ಜಿಲ್ಲಾಡಳಿತ ನಿಷೇಧ ನಡುವೆಯೂ ಪಲ್ಲಕ್ಕಿಗೆ ಕುರಿ ಮರಿ ಎಸೆತ

ಯಾದಗಿರಿ, ಸೋಮವಾರ, 14 ಜನವರಿ 2019 (19:01 IST)

ಜಿಲ್ಲಾಡಳಿತ ಹೇರಿರುವ ನಿಷೇಧದ ನಡುವೆಯೂ ಕುರಿಮರಿ ಎಸೆದು ಹರಕೆಯನ್ನು ಭಕ್ತ ಸಮೂಹ ತೀರಿಸಿದ ಘಟನೆ ನಡೆದಿದೆ.
ಯಾದಗಿರಿ ತಾಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆ ವೇಳೆ ಈ ಘಟನೆ ನಡೆದಿದೆ.

ಮೈಲಾರಲಿಂಗೇಶ್ವರ ಪಲ್ಲಕ್ಕಿ ಮೆರವಣಿಗೆ ಮೂಲಕ ಗಂಗಾ ಸ್ನಾನಕ್ಕೆ ತೆರಳುವ ವೇಳೆ ಕುರಿಮರಿಗಳನ್ನು ಭಕ್ತ ಸಮೂಹ ಎಸೆದು ತಮ್ಮ ಹರಕೆ ತೀರಿಸಿದರು.

ಪಲ್ಲಕ್ಕಿ ‌ಮೇಲೆ ಎರಡು ಕುರಿಗಳನ್ನು ಭಕ್ತರು ಎಸೆದರು. ಪಲ್ಲಕ್ಕಿ ಮೇಲೆ ಕುರಿ ಎಸೆಯುವುದರಿಂದ ಕುರಿಗಳ ಸಂಖ್ಯೆ ಹೆಚ್ಚಳವಾಗುತ್ತವೆ ಎನ್ನುವ ನಂಬಿಕೆ ಜನರಲ್ಲಿದೆ. ಜಿಲ್ಲಾಡಳಿತ ಕುರಿಮರಿ ಎಸೆಯುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಂಡರೂ ಅದು ವಿಫಲವಾಗಿದೆ. ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿ ದರ್ಶನ ಪಡೆದುಕೊಂಡರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಸ್ತೆಯಲ್ಲೇ ವೃದ್ಧೆಯ ಶವಯಿಟ್ಟು ಪ್ರತಿಭಟನೆ

ವೃದ್ಧೆಯೊಬ್ಬರ ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

news

ಆಪರೇಷನ್ ಕಮಲ ಮಾಡ್ತಿಲ್ಲ ಎಂದ ವಿಜಯೇಂದ್ರ

ರಾಜ್ಯ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿರುವ ಸಮಯದಲ್ಲಿಯೇ ಬಿಜೆಪಿಯ ವಿಜಯೇಂದ್ರ ಹೇಳಿಕೆ ...

news

ಟೈಗರ್ ಫಾರೆಸ್ಟ್ ಬಗ್ಗೆ ಸಂಸದ ಹೇಳಿದ್ದೇನು?

ರಾಜ್ಯದಲ್ಲಿ ಎರಡು ಟೈಗರ್ ಪ್ರಾಜೆಕ್ಟ್ ಇರೋದು ನಮ್ಮ ಗಡಿ ಜಿಲ್ಲೆಯಲ್ಲಿ ಮಾತ್ರ. ಪ್ರಾಜೆಕ್ಟ್ ಜಾರಿಯಾದರೆ ...

news

ಪತ್ನಿಯನ್ನೇ ಭಯಾನಕವಾಗಿ ಕೊಂದ ಪಾಪಿ ಪತಿ!

ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಾರದ ಲೋಕಕ್ಕೆ ಕಳಿಸಿದ್ದಾನೆ.