ನನಗೆ ಮದುವೆಯಾಗಿ ಹಲವು ವರ್ಷ ಕಳೆದಿವೆ, ನಿಮಗೆ ಮದುವೆಯಾಗುವ ಅವಕಾಶ ಇದೆ: ಶೋಭಾ ಕರಂದ್ಲಾಜೆಗೆ ದಿನೇಶ್ ತಿರುಗೇಟು

ಬೆಂಗಳೂರು, ಬುಧವಾರ, 12 ಜುಲೈ 2017 (19:21 IST)

ದಲಿತ ಯುವತಿ ನನಗೆ ಇಷ್ಟವಾಗಿದ್ದರೆ ಅವರನ್ನೇ ಮದುವೆಯಾಗುತ್ತಿದ್ದೆ. ನನಗೆ ಯಾವುದೇ ಕಟ್ಟುಪಾಡುಗಳಿರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೆಶ್ ಗುಂಡೂರಾವ್ ಸಂಸದೆ ಶೋಭಾ ಕರಂದ್ಲಾಜೆಗ ತಿರುಗೇಟು ನೀಡಿದ್ದಾರೆ.


ನಿಮಗೆ ದಲಿತರ ಬಗ್ಗೆ ಪ್ರೀತಿ ಇದ್ದರೆ ನಿಮ್ಮ ಮನೆಯ ಹೆಣ್ಣುಮಕ್ಕಳನ್ನ ಅವರಿಗೆ ಕೊಡಿ, ಅವರ ಮನೆಯಿಂದ ಹೆಣ್ಣುಮಕ್ಕಳ ಮದುವೆ ಮಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ, ನಿಮ್ಮ ಕೆಪಿಸಿಸಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರು ದಲಿತರನ್ನ ಮದುವೆಯಾಗಿದ್ದಾರಾ ಎಂದು ಪ್ರಶ್ನಿಸಿದ್ದರು.

ಶೋಭಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, ನಾನು ಹಿಂದು, ಮುಸ್ಲಿಂ ಹುಡುಗಿಯನ್ನ ಮದುವೆಯಾಗಿದ್ದೇನೆ. ಅದೇನು ಕಾನೂನು ಬಾಹಿರವೇ..? ದಲಿತ ಮಹಿಳೆ ಇಷ್ಟವಾಗಿದ್ದರೆ ಅವರನ್ನೇ ಮದುವೆಯಾಗುತ್ತಿದ್ದೆ. ನನಗೆ ಯಾವುದೇ ಭೇದ ಭಾವವಿಲ್ಲ. ನನಗೆ ಮದುವೆಯಾಗಿ 20 ವರ್ಷಗಳೇ ಕಳೆದಿವೆ. ನಿಮಗೆ ಅವಕಾಶವಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪರ ಪುರುಷನ ಜೊತೆ ಬೆಡ್ ರೂಮಿನಲ್ಲಿ ಪತಿ ಕೈಗೆ ಸಿಕ್ಕಿಬಿದ್ದ ಮಹಿಳೆ ಮಾಡಿದ್ದೇನು ಗೊತ್ತಾ..?

ಪರ ಪುರುಷನ ಜೊತೆ ಮಂಚವೇರಿ ಸಂಭೋಗದಲ್ಲಿ ತೊಡಗಿದ್ದ ಪತ್ನಿ ಗಂಡನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಾಗ ...

news

ಜಂತಕಲ್ ಮೈನಿಂಗ್ ಅಕ್ರಮ: ಗಗನ್ ಬಡೇರಿಯಾಗೆ ನಿರೀಕ್ಷಣಾ ಜಾಮೀನು ಮಂಜೂರು

ಜಂತಕಲ್ ಮೈನಿಂಗ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗಂಗರಾಮ್ ಬಡೇರಿಯಾ ಪುತ್ರ ಗಗನ್ ...

news

ಕಾಮುಕ ಉಮೇಶ್‌ರೆಡ್ಡಿಗಿಂತಲೂ ವಿಕೃತ ಕಾಮಿ ಅರೆಸ್ಟ್

ವಿಜಯಪುರ: ಕುಖ್ಯಾತ ಉಮೇಶ್‌ರೆಡ್ಡಿಗಿಂತಲೂ ವಿಕೃತ ಕಾಮಿಯಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ...

news

ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯಗೆ ಯೋಗ್ಯತೆಯಿಲ್ಲ : ಆರ್.ಅಶೋಕ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಿಎಂ ಆಗುವ ಯೋಗ್ಯತೆಯಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ...

Widgets Magazine