ಕಾರು ಡಿಕ್ಕಿಯಾಗಿ ಜಿಂಕೆ ಸಾವು: ಕಳಚಿದ ಲೋಗೋದಿಂದ ಸಿಕ್ಕ ಸುಳಿವು

ಚಾಮರಾಜನಗರ, ಸೋಮವಾರ, 14 ಜನವರಿ 2019 (12:11 IST)

ರಸ್ತೆ ದಾಟುತ್ತಿದ್ದ ಜಿಂಕೆಗೆ ಬೆಂಜ್ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿರುವ ಘಟನೆ ತಡರಾತ್ರಿ ನಡೆದಿದೆ.
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ಈ ಘಟನೆ ನಡೆದಿದೆ.
 
ಸುಮಾರು 4 ವರ್ಷದ ಹೆಣ್ಣು ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಡಿಕ್ಕಿಯ ರಭಸಕ್ಕೆ ಬೆಂಜ್ ಕಾರಿನ ಲೋಗೋ ಕೆಳಗೆ ಬಿದ್ದಿದ್ದರಿಂದ ಪೊಲೀಸರಿಗೆ ಕಾರು ಪತ್ತೆಹಚ್ಚಲು ಮಹತ್ವದ ಸುಳಿವು ಸಿಕ್ಕಂತಾಗಿದೆ.
 
ಈ ಘಟನೆ ಕುರಿತು ಬಂಡೀಪುರ ಸಿಎಫ್ಓ ಅಂಬಾಡಿ ಮಾಧವನ್ ಪ್ರತಿಕ್ರಿಯಿಸಿದ್ದು, ಕಾರಿನ ಲೋಗೋ ಕಳಚಿ ಬಿದ್ದಿರುವುದರಿಂದ ಬೆಂಜ್ ಕಾರ್ ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.  
 
ಇಂದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಲಿದ್ದು, ಆರೋಪಿಯನ್ನು ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು ಎಂದು ತಿಳಿಸಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿಯ ಸ್ವಚ್ಛತೆಯ ಪಾಠ ಮಾಡಿದ ಬಿ.ಎಸ್.ಪಿ ಶಾಸಕ!

ಪ್ರಧಾನಿ ನರೇಂದ್ರ ಮೋದಿಯವರ ಹಾದಿಯನ್ನು ರಾಜ್ಯದ ಏಕೈಕ ಬಿ.ಎಸ್.ಪಿ. ಶಾಸಕರು ಹಿಡಿದಿದ್ದಾರಾ? ಇಂತಹದ್ದೊಂದು ...

news

ಸಂಕ್ರಾಂತಿ ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಾ ಶಾಸಕ ಡಾ. ಉಮೇಶ್ ಜಾಧವ್?

ಬೆಂಗಳೂರು : ಸಚಿವ ಸ್ಥಾನ ಸಿಗದ ಕಾರಣ ಮುನಿಸಿಕೊಂಡಿರುವ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಉಮೇಶ್ ...

news

ಸಂಕ್ರಾಂತಿ ಹಬ್ಬಕ್ಕೆ ಜನರಿಗೆ ತೆಲಂಗಾಣ ಸಿಎಂಯಿಂದ ಭರ್ಜರಿ ಗಿಫ್ಟ್

ಹೈದರಾಬಾದ್ : ಸಂಕ್ರಾಂತಿ ಹಬ್ಬಕ್ಕೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಜನರಿಗೆ ಭರ್ಜರಿ ಗಿಫ್ಟ್ ...

news

ಮುಂಬೈನಲ್ಲಿರುವ ಮೂವರು ಶಾಸಕರು ಸಂಪರ್ಕದಲ್ಲಿದ್ದಾರೆ- ಸಿಎಂ ಕುಮಾರಸ್ವಾಮಿ

ಮೈಸೂರು : ಮುಂಬೈನಲ್ಲಿರುವ ಮೂವರು ಶಾಸಕರು ಸಂಪರ್ಕದಲ್ಲಿದ್ದಾರೆ. ಯಾವೊಬ್ಬ ಶಾಸಕರೂ ಪಕ್ಷ ಬಿಡುವ ...