ಪ್ರತಿವರ್ಷದಂತೆ ಧಾರ್ಮಿಕ ಕೈಂಕರ್ಯ ನಡೆಯುತ್ತವೆ: ಪ್ರಮೋದಾ ದೇವಿ ಒಡೆಯರ್

ಮೈಸೂರು, ಸೋಮವಾರ, 18 ಸೆಪ್ಟಂಬರ್ 2017 (19:16 IST)

ಮೈಸೂರು: ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆಯಲ್ಲಿ ಧಾರ್ಮಿಕ ಕೈಂಕರ್ಯಗಳು ಮುಂದುವರೆಯುತ್ತವೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.


ಜಿಲ್ಲಾಡಳಿತ ವತಿಯಿಂದ ಆಮಂತ್ರಣ ಸ್ವೀಕರಿಸಿ ಮಾತನಾಡಿದ ಅವರು, ಖಾಸಗಿ ದರ್ಬಾರ್ ಹಾಗೂ ಜಂಬೂ ಸವಾರಿ ಚಾಲನೆ ವೇಳೆ ಈ ಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುಷ್ಪಾರ್ಚನೆ ಮಾಡಲಿದ್ದಾರೆ. ಖಾಸಗಿ ದರ್ಬಾರ್ ನಲ್ಲಿ ಯದುವೀರ್ ಒಡೆಯರ್ ಪತ್ನಿ, ಗರ್ಭಿಣಿ ತ್ರಿಷಿಕಾ ದೇವಿ ಒಡೆಯರ್ ಕೂಡ ಪಾಲ್ಗೊಳ್ಳಲಿದ್ದಾರೆ ಎಂದರು. ಈ ವರ್ಷ ಉತ್ತಮ ಮಳೆ-ಬೆಳೆ ಆಗಿದೆ. ತಾಯಿ ಚಾಮುಂಡೇಶ್ವರಿ ನಾಡಿನ ಜನರಿಗೆ ಶುಭವನ್ನುಂಟುಮಾಡಲಿ. ನಾಡಿನ ಜನತೆಗೆ ದಸರಾ ಶುಭಾಶಯ ತಿಳಿಸಿದರು.

ಇನ್ನು ನವರಾತ್ರಿ ಉತ್ಸವಕ್ಕೆ ಆಗುವ ಖರ್ಚುವೆಚ್ಚಕ್ಕೆ ಎಂದು ಸರ್ಕಾರದ ವತಿಯಿಂದ ಪ್ರತಿ ವರ್ಷ ಗೌರವಧನ ನೀಡಲಾಗುತ್ತೆ. ಈ ಬಾರಿ 36 ಲಕ್ಷದ  ರೂ. ಚೆಕ್ ನ್ನು ಜಿಲ್ಲಾಡಳಿತ ನೀಡಿದ್ದು, ಪ್ರಮೋದಾ ದೇವಿ ಒಡೆಯರ್ ಚೆಕ್ ಸ್ವೀಕರಿಸಿದ್ದಾರೆ. ಕಳೆದ ಬಾರಿ ಸಹ ಜಿಲ್ಲಾಡಳಿತ 35 ಲಕ್ಷ ರೂ. ಚೆಕ್ ನೀಡಿತ್ತು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಯೋತ್ಪಾದನೆ ತರಬೇತಿ ನೀಡಲು ಬಂದಿದ್ದ ಅಲ್`ಖೈದಾ ಉಗ್ರ ಅರೆಸ್ಟ್

ಮಯನ್ಮಾರ್`ನಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿರುಚ ರೊಹಿಂಗ್ಯಾ ನಿರಾಶ್ರಿತರಿಗೆ ತರಬೇತಿ ನೀಡಲು ಭಾರತಕ್ಕೆ ...

news

ದೇಶದಲ್ಲಿ ತುರ್ತುಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಯಿದೆ: ಮಾಯಾವತಿ

ಲಕ್ನೋ: ದೇಶದಲ್ಲಿ ತುರ್ತುಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿ ಎದುರಾಗಿದೆ ಎಂದು ಮಾಜಿ ಸಿಎಂ ಮಾಯಾವತಿ ...

news

ಸಾಕ್ಷ್ಯವಿಲ್ಲದೆ ಸುಳ್ಳು ಆರೋಪ ಮಾಡುವುದರಲ್ಲಿ ಹುರುಳಿಲ್ಲ: ಯು.ಟಿ.ಖಾದರ್

ಮಂಗಳೂರು: ಪ್ರತಿಪಕ್ಷದವರಿಗೆ ಸರ್ಕಾರ, ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡಲು ಯಾವುದೇ ಕಾರಣವಿಲ್ಲ. ಆದರೂ ...

news

ಕರ್ನಾಟಕದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಮೋದಿ

ಮಿಶನ್ 150 ಕನಸು ಕಾಣುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಚೈತನ್ಯ ನೀಡಲು ಸ್ವತಃ ನರೇಂದ್ರ ಮೋದಿ ...

Widgets Magazine
Widgets Magazine