ಸಿಎಂ ಸಿದ್ದರಾಮಯ್ಯ ಮತ್ತೊಂದು ಅವಧಿಗೆ ಸಿಎಂ ಆದ್ರೆ ಉತ್ತಮ: ದೇಶಪಾಂಡೆ

ಬೆಂಗಳೂರು, ಶನಿವಾರ, 28 ಅಕ್ಟೋಬರ್ 2017 (15:06 IST)

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ನನ್ನ ಸಂಪೂರ್ಣ ಬೆಂಬಲವಿದೆ ಎಂದು ಭಾರಿ ಕೈಗಾರಿಕೆ ಖಾತೆ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾದಲ್ಲಿ ಏನು ತಪ್ಪು ಎಂದು ಸಚಿವ ದೇಶಪಾಂಡೆ ಸುದ್ದಿಗಾರರಿಗೆ ಪ್ರಶ್ನಿಸಿದ್ದಾರೆ.
 
ಮುಂಬರುವ ವಿಧಾನಸಭೆ ಚುನಾವಣೆ ನೇತೃತ್ವದಲ್ಲಿಯೇ ನಡೆಯಲಿದೆ. ಆದ್ದರಿಂದ, ಸಿದ್ದರಾಮಯ್ಯ  ಮತ್ತೊಮ್ಮೆ ಮುಖ್ಯಮಂತ್ರಿಯಾದಲ್ಲಿ ಉತ್ತಮ ಎಂದು ತಿಳಿಸಿದ್ದಾರೆ.
 
ನಾನು ಸೇರಿದಂತೆ ಪ್ರತಿಯೊಬ್ಬರಿಗೆ ಮುಖ್ಯಮಂತ್ರಿಯಾಗಬೇಕು ಎನ್ನುವ ಬಯಕೆಯಿರುತ್ತದೆ. ಆದರೆ, ಕೆಲವರಿಗೆ ಮಾತ್ರ ಅಂತಹ ಅದೃಷ್ಚ ಒಲಿದು ಬರುತ್ತದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅನೈತಿಕ ಸಂಬಂಧಕ್ಕೆ ಅಡ್ಜಿಯಾದ ಪತಿ, 3 ಮಕ್ಕಳನ್ನು ಹತ್ಯೆಗೈದ ಮಹಿಳೆ

ಜೈಪುರ್: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ 46 ವರ್ಷ ವಯಸ್ಸಿನ ಪತಿ ಮತ್ತು ಮೂವರು ಮಕ್ಕಳನ್ನು ತನ್ನ ಪ್ರೇಮಿಯ ...

news

ಆರೋಪ ಬಂದ ಮಾತ್ರಕ್ಕೆ ರಾಜೀನಾಮೆ ನೀಡಿದ್ರೆ ವಿಧಾನಸೌಧ ಖಾಲಿಯಾಗುತ್ತೆ: ದೇಶಪಾಂಡೆ

ಕಲಬುರ್ಗಿ: ಸಚಿವ ಜಾರ್ಜ್ ಮೇಲೆ ಸಿಬಿಐ ಎಫ್ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ರಾಜೀನಾಮೆ ...

news

ಮಕ್ಕಳಾಗಲಿಲ್ಲ ಎಂದು ಪತ್ನಿಯನ್ನೇ ಕೊಂದ ಪಾಪಿ ಪತಿ

ಕಲಬುರ್ಗಿ: ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ...

news

ಸಿಎಂ, ಆರೆಸ್ಸೆಸ್, ಬಿಜೆಪಿ ನಡುವೆ ಒಳಒಪ್ಪಂದ: ಎಚ್ ವಿಶ್ವನಾಥ್ ಆರೋಪ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಘಪರಿವಾರ ಮತ್ತು ಬಿಜೆಪಿ ನಡುವೆ ಒಳಒಪ್ಪಂದವಿದೆ ಎಂದು ಜೆಡಿಎಸ್ ...

Widgets Magazine
Widgets Magazine