ಚಂದದ ರಂಗೋಲಿ ಬಿಡಿಸಿ ಮಹಿಳಾ ದಸರಾಗೆ ಚಾಲನೆ ನೀಡಿದ ಸಚಿವೆ ಉಮಾಶ್ರೀ

ಮೈಸೂರು, ಗುರುವಾರ, 21 ಸೆಪ್ಟಂಬರ್ 2017 (12:07 IST)

Widgets Magazine

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ – 2017ರ ಮಹಿಳಾ ದಸರಾ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗಾಗಿ ಮೈಸೂರು ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದ ಆವರಣದಲ್ಲಿ ರಂಗೋಲಿ ಸ್ಫರ್ಧೆ ಏರ್ಪಡಿಸಲಾಗಿತ್ತು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ರಂಗೋಲಿ ಬಿಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಈ ರಂಗೋಲಿ ಸ್ಪರ್ಧೆಯಲ್ಲಿ ವಯಸ್ಸಿನ ಅಂತರವಿಲ್ಲದೆ 85 ಜನ ಮಹಿಳಾ ಮಣಿಗಳು ಭಾಗವಹಿಸಿದ್ದು, ವಿವಿಧ ವಿನ್ಯಾಸದ ಅಂಬಾರಿ ಹೊತ್ತ ಆನೆ, ಗಡಿ ಕಾಯುತ್ತಿರುವ ಹೆಮ್ಮೆಯ ಯೋಧರಿಗೆ ನಮನ, ನೀರು ಉಳಿಸಿ ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಸಂದೇಶ ಸಾರುವ ತರಹೇವಾರಿ ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿಗಳು ಎಲ್ಲರ ಗಮನ ಸೆಳೆದವು.

ಇನ್ನುಳಿದ ಕೆಲ ಆಕರ್ಷಕ ರಂಗೋಲಿಗಳು ಜನರ ಮೆಚ್ಚುಗೆ ಪಡೆದವು. ಅಂದ ಚಂದದ ರಂಗೋಲಿ ಮುಂದೆ ನಿಂತು ಜನರು ಸೆಲ್ಫೀ ಕ್ಲಿಕ್ಕಿಸಿಕೊಂಡರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ದಸರಾ ಮಹಿಳಾ ದಸರಾ ಸಚಿವೆ ಉಮಾಶ್ರೀ ರಂಗೋಲಿ Dasara Umashree Mahiala Dasara

Widgets Magazine

ಸುದ್ದಿಗಳು

news

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸಚಿವ ಅನಂತ ಕುಮಾರ್ ಪತ್ನಿ ವಿಚಾರಣೆ

ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹಂತಕರಿಗಾಗಿ ತೀವ್ರ ತನಿಖೆ ನಡೆಸುತ್ತಿರುವ ಎಸ್ ಐಟಿ ...

news

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಬಿಳಿ ಹುಲಿ ಸಾವು

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೆಂಗಾಲ್ ಟೈಗರ್ ಜೊತೆಗಿನ ಕಾದಾಟದಲ್ಲಿ ಗಾಯಗೊಂಡಿದ್ದ ಬಿಳಿ ಹುಲಿ ...

news

ದಸರಾ ಜಾತಿ, ಧರ್ಮ ಮೀರಿದ್ದು: ನಾಡೋಜ ನಿಸಾರ್ ಅಹಮದ್

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. 407ನೇ ...

news

ಸಿದ್ಧಗಂಗಾ ಶ್ರೀಗಳಿಗೆ ಅನಾರೋಗ್ಯ: ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಶ್ರೀಗಳನ್ನ ...

Widgets Magazine