Widgets Magazine
Widgets Magazine

ನಿಗಮ, ಮಂಡಳಿ ನೇಮಕಾತಿಯಿಂದ ಅಸಮಾಧಾನ ಸಹಜ: ದೇಶಪಾಂಡೆ

ಬೆಂಗಳೂರು, ಬುಧವಾರ, 26 ಅಕ್ಟೋಬರ್ 2016 (12:36 IST)

Widgets Magazine

ಮಂಡಳಿಗಳ ಹಾಗೂ ನೇಮಕಾತಿಯಲ್ಲಿ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವದಲ್ಲಿ ಅಸಮಾಧಾನ ಸಹಜ ಎಂದು ಆರ್.ವಿ.ದೇಶಪಾಂಡೆ ಹೇಳಿದರು.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿಯಲ್ಲಿ ಇರುವುದು ಕೇವಲ 85 ಸ್ಥಾನಗಳು. ಹೀಗಾಗಿ ಎಲ್ಲಾ ಅತೃಪ್ತರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚಿಸಿದ್ದೇನೆ ಎಂದು ಹೇಳಿದರು.
 
ನಿಗಮ ಮಂಡಳಿಯಲ್ಲಿ ತಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಕೋರಿ ಸಚಿವ ಆರ್‌.ವಿ.ದೇಶಪಾಂಡೆ ಅವರು ನಿನ್ನೆ ನವದೆಹಲಿಯಲ್ಲಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೂಡಾ ಭೇಟಿಯಾಗಿ ಚರ್ಚೆ ನಡೆಸಿದ್ದರು.
 
ನಿಗಮ ಮಂಡಳಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕಾತಿ ಪಟ್ಟಿಯಲ್ಲಿ ಹಾಲಿ ಶಾಸಕರ ಹೆಸರನ್ನು ಸೇರಿಸಿದ್ದು, 20 ಜನ ಶಾಸಕರಿಗೆ ಸ್ಥಾನ ನೀಡುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸಚಿವ ಆರ್.ವಿ.ದೇಶಪಾಂಡೆ Corporation Board Appointment Dissatisfaction Normal R.v.deshpande

Widgets Magazine

ಸುದ್ದಿಗಳು

news

ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಿಗ್ ರಿಲೀಫ್: ಸತ್ಯಮೇವ ಜಯತೇ ಎಂದ ಯಡಿಯೂರಪ್ಪ

ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಿಗ್ ರಿಲೀಫ್ ದೊರೆತ ಹಿನ್ನೆಲೆಯಲ್ಲಿ ನನ್ನ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ...

news

ಬೇಗ ಮದುವೆಯಾಗಲೆಂದು ದೇವಸ್ಥಾನದ ಮೆಟ್ಟಿಲುಗಳಿಗೆ ಜಜ್ಜಿ ಮಗು ಬಲಿ

ಆಧುನಿಕ ಕಾಲದಲ್ಲೂ ಮೂಢನಂಬಿಕೆಗಳು ಎಷ್ಟೊಂದು ಬೇರೂರಿವೆ ಎಂಬುದಕ್ಕೆ ಸ್ಪಷ್ಟ ದೃಷ್ಟಾಂತವಿದು. ತನಗೆ ಶೀಘ್ರ ...

news

ಜೆಎನ್‌ಯು ವಸತಿ ನೀಲಯದಲ್ಲಿ ವಿದ್ಯಾರ್ಥಿ ಶವ ಪತ್ತೆ

ಕಳೆದೊಂದು ವರ್ಷದಿಂದ ಪದೇ ಪದೇ ಸುದ್ದಿಯಾಗುತ್ತಿರುವ ನವದೆಹಲಿಯ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ...

news

ಬಿಬಿಎಂಪಿ ಆಯ್ತು, ಇದೀಗ ಪೊಲೀಸ್ ಕಮೀಷನರೇಟ್‌ ವಿಭಜನೆಗೆ ಮುಂದಾದ ಸರಕಾರ

ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆಗೆ ಮುಂದಾಗಿದ್ದ ರಾಜ್ಯ ಸರಕಾರ, ಇದೀಗ ನಗರ ಪೊಲೀಸ್ ಕಮೀಷನರೇಟ್‌ನ್ನು ...

Widgets Magazine Widgets Magazine Widgets Magazine