ಮೋದಿಯನ್ನು ಹಾಡಿ ಹೊಗಳುತ್ತಿರುವ ಕೈ ಕಾರ್ಯಕರ್ತರು…!

ಬೀದರ್, ಬುಧವಾರ, 27 ಮಾರ್ಚ್ 2019 (18:36 IST)

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಕೈ ಪಾಳೆಯದ ಮುಖಂಡರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ವಿರುದ್ಧ ಸ್ವಪಕ್ಷೀಯರೇ ವಾಗ್ದಾಳಿ ಮುಂದುರಿಸಿದ್ದಾರೆ.

ನಮ್ಮ ಪಕ್ಷ ಐವತ್ತು ವರ್ಷ ‌ಮಾಡಿದೆ ಕೇಂದ್ರದಲ್ಲಿ ಆದರೆ ಏನು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಮಾತನ್ನು ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಹೇಳುತ್ತಿದ್ದೇನೆ ಅಂತ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಕೇಂದ್ರದಲ್ಲಿ ಇನ್ನೊಂದು ಬಾರಿ ಮೋದಿ ನೇತೃತ್ವದ ಸರಕಾರ ಬರಬೇಕು. ಹೀಗಂತ ಬೀದರ್ ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಮೋದಿ ಬಗ್ಗೆ  ಹಾಡಿ ಹೊಗಳಿದ್ದಾರೆ. ಕೈ ಕಾರ್ಯಕರ್ತರ ಈ ನಡೆ ಕೆಪಿಸಿಸಿ ಕಾರ್ಯ ಅಧ್ಯಕ್ಷ ಈಶ್ವರ ಖಂಡ್ರೆ ತಲೆ ಬಿಸಿಗೆ ಕಾರಣವಾಗಿದೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೇಡಾನಗರಿ ಟಿಕೆಟ್ ಗಾಗಿ ಕೈನಲ್ಲಿ ಪೈಪೋಟಿ

ಪೇಡಾನಗರಿ ಖ್ಯಾತಿಯ ಧಾರವಾಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕೈ ಪಾಳೆಯದಲ್ಲಿ ಟಿಕೆಟ್ ಗೆ ಭಾರೀ ಪೈಪೋಟಿ ...

news

ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ವಿರುದ್ಧ 2.17 ಕೋಟಿ ವಂಚನೆ ಕೇಸ್

ಹೈದ್ರಾಬಾದ್: ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದಡಿ ಬರುವ ಫಾರ್ಮಾಎಕ್ಸಿಲ್ ಕಂಪೆನಿಯ ...

news

ಧಾರವಾಡ ಆಯ್ತು ಈಗ ಹುಬ್ಬಳ್ಳಿಯಲ್ಲಿ ಕಟ್ಟಡ ಕುಸಿತ

ಧಾರವಾಡ ಕಟ್ಟಡ ದುರಂತ ಪ್ರಕರಣ ಮಾಸುವ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ನಿರ್ಮಾಣ‌ ಹಂತದ ಕಟ್ಟಡ ...

news

ಸಚಿವ ಸಾರಾ ಮಹೇಶ್ ಕಾರನ್ನು ತಡೆದ ಮುಖ್ಯ ಪೇದೆ ಅಮಾನತು

ಮೈಸೂರು : ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾರಾ ಮಹೇಶ್ ಅವರ ಕಾರನ್ನು ...

Widgets Magazine