ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡ ವಾಗ್ದಾಳಿ

ಬೆಂಗಳೂರು, ಶುಕ್ರವಾರ, 22 ಸೆಪ್ಟಂಬರ್ 2017 (19:47 IST)

Widgets Magazine

ಅಕ್ರಮ ಸಕ್ರಮದಿಂದ ಸಾಕಷ್ಟು ಜನರಿಗೆ ಮೋಸ,ಸಮಸ್ಯೆಗಳಾಗುತ್ತಿವೆ ಎಂದು ವಿರುದ್ಧ ಜೆಡಿಎಸ್ ವರಿಷ್ಠ ವಾಗ್ದಾಳಿ ನಡೆಸಿದ್ದಾರೆ.
ಹಾರೋಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜನಪ್ರಿಯತೆ ಗಳಿಸಲು ಅಕ್ರಮ ಸಕ್ರಮಕ್ಕೆ ಮುಂದಾಗಿದ್ದಾರೆ. ಆದರೆ, ಇದರಿಂದ ಸಾಮಾನ್ಯ ಜನತೆಗೆ ತೀವ್ರ ತೊಂದರೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರಿಂದ ಭೂಮಿ ಪಡೆದು ಡಿ ಗ್ರೂಪ್ ನೌಕರರಿಗೆ ಸೈಟ್ ಹಂಚಲು ನಿರ್ಧರಿಸಿದ್ದರು. ಆ ಸಂದರ್ಭದಲ್ಲಿ ಬಹಳಷ್ಟು ಅಕ್ರಮಗಳು ನಡೆದಿವೆ. ಡಿ ಗ್ರೂಪ್ ನೌಕರರ ಜೊತೆ ಇತರರಿಗೂ ಅಕ್ರಮವಾಗಿ ಸೈಟ್ ಹಂಚಲಾಗಿದೆ ಎಂದು ಗುಡುಗಿದರು.
 
ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಅಕ್ರಮ ಸಕ್ರಮ ಮಾಡಿದಲ್ಲಿ ತುಂಬಾ ಜನರಿಗೆ ಅನ್ಯಾಯವಾಗಲಿದೆ. ಸಿಎಂ ಸಿದ್ದರಾಮಯ್ಯ ಸರಕಾರ ಕೂಡಲೇ ಅಕ್ರಮ ಸಕ್ರಮ ಹಿಂಪಡೆಯುವುದು ಸೂಕ್ತ ಎಂದು ಜೆಡಿಎಸ್ ವರಿಷ್ಠ, ಎಚ್.ಡಿ.ದೇವೇಗೌಡ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಭಾರತ, ಪಾಕ್ ದ್ವಿಪಕ್ಷೀಯವಾಗಿ ಕಾಶ್ಮಿರ ಸಮಸ್ಯೆ ಇತ್ಯರ್ಥಗೊಳಿಸಲಿ: ಚೀನಾ

ವಿಶ್ವಸಂಸ್ಥೆ: ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಮಾತುಕತೆಗಳ ಮೂಲಕ ...

news

ಯಡಿಯೂರಪ್ಪ ಜೈಲಿಗೆ ಹೋದಾಗ ಎಸಿಬಿ ಇತ್ತಾ…?

ಬೆಂಗಳೂರು: ಯಡಿಯೂರಪ್ಪ ಡಿನೋಟಿಫಿಕೇಶನ್ ವಿಚಾರದಲ್ಲಿ ಕೋರ್ಟ್ ನಲ್ಲಿ ಸ್ಟೇ ಸಿಗೋದು ಸಾಮಾನ್ಯವಾಗಿ ನಡೆಯುವ ...

news

ಕೌಟಂಬಿಕ ಕಲಹ: ಹಾಡಹಗಲೇ ತಂಗಿಯ ಕತ್ತು ಕೊಯ್ದ ಅಣ್ಣ

ತುಮಕೂರು: ಕೌಟಂಬಿಕ ಕಲಹದಿಂದ ಕೋಪಗೊಂಡ ಅಣ್ಣನೊಬ್ಬ ತನ್ನ ಒಡಹುಟ್ಟಿದ ತಂಗಿಯ ಕತ್ತು ಕೊಯ್ದು ಹಾಡಹಗಲೇ ...

news

ತಪ್ಪು ಕೇಸ್ ಹಾಕಿಸಿದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಗೋ.ಮಧುಸೂದನ್

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಮೇಲೆ ಎಸಿಬಿ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡುವ ಮೂಲಕ ...

Widgets Magazine