ಭ್ರಷ್ಟಾಚಾರ, ಅಪರಾಧ ಪಟ್ಟಿಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ಸಿಎಂ ಸಾಧನೆ: ಆರ್.ಅಶೋಕ್

ಬೆಂಗಳೂರು, ಶನಿವಾರ, 2 ಡಿಸೆಂಬರ್ 2017 (14:08 IST)

ದೇಶದಲ್ಲಿಯೇ ಭ್ರಷ್ಟಾಚಾರ, ಅಪರಾಧಗಳ ಪಟ್ಟಿಗಳಲ್ಲಿ ಅಗ್ರಸ್ಥಾನಕ್ಕೇರಿಸಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತುಂಬಾ ಅಹಂಕಾರದಿಂದ ಮೆರೆಯುತ್ತಿದ್ದಾರೆ. ಕಳೆದ ನಾಲ್ಕುವರೆ ವರ್ಷಗಳಲ್ಲಿ ಯಾವುದೇ ಸಾಧನೆ ಮಾಡದೇ ಕೇವಲ ಹೇಳಿಕೆ ನೀಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ. ಪ್ರತಿನಿತ್ಯ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಅಪರಾಧಿಗಳಿಗೆ ಸರಕಾರದ ಯಾವುದೇ ಭಯವಿಲ್ಲ. ಲೈಂಗಿಕ ದೌರ್ಜನ್ಯಗಳು ಮಿತಿಮೀರುತ್ತಿವೆ ಎಂದು ಕಿಡಿಕಾರಿದರು. 
 
ಸಿಎಂ ಸಿದ್ದರಾಮಯ್ಯ ಲಿಂಗಾಯುತ ಧರ್ಮವನ್ನೇ ಒಡೆಯಲು ಹೊರಟಿದ್ದಾರೆ. ಜಾತಿ ಕಲಹ ಷಡ್ಯಂತ್ರ ರೂಪಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಮಾಜಿ ಡಿಸಿಎಂ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಎಂ.ಬಿ.ಪಾಟೀಲ್ ಕಮಿಶನ್ ಏಜೆಂಟ್, ಭ್ರಷ್ಟಾಚಾರಿ: ಬಿಎಸ್‌ವೈ

ಬಾಗಲಕೋಟೆ: ನೀರಾವರಿ ಖಾತೆ ಸಚಿವ ಎಂ.ಬಿ.ಪಾಟೀಲ್ ಕಮಿಶನ್ ಏಜೆಂಟ್, ಭ್ರಷ್ಟಚಾರಿ ಎಂದು ಬಿಜೆಪಿ ...

news

ಕೊಲೆಗಡುಕ ಸಚಿವನಿಗೆ ಸಿಎಂ ಸಿದ್ದರಾಮಯ್ಯ ರಕ್ಷಣೆ: ಯಡಿಯೂರಪ್ಪ

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಕೊಲೆಗಡುಕ ಸಚಿವ ವಿನಯ್ ಕುಲ್ಕರ್ಣಿಗೆ ...

news

ಭೂತ ಹಿಡಿದಿದೆ ಎಂದು ಯುವತಿಗೆ ಚಿತ್ರಹಿಂಸೆ ನೀಡಿದ ಸಂಬಂಧಿಕರು!

ಭೂತ ಹಿಡಿದಿದೆ ಎಂಬ ಕಾರಣಕ್ಕೆ ಯುವತಿ ಕೈಗೆ ಹಗ್ಗ ಕಟ್ಟಿ ಯುತಿಯನ್ನು ಮಾಂತ್ರಿಕನ ಬಳಿಗೆ ಸಂಬಂಧಿಕರು ...

news

ಏಳು ವರ್ಷ ಪ್ರೀತಿಸಿದ ಯುವತಿಗೆ ಕೈಕೊಟ್ಟು ಬೇರೆ ಮದುವೆ ಮಾಡಿಕೊಂಡ ಯುವಕ

ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಏಳು ವರ್ಷಗಳಿಂದ ದೈಹಿಕವಾಗಿ ಬಳಕೆ ಮಾಡಿಕೊಂಡ ಯುವಕ ...

Widgets Magazine
Widgets Magazine