿನ ಸಮಾವೇಶ ಮಾಡಿದರು. ಅಂತಾರಾಷ್ಟ್ರೀಯ ಸಮಾವೇಶದ ಹೆಸರಲ್ಲಿ 24 ಕೋಟಿ ವೆಚ್ಚ ಮಾಡಿದರು. ಕೇವಲ ಅನಗತ್ಯ ವೆಚ್ಚಗಳಿಗೆ ಕೈಹಾಕಿರುವುದಕ್ಕೆ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ವೀರಶೈವ ಮತ್ತು ಲಿಂಗಾಯುತರಲ್ಲಿ ಸ್ವಾಮಿಜಿಗಳಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಅದರಲ್ಲಿ ನಿಮಗೇನು ಕೆಲಸ ಸಿದ್ದರಾಮಯ್ಯನವರೇ? ಬೆಂಕಿ ಹಚ್ಚಿ ಕುಳಿತಿದ್ದೀರಿ? ಅದು ಬೇರೆಯವರನ್ನು ಸುಡುವ ಮೊದಲು ನಿಮ್ಮ ಪಕ್ಷವನ್ನೇ ಸುಡುತ್ತದೆ ಎಂದು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ಜೆಡಿಎಸ್ Congress Jds Cm Siddaramaiah H.d.kumarswamy

ಸುದ್ದಿಗಳು

news

ದಂಡುಪಾಳ್ಯ ಬೆತ್ತಲೆ ಬೆನ್ನಿನ ಪೂಜಾಗಾಂಧಿ ಫೋಟೋಗೆ ಮಾತೆ ಮಹಾದೇವಿ ಫೋಟೋ ಅಂಟಿಸಿ ಅವಹೇಳನ

ಹುಬ್ಬಳ್ಳಿ: ಲಿಂಗಾಯುತ ಪ್ರತ್ಯೇಕ ಧರ್ಮವನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರು ನಟಿ ...

news

ಪೋಷಕರೇ ಎಚ್ಚರ.. ನಿಮ್ಮ ಮಕ್ಕಳೂ ಈ ಸೂಸೈಡ್ ಗೇಮ್ ಆಡುತ್ತಿರಬಹುದು..!

14 ವರ್ಷದ ಬಾಲಕ 7ನೇ ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ...

news

ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಸಮಾವೇಶ: ಜಿ.ಪರಮೇಶ್ವರ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ರಾಯಚೂರಿನಲ್ಲಿ ಸಮಾವೇಶ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ...

news

ಸಿಎಂ ಯೋಗಿ ಆದಿತ್ಯನಾಥ್‌ಗೆ ಹೈಕೋರ್ಟ್ ಛೀಮಾರಿ

ಅಲಹಾಬಾದ್: ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, ...

Widgets Magazine