ನಾಗರಾಜನ ಮನೆಯಲ್ಲಿ ಕೋಟ್ಯಂತರ ರೂ ಹಣ ಪತ್ತೆ

ಬೆಂಗಳೂರು, ಶುಕ್ರವಾರ, 14 ಏಪ್ರಿಲ್ 2017 (11:14 IST)

Widgets Magazine

ಶ್ರೀರಾಂಪುರದಲ್ಲಿರುವ ನಾಗರಾಜನನ ನಿವಾಸದ ಮೇಲೆ ದಾಳಿ ಮಾಡಿದ ಪೊಲೀಸರು ಕೋಟ್ಯಂತರ ರೂಪಾಯಿ ಹಣ ವಶಪಡಿಸಿಕೊಂಡಿದ್ದಾರೆ. ಪೊಲೀಸ್ ದಾಳಿಯ ಸುಳಿವು ತಿಳಿದ ನಾಗರಾಜ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಬಾಕ್ಸ್ ರೀತಿಯ ಮಂಚದಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚಿನ ಹಳೆನೋಟುಗಳು ಪತ್ತೆಯಾಗಿದೆ. ಪರಾರಿಯಾಗಿರುವ ನಾಗರಾಜ ಟೆರೇಸ್ ಮೂಲಕ ತಪ್ಪಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
 
 ನಾಗರಾಜನ ಹಲವು ಮನೆಗಳನ್ನು ಬಾಡಿಗೆಗೆ ನೀಡಿದ್ದು, ಬಾಡಿಗೆ ನೀಡಿದ ಮನೆಯಲ್ಲಿಯೇ ಅವಿತುಕೊಂಡಿರಬಹುದು ಎಂದು ಶಂಕಿಸಿದ್ದಾರೆ. ಶ್ರೀರಾಂಪುರದಲ್ಲಿಯೇ ನಾಗರಾಜನ ಅಡಗಿರಬಹುದು ಎನ್ನುವ ಶಂಕೆಯಿಂದ ಸಂಪೂರ್ಣ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ.
 
ತನಿಖೆ ಮುಂದುವರಿಸಿರುವ ಪೊಲೀಸರಿಗೆ ಒರಟು ಉತ್ತರ ನೀಡಿದ ಬಾಂಬ್‌ನಾಗನ ಪತ್ನಿ ಲಕ್ಷ್ಮಿ , ನೀವು ಇರುವುದಾದ್ರೂ ಏತಕ್ಕಾಗಿ ನೀವೆ ಹುಡುಕಿ ಎಂದು ಕಿಡಿಕಾರಿದ್ದಾಳೆ. ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
   
 ವ್ಯಕ್ತಿಯೊಬ್ಬರ ಅಪಹರಣಕ್ಕೆ ಸಂಬಂಧಿಸಿದಂತೆ ಎಸಿಪಿ ಬಡಿಗೇರ್ ನೇತೃತ್ವದಲ್ಲಿ ಶ್ರೀರಾಂ'ಪುರದ ನಾಗರಾಜನ ಮನೆಯ ಮೇಲೆ ದಾಳಿ ನಡೆಸಲಾಗಿದೆ. 
 
ಪೊಲೀಸರು ಮನೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಮನೆಯಲ್ಲಿ ರದ್ದುಗೊಂಡಿರುವ 500,1000 ರೂ.ಮುಖಬೆಲೆಯ ಕೊಟ್ಯಂತರ ರೂ. ನೋಟು ಪತ್ತೆಯಾಗಿದೆ. ಪೊಲೀಸರು ಆತನ ಪತ್ತೆಗೆ ಮತ್ತಷ್ಟು ಶೋಧ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬರಗಾಲ: ರಾಜ್ಯದ ರೈತರಿಗೆ ಮನವಿ ಮಾಡಿದ ಸಚಿವ ಎಂ.ಬಿ.ಪಾಟೀಲ್

ಆಲಮಟ್ಟಿ: ರಾಜ್ಯದಲ್ಲಿ ಭೀಕರ ಬರಗಾಲವಿರುವುದರಿಂದ ರೈತರು ಜಮೀನಿಗೆ ನೀರು ಬೇಕು ಎಂದು ಹಟಹಿಡಿಯಬಾರದು ಎಂದು ...

news

ಕೆಪಿಸಿಸಿಗೆ ನೂತನ ಸಾರಥಿ ಆಯ್ಕೆಗೆ ಹೈಕಮಾಂಡ್ ಕಸರತ್ತು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ...

news

ರಾಜ್ಯದಲ್ಲಿ ಅಡಳಿತ ವಿರೋಧಿ ಅಲೆಯಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಅಡಳಿತ ವಿರೋಧಿ ಅಲೆಯಿಲ್ಲ. ಹಿಂದುತ್ವದ ಧ್ರುವಿಕರಣ ಸಾಧ್ಯವಿಲ್ಲ ಎಂದು ಸಿಎಂ ...

news

ಮುಂಬೈ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ

ಮುಂಬೈ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಭಾರಿ ಭದ್ರತೆಯನ್ನು ...

Widgets Magazine Widgets Magazine