ಮಾರಣಾಂತಿಕ ಕೊರೋನಾ ವೈರಸ್ ತ್ವರಿತವಾಗಿ ಹರಡುತ್ತಿದ್ದು, ಭಾರತದಲ್ಲೂ ಈ ವೈರಸ್ ಹರಡಿರುವ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಕಲಬುರಗಿ ಜಿಲ್ಲೆಯಲ್ಲಿ ವೈರಸ್ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಯಾರೂ ಕೂಡ ಈ ಬಗ್ಗೆ ಆತಂಕಕ್ಕೊಳಗಾಗಬಾರದು ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್.ಬಿ. ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ.ಸಾರ್ವಜನಿಕರು ಕೊರೋನಾ ವೈರಸ್ ಕುರಿತು ಹೆದರುವ ಅವಶ್ಯಕತೆ ಇಲ್ಲ. ಬದಲಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸೀನುವಾಗ ಕರವಸ್ತ್ರವನ್ನು ಬಳಸಬೇಕು. ಮಾಸ್ಕ್ ಬಳಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.