ಡೈರಿಯಿಂದ ಬಿಜೆಪಿಯವರ ಬಂಡವಾಳ, ಸುಳ್ಳುಪ್ರಚಾರ ಬಹಿರಂಗವಾಗಿದೆ: ದಿನೇಶ್ ಗುಂಡೂರಾವ್

ಬೆಂಗಳೂರು, ಸೋಮವಾರ, 20 ಮಾರ್ಚ್ 2017 (21:04 IST)

Widgets Magazine

ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನಿವಾಸದಲ್ಲಿ ದೊರೆತ ಡೈರಿ ಅವರದಲ್ಲವೆಂದು ಎಫ್‌‌ಎಸ್‌ಎಲ್ ವರದಿಯಿಂದ ಸಾಬೀತಾಗಿದ್ದರಿಂದ ಬಿಜೆಪಿಯವರ ಬಂಡವಾಳ, ಸುಳ್ಳುಪ್ರಚಾರ ಬಹಿರಂಗವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ನಕಲಿ ಡೈರಿಯ ಬಗ್ಗೆ ಪ್ರಸ್ತಾಪಿಸುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಇದೀಗ ಎಫ್‌ಎಸ್‌ಎಲ್‌ ವರದಿ ಬಹಿರಂಗವಾಗಿರುವುದರಿಂದ ಮುಖಭಂಗವಾಗಿದೆ ಎಂದು ಗುಡುಗಿದ್ದಾರೆ.
 
ಗೋವಿಂದರಾಜು ನಿವಾಸದಲ್ಲಿ ದೊರೆತ ಡೈರಿಯಲ್ಲಿರುವ ಬರಹಗಳು ಗೋವಿಂದರಾಜು ಅವರಿಗೆ ಸೇರಿದ್ದಲ್ಲ ಎಂದು ಎಫ್‌ಎಸ್‌ಎಲ್ ತಜ್ಞರು ವರದಿ ನೀಡಿದ್ದಾರೆ.
 
ಡೈರಿಯಲ್ಲಿ ಹೈಕಮಾಂಡ್‌ಗೆ ನೀಡಿದ ಕಪ್ಪ ಸೇರಿದಂತೆ ಸ್ಟೀಲ್ ಬ್ರಿಡ್ಜ್‌ನಲ್ಲೂ ಸಿಎಂ ಕುಟುಂಬಕ್ಕೆ 69 ಕೋಟಿ ರೂಪಾಯಿ ಹಣ ಸಂದಾಯವಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದೀಗ ವರದಿ ಬಹಿರಂಗವಾಗಿದ್ದರಿಂದ ಕಾಂಗ್ರೆಸ್‌ನಲ್ಲಿ ನೆಮ್ಮದಿ ಆವರಿಸಿದ್ದರೆ, ಬಿಜೆಪಿಯಲ್ಲಿ ಆತಂಕ ಮೂಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಜೆಪಿ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಡೈರಿ ಸಿಎಂ ಸಿದ್ದರಾಮಯ್ಯ Bjp Congress Dairy Dinesh Gundurao Fsl Report Cm Siddramaiah

Widgets Magazine

ಸುದ್ದಿಗಳು

news

ಉಪಚುನಾವಣೆ: ಕಳಲೆ ಕೃಷ್ಣಮೂರ್ತಿ, ಶ್ರೀನಿವಾಸ್ ಪ್ರಸಾದ್ ಆಸ್ತಿ ವಿವರ ಘೋಷಣೆ

ಮೈಸೂರು: ನಂಜನಗೂಡು ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕಳಲೆ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆಯ ...

news

ಜೆಡಿಎಸ್ ಪಾಳಯದತ್ತ ಎಚ್.ವಿಶ್ವನಾಥ್ ಚಿತ್ತ?

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳಿಂದ ಬೇಸತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಎಚ್.ವಿಶ್ವನಾಥ್ ...

news

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಭೆ: ಉಪಚುನಾವಣೆ ರಣತಂತ್ರ

ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ...

news

ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರಿಗೆ ಸೈಕೋ ಕಾಟ

ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರಿಗೆ ಸೈಕೋ ಇನ್ನಿಲ್ಲದಂತೆ ಕಾಡಲಾರಂಭಿಸಿದ್ದಾನೆ. ರಾತ್ರಿ 12ರಿಂದ ...

Widgets Magazine