ಶ್ರೀಗಳ ಭೇಟಿ ಬಳಿಕ ಡಿಸಿಎಂ ಪರಮೇಶ್ವರ್

ತುಮಕೂರು, ಗುರುವಾರ, 6 ಡಿಸೆಂಬರ್ 2018 (14:42 IST)

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸ್ವಾಮೀಜಿಗಳನ್ನು ಭೇಟಿ ಅವರ ಆರೋಗ್ಯವನ್ನು ಡಿಸಿಎಂ ವಿಚಾರಿಸಿದರು.
 
ಶ್ರೀಗಳ ಜತೆ ಮಾತನಾಡಿದ ಬಳಿಕ ಹೇಳಿಕೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಶ್ರೀಗಳ ಆರೋಗ್ಯ  ಸುಧಾರಿಸಿದೆ.

ಶ್ರೀಗಳು ನನ್ನ ನೋಡಿ ಮಾತನಾಡಿದರು. ಚೆನ್ನಾಗಿದ್ದಿರಾ ಯಾವಾಗ ಬಂದ್ರಿ ಅಂದ್ರು. ಎಷ್ಟಾಯ್ತು ಅಂತ ತಮ್ಮ ವಯಸ್ಸನ್ನ ಕೇಳಿದ್ರು. ಚಿಕ್ಕಬುದ್ದಿಯವರು 111 ವರ್ಷ ಆಯ್ತು ಅಂದ್ರು. ಓ ಬಹಳ ಆಗೋಯ್ತು ಬಹಳ ಆಗೋಯ್ತು ಅಂತ ಹೇಳಿದರು ಎಂದರು.
ಇನ್ನು ಶ್ರೀಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ರಿಪೋರ್ಟ್ಸ್ ಎಲ್ಲಾ ವನ್ನು ತೆಗೆದುಕೊಂಡು ಹೋಗಿ ಸ್ಪೆಷಲಿಸ್ಟ್ ಹತ್ತಿರ ತೋರಿಸಿ ಅವರು ಯಾವ ರೀತಿಯ ಸಲಹೆ ಕೊಡುತ್ತಾರೋ ನೋಡಿ, ಅದರ ಮೇಲೆ ನಿರ್ಧಾರ ಮಾಡ್ತಾರೆ ಎಂದರು.
 
ರಿಪೋರ್ಟ್ಸ್ ನೋಡಿ ಅಗತ್ಯ ಇದ್ದರೆ ಮಾತ್ರ ಶಿಪ್ಟ್ ಮಾಡ್ತಾರೆ. ಇಲ್ಲ ಇಲ್ಲೆ ಮೆಡಿಕಲ್ ಟ್ರೀಟ್‌ಮೆಂಟ್ ಕೊಡಬಹುದು ಅಂದರೆ ಶಿಪ್ಟ್ ಮಾಡೋ ಅಗತ್ಯ ಬರುವುದಿಲ್ಲ ಎಂದರು.
ಮೊದಲು ಹೇಗೆ ಮಾತನಾಡಿಸುತ್ತಾ ಇದ್ರೋ ಹಾಗೆ ಸ್ವಾಮೀಜಿಗಳು ತಮ್ಮೊಂದಿಗೆ ಮಾತನಾಡಿದರು ಎಂದು ಡಿಸಿಎಂ ಹೇಳಿದರು.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

’ನನ್ನ ಕಡೆಯಿಂದ ಕಾಂಗ್ರೆಸ್ ನವರಿಗೆ ಯಾವುದೇ ತೊಂದರೆ ಆಗಿಲ್ಲ- ಸಚಿವ ಎಚ್.ಡಿ.ರೇವಣ್ಣ

ಹಾಸನ : ನಾನು ಸಿಎಂ ಆಕಾಂಕ್ಷಿಯಲ್ಲ ಎಂದು ಹಾಸನದಲ್ಲಿ ಇಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ...

news

ದೇಶದ ಅತಿ ಉದ್ದದ ರೈಲ್ವೆ ಸೇತುವೆ ಉದ್ಘಾಟನೆಗೆ ಸಜ್ಜು

ದೇಶದ ಅತ್ಯಂತ ಉದ್ದನೆಯ ರೈಲ್ವೆ ಸೇತುವೆ ಉದ್ಘಾಟನೆ ಸಜ್ಜುಗೊಂಡಿದೆ.

news

ನೀರಾವರಿ ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಬಿಜೆಪಿ, ಕಾಂಗ್ರೆಸ್ ಶಾಸಕರು

ಬೆಂಗಳೂರು : ಇಂದು ನಡೆದ ನೀರಾವರಿ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಮುಖಂಡ ...

news

ಮೋಜಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದವರ ಬಂಧನ

ಮೋಜು ಮಾಡಲು ಬೈಕ್‌ಗಳನ್ನು ಕಳವು ಮಾ‌ಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Widgets Magazine