ನಿಂತ ಜನರೇಟರ್ ವಾಹನಕ್ಕೆ ಕಂಟೈನರ್ ಢಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ

ಆನೇಕಲ್, ಸೋಮವಾರ, 14 ಜನವರಿ 2019 (19:03 IST)

ರಸ್ತೆ ಬದಿಯಲ್ಲಿ ನಿಂತಿದ್ದ ಜನರೇಟರ್ ವಾಹನಕ್ಕೆ ಕಂಟೈನರ್ ಲಾರಿ ಢಿಕ್ಕಿಹೊಡೆದ ಘಟನೆ ನಡೆದಿದೆ.

ಆನೇಕಲ್ ತಾಲೂಕಿನ ಅತ್ತಿಬೆಲೆಯ ಟಿವಿಎಸ್ ಕ್ರಾಸ್ ಬಳಿ ಘಟನೆ ನಡೆದಿದ್ದು, ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು,  ಮೂವರಿಗೆ ಗಂಭೀರ ಗಾಯಗಳಾಗಿವೆ.

ಅಸ್ಸಾಂ ಮೂಲದ ಮೂಹಿಗರ್ ಪಟ್ರ (39) ಸಾವನ್ನಪ್ಪಿದ್ದಾನೆ. ಬಿಹಾರ್ ಮೂಲದ ವಿವೇಕ್, ಉಮರ್ ಮತ್ತೋರ್ವ ಗಾಯಾಳುವಿನ ವಿವರ ತಿಳಿದಿಲ್ಲ.

ಗೇಲ್ ಕಂಪನಿಯ ಗ್ಯಾಸ್ ಲೈನ್ ಕಂಪನಿ ಭೂಮಿ ಅಡಿಯಲ್ಲಿ ಪೈಪ್ ಲೈನ್ ನಿರ್ಮಿಸುತ್ತಿದ್ದ ವೇಳೆ ಘಟನೆ ನಡೆದಿದೆ.

ಪೈಪ್ ಲೈನ್ ವೇಲ್ಡ್ ಮಾಡುತಿದ್ದ ಕಾರ್ಮಿಕರಿಗೆ ಢಿಕ್ಕಿ ಹೊಡೆದು ಜನರೇಟರ್ ವಾಹನಕ್ಕೆ ಕಂಟೈನರ್ ಢಿಕ್ಕಿಯಾದ ಪರಿಣಾಮ ಸಾವು- ನೋವು ಸಂಭವಿಸಿದೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಿಲ್ಲಾಡಳಿತ ನಿಷೇಧ ನಡುವೆಯೂ ಪಲ್ಲಕ್ಕಿಗೆ ಕುರಿ ಮರಿ ಎಸೆತ

ಜಿಲ್ಲಾಡಳಿತ ಹೇರಿರುವ ನಿಷೇಧದ ನಡುವೆಯೂ ಕುರಿಮರಿ ಎಸೆದು ಹರಕೆಯನ್ನು ಭಕ್ತ ಸಮೂಹ ತೀರಿಸಿದ ಘಟನೆ ನಡೆದಿದೆ.

news

ರಸ್ತೆಯಲ್ಲೇ ವೃದ್ಧೆಯ ಶವಯಿಟ್ಟು ಪ್ರತಿಭಟನೆ

ವೃದ್ಧೆಯೊಬ್ಬರ ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

news

ಆಪರೇಷನ್ ಕಮಲ ಮಾಡ್ತಿಲ್ಲ ಎಂದ ವಿಜಯೇಂದ್ರ

ರಾಜ್ಯ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿರುವ ಸಮಯದಲ್ಲಿಯೇ ಬಿಜೆಪಿಯ ವಿಜಯೇಂದ್ರ ಹೇಳಿಕೆ ...

news

ಟೈಗರ್ ಫಾರೆಸ್ಟ್ ಬಗ್ಗೆ ಸಂಸದ ಹೇಳಿದ್ದೇನು?

ರಾಜ್ಯದಲ್ಲಿ ಎರಡು ಟೈಗರ್ ಪ್ರಾಜೆಕ್ಟ್ ಇರೋದು ನಮ್ಮ ಗಡಿ ಜಿಲ್ಲೆಯಲ್ಲಿ ಮಾತ್ರ. ಪ್ರಾಜೆಕ್ಟ್ ಜಾರಿಯಾದರೆ ...