ಕಾಂಗ್ರೆಸ್ ಹಣ, ಅಧಿಕಾರ, ತೋಳ್ಬಲದಿಂದ ಚುನಾವಣೆ ಗೆದ್ದಿದೆ: ಬಿಎಸ್‌ವೈ

ಗುಂಡ್ಲುಪೇಟೆ, ಸೋಮವಾರ, 17 ಏಪ್ರಿಲ್ 2017 (15:26 IST)

Widgets Magazine

ಕಾಂಗ್ರೆಸ್ ಹಣ, ಅಧಿಕಾರ ತೋಳ್ಬಲದಿಂದ ಚುನಾವಣೆ ಗೆದ್ದಿದೆ. ಹೆಚ್ಚಿನ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಹೇಳಿದ್ದಾರೆ.  
 
ಗುಂಡ್ಲುಪೇಟೆಯಲ್ಲಿ ಆಯೋಜಿಸಲಾದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಇಲ್ಲಿನ ಜನರಿಗಿರುವ ಉತ್ಸಾಹವನ್ನು ಶಿಕಾರಿಪುರದಲ್ಲಿ ನೋಡಿರಲಿಲ್ಲ. ಕಾಂಗ್ರೆಸ್‌ನವರು ಹಣ ಚೆಲ್ಲಿ ಜಯಗಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಕಾಂಗ್ರೆಸ್ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಿವೆ. ಆದಾಗ್ಯೂ ಕ್ಷೇತ್ರದ ಶೇ.46 ರಷ್ಟು ಜನತೆ ನಮ್ಮೊಂದಿಗಿದ್ದಾರೆ. ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಕರೆಂಟ್ ತೆಗೆದು ಹಣ ಹಂಚಲಾಗಿತ್ತು ಎಂದು ಆರೋಪಿಸಿದರು.
 
ಹಣ ಹಂಚುತ್ತಿದ್ದಾಗ ಕೆಎಸ್‌ಆರ್‌ಟಿಸಿ ಅಧಿಕಾರಿ ಸಿಕ್ಕುಬಿದ್ದಿದ್ದರು. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಸಿದ್ದರಾಮಯ್ಯ ಸರಕಾರ ಅಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಚುನಾವಣೆ ಗೆದ್ದಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಿಮಗಿದು ಗೊತ್ತೇ..? ಬೆಂಗಳೂರು ಸಮೀಪವೂ ಇವೆ ಉರಿಯುತ್ತಿರುವ ಅಗ್ನಿಕುಂಡಗಳಿವೆ..1

ಮೈಸೂರಿನ ಶ್ಯಾದನಹಳ್ಳಿಯಲ್ಲಿ ರಾಸಾಯನಿಕ ತ್ಯಾಜ್ಯದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಮಡು ಬಾಲಕ ಬಲಿಯಾದ ...

news

ಯಡಿಯೂರಪ್ಪ ಗಾಯಗೊಂಡ ಹೆಬ್ಬುಲಿಯಂತೆ: ತೇಜಸ್ವಿನಿ ರಮೇಶ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಾಯಗೊಂಡ ಹೆಬ್ಬುಲಿಯಂತೆ ಎಂದು ಮಾಜಿ ಸಂಸದೆ ...

news

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಸಚಿವ ಪಾಟೀಲ್

ವಿಜಯಪುರ: ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಉತ್ತರ ಕರ್ನಾಟಕ ಭಾಗದ ನಾಯಕರು ಕೆಪಿಸಿಸಿ ...

news

150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ: ಯಡಿಯೂರಪ್ಪ

ಮೈಸೂರು: ಮುಂದಿನ ವಿಧಾಸಭೆ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ...

Widgets Magazine Widgets Magazine