ನನಗೆ ಬೆಳೆಸುವುದೂ ಗೊತ್ತು, ಪಕ್ಷದಿಂದ ಹೊರಹಾಕುವುದು ಗೊತ್ತು: ದೇವೇಗೌಡ

ರಾಮನಗರ, ಶನಿವಾರ, 21 ಅಕ್ಟೋಬರ್ 2017 (19:27 IST)

Widgets Magazine

ರಾಮನಗರ:  ಮಾಧ್ಯಮಗಳ ಎದುರು ಮಾತನಾಡುವುದನ್ನೇ ಕೆಲವರು ಮನರಂಜನೆ ಎಂದುಕೊಂಡಿದ್ದಾರೆ. ಆದರೆ ನಾನು ಮನರಂಜನೆಗೆ ಅವಕಾಶ ನೀಡುವುದಿಲ್ಲ. ನನಗೆ ಬೆಳೆಸುವುದೂ ಗೊತ್ತು. ತೀರಾ ಚೇಷ್ಠೆ ಮಾಡಿದರೆ ಹೊರಹಾಕುವುದೂ ಸಹ ಗೊತ್ತು ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಮೊಮ್ಮಗನ ವಿರುದ್ಧ ಗುಡುಗಿದ್ದಾರೆ.


ಮ್ಯಾಗ್ನೋಲಿಯಾ ಕ್ಲಬ್‌ನಲ್ಲಿ ಮಾತನಾಡಿದ ಅವರು, ರೇವಣ್ಣನ ಮಗ ಪ್ರಜ್ವಲ್ ರಾಜಕೀಯದಲ್ಲಿ ಬೆಳೆಯುವುದು ನಿಶ್ಚಿತ. ಅದನ್ನು ತಪ್ಪಿಸೋಕೆ ಯಾರಿಂದಲೂ ಆಗುವುದಿಲ್ಲ. ಅವರ ಹಣೆಬರಹ ಏನಿದೆಯೋ ಅದನ್ನು ತಪ್ಪಿಸಲು ನಾವ್ಯಾರು ಎಂದರು.

ಹಲವು ಜನ ಯುವಕರಿದ್ದಾರೆ. ರೇವಣ್ಣನ ಮಗ ಒಬ್ಬನೇನಾ? ನಿಖಿಲ್ ಅವನ ತಂದೆಗೋಸ್ಕರ ದುಡಿಯುತ್ತೇನೆ ಅಂದಿಲ್ವಾ? ಅನೇಕ ಯುವಕರು ತಾಮುಂದು, ನಾಮುಂದು ಅಂತಾರೆ. ಎಲ್ಲರೂ ಕುಳಿತು ಚರ್ಚೆ ಮಾಡುತ್ತೇವೆ. ನಮಗೆ 120 ಸ್ಥಾನ ದಾಟಬೇಕು ಎಂಬ ಹಠವಿದೆ. ಪಕ್ಷದಲ್ಲಿ ಪ್ರತಿಯೊಂದು ಸೀಟನ್ನು ಗೆಲ್ಲುವ ನಿಟ್ಟಿನಲ್ಲಿ ಲೆಕ್ಕಾಚಾರ ಮಾಡುತ್ತೇವೆ ಎಂದು ದೇವೇಗೌಡ ಹೇಳಿದರು. 

ಚನ್ನಪಟ್ಟಣದಲ್ಲಿ ಯಾರಿಗೂ ಅಷ್ಟು ಸುಲಭವಾಗಿ ಟಿಕೆಟ್ ನೀಡುವುದಿಲ್ಲ. ಕೆಲವರು ಯಾವ ಮಟ್ಟಕ್ಕೆ ಮಾತನಾಡುತ್ತಾರೆ ಅಂದರೆ ಅರ್ಜಿ ಹಾಕಿದ್ರೆ ಕರೆದುಕೊಂಡು ಬಂದು ನಿಲ್ಲಿಸುತ್ತೇವೆ ಅಂತಾರೆ. ಈ ಬಗ್ಗೆ ಎಕ್ಸಸೈಜ್ ಮಾಡಬೇಡಿ, ಅದರ ಅವಶ್ಯಕತೆ ಇಲ್ಲ. ಬೇರೆ ಯಾರಾದರೂ ಚನ್ನಪಟ್ಟಣದಲ್ಲಿ ಗುರ್ತಿಸಿಕೊಳ್ಳಬೇಕು ಅಂತ ಹೇಳಿದ್ದೇವೆ ಎಂದು ಜೆಡಿಎಸ್‌ ವರಿಷ್ಠರು ತಿಳಿಸಿದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಿಂದೂ ದೇವತೆಗಳ ಅವಮಾನಕ್ಕೆ ನಿಡುಮಾಮಿಡಿ ಸ್ವಾಮೀಜಿ ಕ್ಷಮೆಯಾಚಿಸಲಿ: ರಹೀಂ ಉಚ್ಚಿಲ್

ಮಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ಹಿಂದೂ ಧರ್ಮದ ದೇವರ ಬಗ್ಗೆ ...

news

ಮಾಲಿನ್ಯದಿಂದ ಮೃತಪಟ್ಟವರ ಪಟ್ಟಿಯಲ್ಲಿ ವಿಶ್ವದಲ್ಲಿ ಭಾರತಕ್ಕೆ ಮೊದಲ ಸ್ಥಾನ

ನವದೆಹಲಿ: ವಾಯು, ನೀರು, ಇತರೆ ಮಾಲಿನ್ಯದಿಂದ ಮೃತಪಟ್ಟವರ ಪ್ರಮಾಣದಲ್ಲಿ ಪ್ರಪಂಚದಲ್ಲಿ ಭಾರತ ಮೊದಲ ...

news

ಟೈಲ್ಸ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿ: 11 ಮಂದಿ ದಾರುಣ ಸಾವು

ಮುಂಬೈ: ಟ್ರಕ್ ವೊಂದು ಉರುಳಿದ್ದ ಪರಿಣಾಮ 11 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ...

news

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ನಾಲ್ವರ ದುರ್ಮರಣ

ಬಳ್ಳಾರಿ: ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ...

Widgets Magazine