ಮಹಿಳೆಯಿಂದ ಡಿಕೆಶಿ ಕೊರಳಪಟ್ಟಿ ಹಿಡಿಸಿ, ಪೊರಕೆಯಿಂದ ಹೊಡಿಸುತ್ತೇನೆ ಎಂದ ಸಿ.ಪಿ.ಯೋಗೀಶ್ವರ

ರಾಮನಗರ, ಗುರುವಾರ, 4 ಜನವರಿ 2018 (16:14 IST)

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಸಿ.ಪಿ.ಚನ್ನಪಟ್ಟಣದಲ್ಲಿ ಮಹಿಳೆಯೊಬ್ಬರ ಕೈಯಲ್ಲಿ ಡಿ.ಕೆ.ಶಿವಕುಮಾರ ಅವರ ಕೊರಳಪಟ್ಟಿ ಹಿಡಿಸಿ, ಪೊರಕೆಯಿಂದ ಹೊಡಿಸುತ್ತೇನೆ ಎಂದು ಹೇಳಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲುವುದಿಲ್ಲ, ಬೆಟ್ಟು ಕಟ್ಟುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಮಂತ್ರಿಯಾಗಿದ್ದುಕೊಂಡು ಜೂಜಿನ ಬಗ್ಗೆ ಮಾತನಾಡಿದ್ದಾರೆ. ಡಿ.ಕೆ.ಶಿವಕುಮಾರ ಅವರು ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸದೆ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದರೆ ಸಾಮಾನ್ಯ ವ್ಯಕ್ತಿಯನ್ನು ಕಣಕ್ಕಿಳಿಸಿ ಡಿಕೆಶಿ ವಿರುದ್ಧ ಗೆಲ್ಲುಸುತ್ತೇನೆ. ಈ ಸವಾಲನ್ನು ಸ್ವೀಕರಿಸಿ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಲಿ ಎಂದಿದ್ದಾರೆ.
 
ಡಿಕೆಶಿ ನಾಲಿಗೆ ಮೇಲೆ ಹಿಡಿತವಿಲ್ಲ. ಹುಚ್ಚು ಹಿಡಿದಿರಬೇಕು. ಬಲ ಪ್ರಯೋಗ ಮಾಡಿ ಜನರನ್ನು ಕರೆತಂದರು. ಚನ್ನಪಟ್ಟಣದಲ್ಲಿ ವೀರಾವೇಶದಿಂದ ಮಾತನಾಡಿ ಜನರನ್ನು ದಾರಿ ತಪ್ಪಿಸಲು ಯತ್ನಿಸಿ ಮಾಗಡಿಯಲ್ಲಿ ನಿದ್ರೆಗೆ ಜಾರಿದ್ದಾರೆ ಎಂದು ಟೀಕಿಸಿದ್ದಾರೆ.

ಜನವರಿ 17ರಂದು ಬಿಜೆಪಿಯ ಸಮಾವೇಶ ಮಾಡಿ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಿಎಫ್‌ಐ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು ಕಾಂಗ್ರೆಸ್‌ ಅಲ್ಲ, ಬಿಜೆಪಿ ಎಂದ ಸಚಿವ

ಪಿಎಫ್ಐ ಸಂಘಟನೆ ಜೊತೆಗೆ ಕಾಂಗ್ರೆಸ್‌ ಯಾವತ್ತೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ ಸವಣೂರು ಗ್ರಾಮ ...

news

ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು– ಖಾದರ್

ಕೊಲೆ, ಹಲ್ಲೆ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪಾಪೂಲರ್ ಫ್ರೆಂಟ್ ಆಫ್ ಇಂಡಿಯಾ (ಪಿಎಫ್‍ಐ) ಮತ್ತು ...

news

ಪಿಎಫ್‍ಐ, ಎಸ್‍ಡಿಪಿಐ ನಿಷೇಧಿಸಲು ಶೋಭಾ ಕರಂದ್ಲಾಜೆ ಒತ್ತಾಯ

ಕರಾವಳಿಯಲ್ಲಿ ಹಿಂದೂಗಳ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಇದರ ಹಿಂದೆ ಪಿಎಫ್‍ಐ, ಎಸ್‍ಡಿಪಿಐ ...

news

ದೀಪಕ್ ಕೊಲೆಯಲ್ಲಿ ರಮಾನಾಥ್ ರೈ ಕೈವಾಡ– ಬಿಎಸ್‌ವೈ

ಮಂಗಳೂರಿನಲ್ಲಿ ನಡೆದಿರುವ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ...

Widgets Magazine
Widgets Magazine