ಗಮನ ಬೇರೆ ಕಡೆ ಸೆಳೆದು ಕಳ್ಳತನ: ಕುಖ್ಯಾತ ಕಳ್ಳರ ಬಂಧನ

ಹುಬ್ಬಳ್ಳಿ, ಬುಧವಾರ, 11 ಜುಲೈ 2018 (13:52 IST)

 


ಗಮನ ಬೇರೆ ಕಡೆಗೆ ಸೆಳೆದು ಮಾಡುತ್ತಿದ್ದ ಕುಖ್ಯಾತ ಅಂತರಾಜ್ಯ ಕಳ್ಳರ ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ, ಸತ್ಯಮೂರ್ತಿ ಜ್ಞಾನವೇಲು, ಕುಮಾರೇಶನ್ ಸೇಲ್ವರಾಜ್, ಕೆ ಬಾರದಿರಾಜ್ ಕೇಶವನ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 1 ಲಕ್ಷ 50 ಸಾವಿರ ಮೌಲ್ಯದ ಒಂದು ಲ್ಯಾಪ್ಟಾಪ್ 1 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ತಮಿಳುನಾಡು, ಮಹಾರಾಷ್ಟ್ರ, ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಕಳ್ಳತನ ಮಾಡುತ್ತಿದ್ದರು.‌ ಜೂ. 3 ರಂದು ಕೊಪ್ಪಿಕರ್ ರಸ್ತೆಯ ಸೆಟಲೈಟ್ ಬಿಲ್ಡಿಂಗ್ ಎದುರಿನ‌ ಕಾರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಸಾಜೀದ್ ಫರಾಶ್ ಎನ್ನುವರ ಕಾರಿನಲ್ಲಿನ 45 ಸಾವಿರ ಮೌಲ್ಯದ ಆಪಲ್ ಕಂಪನಿಯ ಲ್ಯಾಪಟಾಪ್ ಹಾಗೂ ಕಾಗದ ಪತ್ರಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಶಹರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿತ್ತು. ಆರೋಪಿಗಳ ಹಿಂದೆ ಬಿದಿದ್ದ ಪೊಲೀಸರು.

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಓಡಿ ಹೋಗುವಾಗ ಕಳ್ಳನನ್ನು ಬೆನ್ನಹತ್ತಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಹರ ಪೊಲೀಸ ಇನ್ಸ್‌ಪೆಕ್ಟರ್ ಭರತ ಎಸ್ .ಆರ್. ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ ಸಿಬ್ಬಂದಿಗಳಾದ ಸದಾನಂದ ಕಲಘಟಗಿ, ಮಂಜು ಹಾಲವರ, ಶ್ರೀನಿವಾಸ ಯರಗುಪ್ಪಿ, ಚಂದ್ರಶೇಖರ್ ಆರೋಪಿಗಳ ಬಂಧನ‌ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
 ಇದರಲ್ಲಿ ಇನ್ನಷ್ಟು ಓದಿ :  
ಗಮನ ಬೇರೆ ಕಡೆ ಕಳ್ಳತನ ಕುಖ್ಯಾತ ಕಳ್ಳರ ಬಂಧನ ಪೊಲೀಸರ ಕಾರ್ಯಾಚರಣೆ ಲ್ಯಾಪಟಾಪ್ Theft The Laptop The Police Operation Theft Of The Notorious Thieves The Focus Is On The Other Hand

ಸುದ್ದಿಗಳು

news

ಡಿಕೆಶಿ ನೀಡಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕರು ವಿಧಾನಸಭೆಗೆ ಗೈರು

ಬೆಂಗಳೂರು: ನಿನ್ನೆ ಕಾಂಗ್ರೆಸ್ ನಾಯಕ, ಸಚಿವ ಡಿಕೆ ಶಿವಕುಮಾರ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ...

news

ಡಿಸಿಎಂ ಹುದ್ದೆ ಬರುತ್ತೆ, ಹೋಗುತ್ತೆ, ಮೊದಲು ಪಕ್ಷ ನೋಡಿಕೊಳ್ಳಿ: ಪರಮೇಶ್ವರ್ ಗೆ ಎಚ್ ಕೆ ಪಾಟೀಲ್ ತರಾಟೆ

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಾಗಿದ್ದು, ...

news

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ ಕೆ ಪಾಟೀಲ್ ರೋಷಾವೇಷ

ಬೆಂಗಳೂರು: ವಿಧಾನಸೌಧದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಹಿರಿಯ ಶಾಸಕ ಎಚ್ ಕೆ ...

news

ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಚಿವರ ಮೀಟಿಂಗ್

ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರಾದ ಮೇಲೆ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಶಾಸಕಾಂಗ ...

Widgets Magazine