ಬಂಡಾಯ ಶಾಸಕರಿಗೆ ಪಾಠ ಕಲಿಸಲು ದೇವೇಗೌಡರ ಸಮರ ತಂತ್ರ

ಬೆಂಗಳೂರು, ಭಾನುವಾರ, 30 ಜುಲೈ 2017 (11:37 IST)

ಬಂಡಾಯ ಶಾಸಕರಿಗೆ ಪಾಠ ಕಲಿಸಲು ದೇವೇಗೌಡರ ಸಮರ ತಂತ್ರ ರೂಪಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
 
ಮುಂದಿನ ತಿಂಗಳು ಬಂಡಾಯ ಶಾಸಕರ ಕ್ಷೇತ್ರಗಳಲ್ಲಿ ಸರಣಿ ಸಮಾವೇಶ ನಡೆಸುವ ಮೂಲಕ ಹಣಿಯಲು ರಣತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ. ಬಂಡಾಯ ಶಾಸಕರು ಜೆಡಿಎಸ್‌ಗೆ ಸವಾಲು ಹಾಕುತ್ತಿರುವುದರಿಂದ ಅವರಿಗೆ ಅವರ ಕ್ಷೇತ್ರದಲ್ಲಿಯೇ ತಿರುಗೇಟು ನೀಡಲು ಜೆಡಿಎಸ್ ನಿರ್ಧರಿಸಿದೆ.
 
ಕೆಲ ದಿನಗಳ ಹಿಂದೆ ಬಂಡಾಯ ಶಾಸಕ ಜಮೀರ್ ಅಹ್ಮದ್, ಜೆಡಿಎಸ್ ವರಿಷ್ಠರಿಗೆ ಸವಾಲು ಹಾಕಿ ತಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದಲ್ಲಿ ರುಂಡ ಕತ್ತರಿಸಿ ಇಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು.
 
ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸರಣಿ ಸಮಾವೇಶಗಳ ಹೊಣೆ ಹೊತ್ತುಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  
ದೇವೇಗೌಡ ಜೆಡಿಎಸ್ ಕುಮಾರಸ್ವಾಮಿ ಜೆಡಿಎಸ್ ಬಂಡಾಯ ಶಾಸಕರು ಜಮೀರ್ ಅಹ್ಮದ್ Devegowda Jds Zameer Ahmed Kumarswamy Rebel Jds Mla

ಸುದ್ದಿಗಳು

news

ವಿಡಿಯೋ ಗೇಮ್ ನಲ್ಲಿ ತಲ್ಲೀನನಾದ ಈ ಯುವಕ ಏನು ಮಾಡಿದ ನೋಡಿ...

ವಿಡಿಯೊ ಗೇಮ್ ನಲ್ಲಿ ತಲ್ಲೀನನಾಗಿದ್ದ ಯುವಕನೊಬ್ಬ ಬಟ್ಟೆ ಧರಿಸುವುದನ್ನೂ ಮರೆತು ನಗ್ನವಾಗಿ ಮೆಟ್ರೊ ...

news

ಕೇರಳ: ದುಷ್ಕರ್ಮಿಗಳಿಂದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ

ತಿರುವನಂತಪುರಂ: ಆರೆಸ್ಸೆಸ್ ಕಾರ್ಯಕರ್ತ ರಾಜೇಶ್‌ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಹೇಯ ಘಟನೆ ...

news

ರಾಜ್ಯಸಭಾ ಚುನಾವಣೆ: ಶಾಸಕರಿಗೆ ಭದ್ರತೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ

ರಾಜ್ಯಸಭಾ ಚುನಾವಣೆ ಹಿನ್ನಲೆಯಲ್ಲಿ ಗುಜರಾತ್ ನಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆದುಕೊಂಡ ...

news

ಅಶ್ಲೀಲ ಸಂದೇಶ ಹಾಕಿದ ಪ್ರಾಧ್ಯಾಪಕನ ಮಾನ ಹರಾಜು ಹಾಕಿದ ವಿದ್ಯಾರ್ಥಿನಿ

ಸುಳ್ಯ: ವಿದ್ಯೆ ನೀಡುವ ಗುರುಗಳು ದೇವರಿಗೆ ಸಮಾನ ಅಂತಾರೆ. ಆದರೆ ಇತ್ತೀಚೆಗೆ ಶಿಕ್ಷಕರೇ ಹದ್ದು ಮೀರಿ ...

Widgets Magazine