ಗಾಂಜಾ ಸ್ಮಗ್ಲಿಂಗ್ ಹೊಸದೇನಲ್ಲ, ಡಿಐಜಿ ಡಿ. ರೂಪಾ ಅನ್ವೇಷಣೆ ಮಾಡಿಲ್ಲ: ಡಿಜಿ

ಬೆಂಗಳೂರು, ಗುರುವಾರ, 13 ಜುಲೈ 2017 (11:39 IST)

ಶಶಿಕಲಾಗೆ ಕಾರಾಗೃಹದಲ್ಲಿ ವಿಶೇಷ ಅಡುಗೆ ಮನೆ ಮತ್ತು ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂಬ ಕಾರಾಗ್ಋಹ ಡಿಐಜಿ ರೂಪಾ ನೀಡಿರುವ ವರದಿಯನ್ನ ಡಿಜಿ ಸತ್ಯನಾರಾಯಣ ರಾವ್ ತಳ್ಳಿ ಹಾಕಿದ್ದಾರೆ.


ಶಶಿಕಲಾ ಅವರಿಗೆ ಯಾವುದೇ ವಿಶೇಷ ಸೌಲಭ್ಯ ಒದಗಿಸಿಲ್ಲ. ಸಾಮಾನ್ಯ ಕೈದಿ ಇರುವ ಸೆಲ್`ನಲ್ಲೇ ಇರಿಸಲಾಗಿದೆ. ಡಿಐಜಿ ರೂಪಾ ಅವರಿಗೆ ಕಾರಾಗೃಹದ ಬಗ್ಗೆ ಗೊತ್ತಿಲ್ಲ. ಫೋಟೋ ತೆಗೆದು ಮಾಧ್ಯಮಗಳಿಗೆ ಕಳುಹಿಸುವುದು ಮಾತ್ರ ಗೊತ್ತಿದೆ. ಕಚೇರಿ ಸಮಯ ಮುಗಿದ ಮೇಲೆ ವರದಿ ನನಗೆ ಬಂದಿದೆ. ನಮಗೆ ತಿಳಿಸದೇ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಯಾವುದೇ ರಾಜಕಾರಣಿಯ ಶಿಫಾರಸ್ಸನ್ನ ನಾವು ಕೇರ್ ಮಾಡಿಲ್ಲ. ವಿಶೇಷ ಸೌಲಭ್ಯ ನೀಡಿಲ್ಲ ಎಂದಿದ್ದಾರೆ.

25 ಕೈದಿಗಳ ಪೈಕಿ 18 ಕೈದಿಗಳು ಗಾಂಜಾ ಮತ್ತಿನಲ್ಲಿ ತೇಲುತ್ತಿದ್ದಾರೆಂಬ ರೂಪಾ ವರದಿ ಬಗ್ಗೆ ಉತ್ತರಿಸಿದ ಅವರು ಪ್ರತಿನಿತ್ಯ ಗಾಂಜಾ ಸ್ಮಗ್ಲಿಂಗ್ ಪ್ರಯತ್ನ ನಡೆಯುತ್ತಿದೆ. ಅದನ್ನ ನಾವು ತಡೆಯುತ್ತೇವೆ. ಇದರಲ್ಲಿ ರೂಪಾಮಾಡಿದ ಅನ್ವೇಷಣೆ ಏನೂ ಇಲ್ಲ ಎಂದು ಹೇಳಿದ್ದಾರೆ.

ಇದೇವೇಳೆ, 2 ಕೋಟಿ ರೂ. ಲಂಚ ಪಡೆದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಡಿಜಿ ಸತ್ಯನಾರಾಯಣ ರಾವ್, ಹಣವಿರಲಿ ಒಂದು ಬಿಸ್ಕೆಟ್ ಖುಡ ಪಡೆದಿಲ್ಲ ಎಂದಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಶಶಿಕಲಾರಿಂದ ಒಂದು ಬಿಸ್ಕಟ್ ಕೂಡಾ ತೆಗೆದುಕೊಂಡಿಲ್ಲ’

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ನಟರಾಜನ್ ಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬ ಕಾರಾಗೃಹ ...

news

ಬೀಟಲ್ ಡ್ರಾಯಿಂಗ್ ಅಂದ್ರೆ ಗೊತ್ತಾ..ಈ ಚಿತ್ರಕ್ಕೆ ಈಗ ಬಾರಿ ಡಿಮ್ಯಾಂಡ್

ಸಾಕು ಪ್ರಾಣಿಗಳಂತೆ ಜಪಾನಿನಲ್ಲಿ ಜೀರುಂಡೆ ಸಾಕು ಕೀಟ. ಜಪಾನಿನ ಈ ಸ್ಪೈಕ್ ಎಂಬ ಹೆಸರಿನ ಜೀರುಂಡೆ ಅಂತಿಂತ ...

news

ಯುದ್ಧಕ್ಕೆ ಸನ್ನದ್ಧ: ಶಸ್ತ್ರಾಸ್ತ್ರ ಸಂಗ್ರಹಕ್ಕೆ ಸೇನೆಗೆ ಹಣಕಾಸು ಅಧಿಕಾರ ನೀಡಿದ ಕೇಂದ್ರ

ಒಂದೆಡೆ ಭಾರತ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದು ಇನ್ನೊಂದೆಡೆ ಜಮ್ಮು ಮತ್ತು ...

news

ಶಶಿಕಲಾಗೆ ವಿಶೇಷ ಕಿಚನ್, ವಿಐಪಿ ಸೌಲಭ್ಯ: ಜೈಲಿನ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ..?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಣ್ಣ ಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ...

Widgets Magazine