ನಮ್ಮ ಬಿಜೆಪಿ ಪಕ್ಷಕ್ಕೆ ಎಲ್ಲಿಂದಲ್ಲೋ ಬಂದವರನ್ನು ನಾವು ಸೇರಿಸಿಕೊಳ್ಳುವುದಿಲ್ಲ ಜೈಲಿಗೆ ಹೋದವರನ್ನು ನಾವು ಸೇರಿಸಿಕೊಳ್ಳುವುದಿಲ್ಲ ಅಂತಾ ಸಚಿವ ಸಿ.ಪಿ.ಯೋಗೀಶ್ವರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನ ಲೇವಡಿ ಮಾಡಿದ್ರು. ಬಿಡದಿಯ ಈಗಲ್ ಟನ್ ರೆಸಾರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ವಲಸೆ ಹೋಗಿರುವವರನ್ನ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿರುವ ಡಿಕೆಶಿಗೆ ಸಿಪಿವೈ ತಿರುಗೇಟು ನೀಡಿದ್ರು. ಇನ್ನೂ ಹೆಚ್.ಡಿ.ಕೆ ವಿರುದ್ದ ಮಾತನಾಡಿ ಕೆಆರ್ಎಸ್ ಸುತ್ತಲೂ ಕಲ್ಲುಗಣಿಗಾರಿಕೆ ಅನೇಕ ವರ್ಷಗಳಿಂದ ನಡೆಯುತ್ತಿದೆ,