ಗುಡ್ಡ ಕುಸಿತ ಮುಂದುವರಿಕೆ: ಜನ ತತ್ತರ

ಹಾಸನ, ಸೋಮವಾರ, 27 ಆಗಸ್ಟ್ 2018 (20:15 IST)

ಈ ವರ್ಷ ಮಳೆರಾಯ ಮಲೆನಾಡಿಗರನ್ನು ಬೆಂಬಿಡದೆ ಕಾಡತೊಡಗಿದ್ದಾನೆ. ವರುಣನ ಆರ್ಭಟಕ್ಕೆ ಮತ್ತೆ ಮತ್ತೆ ಅವಘಡಗಳು ಮರುಕಳಿಸುತ್ತಿವೆ.
 
ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಸುರಿದ ಮಹಾಮಳೆಗೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ.  ಇನ್ನೇನು ಮಳೆ ಕಡಿಮೆಯಾಯಿತು, ಜೀವನ ಸರಿ ಹೋಗುತ್ತದೆ ಎನ್ನುವಷ್ಟರಲ್ಲಿ  ಅವಘಡಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ.
ಮಳೆ ನಿಂತರೂ ಸಕಲೇಶಪುರ ತಾಲ್ಲೂಕಿನಲ್ಲಿ ನಿಲ್ಲದಾಗಿದೆ.  ಮತ್ತೆ ರೈಲು ಹಳಿಯ ‌ಮೇಲೆ ಗುಡ್ಡ ಕುಸಿತವಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಡಕುಮರಿಯ 72ನೇ ಮೈಲಿ ಬಳಿ ಮತ್ತೆ ಗುಡ್ಡ ಕುಸಿತವಾಗಿದೆ. ಕಳೆದ ಕೆಲ ದಿನಗಳಿಂದ ಗುಡ್ಡ ಕುಸಿದು ರೈಲು ಸಂಚಾರ ಬಂದ್ ಆಗಿತ್ತು. ಇನ್ನೇನು ತೆರವು ಕಾರ್ಯ ಪೂರ್ಣವಾಗಿ ರೈಲು ಸಂಚಾರ ಮತ್ತೆ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಮತ್ತೆ ಗುಡ್ಡ ಕುಸಿದಿರುವುದರಿಂದ ರೈಲು ಇಲಾಖೆಗೆ ತಲೆ ನೋವಾಗಿ‌ ಪರಿಣಮಿಸಿದೆ. ಯಡಕುಮರಿಯಲ್ಲಿ ಪದೇ ಪದೆ ಗುಡ್ಡ ಕುಸಿಯುತ್ತಿದ್ದು, ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ದೌಡಾಯಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಂತೆ-ಜಾತ್ರೆ, ಮದ್ಯ ಮಾರಾಟ ನಿಷೇಧ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ-2018ರ ಹಿನ್ನೆಲೆಯಲ್ಲಿ ಮತದಾನವು ಆಗಸ್ಟ್ 31 ರಂದು ಹಾಗೂ ಮತ ಎಣಿಕೆ ...

news

ಕಾಲೇಜು ವಿದ್ಯಾರ್ಥಿಗಳಿಗೆ ಆಕೆ ಮಾರಾಟ ಮಾಡಿದ್ದೇನು?

ಮನೆಯಲ್ಲಿ ತುಳಸಿ ಗಿಡ ಇಟ್ಟಕೊಂಡು ಕಾಲೇಜು ವಿದ್ಯಾರ್ಥಿಗಳನ್ನ ದೇವರ ದರ್ಶನದ ಹೆಸರಿನಲ್ಲಿ ದಾರಿ ...

news

ಮಾನವೀಯತೆ ಮೆರೆದ ಡಿಸಿ ಮಾಡಿದ್ದೇನು ಗೊತ್ತಾ?

ತೀವ್ರ ಅನಾರೋಗ್ಯಕ್ಕೆ ಒಳಗಾಗಿರೋ ವೃದ್ಧೆಯೊಬ್ಬರನ್ನು ಆಕೆಯ ಮಗನೇ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ...

news

ಮೀಟರ್ ಬಡ್ಡಿ ದಂಧೆ ಕೋರರು ಮಾಡಿದ್ದೇನು ಗೊತ್ತಾ?

ಬಡ್ಡಿ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿದ ವ್ಯಕ್ತಿಯನ್ನು‌ ಸಿನಿಮೀಯ ರೀತಿಯಲ್ಲಿ ಅಪಹರಿಸಿ ಮಾರಣಾಂತಿಕ ...

Widgets Magazine