ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಫೇಸ್ಬುಕ್`ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್ ಪತ್ನಿ

ಬೆಂಗಳೂರು, ಬುಧವಾರ, 12 ಜುಲೈ 2017 (21:22 IST)

ದಲಿತರ ಮೇಲೆ ಪ್ರೀತಿ ಇದ್ದರೆ ದಲಿತರಿಗೆ ನಿಮ್ಮ ಹೆಣ್ಣುಮಕ್ಕಳನ್ನ ಕೊಡಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಕಾರ್ಯಾಧ್ಯಕ್ಷರು ಯಾರನ್ನ ಮದುವೆಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದೀಗ, ಶೋಭಾ ಕರಂದ್ಲಾಜೆ ಹೇಳಿಕೆಗೆ ದಿನೇಶ್ ಗುಂಡೂರಾವ್ ಪತ್ನಿ ಟಬು ಫೇಸ್ಬುಕ್`ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 


ನಾನು ಮುಸ್ಲಿಂ, ನನ್ನ ಪತಿ ದಿನೇಶ್ ಗುಂಡೂರಾಂ ಬ್ರಾಹ್ಮಿನ್. ಇದರಲ್ಲಿ ಯಾವುದೇ ರಹಸ್ಯವಿಲ್ಲ. ಕಳೆದ 2 ದಶಕಗಳಿಂದ ನಮ್ಮ ದಾಂಪತ್ಯ ಜೀವನ ಸುಖಕರವಾಗಿಯೇ ಇದೆ. ಇಲ್ಲಿಯವರೆಗೆ ಯಾವುದೇ ಧರ್ಮದ ವಿಚಾರ ನಮ್ಮ ಮನಸ್ಸುಗಳನ್ನ ಎಲ್ಲೆ ಮೀರಿಲ್ಲ. ನಾವು ಪರಿಪೂರ್ಣ ಜೀವನ ನಡೆಸುತ್ತಿದ್ದೇವೆ. ನಾವಿಬ್ಬರೂ ಮತಾಂತರಗೊಂಡಿಲ್ಲ. ಎಲ್ಲ ಧರ್ಮಗಳನ್ನ ಗೌರವಿಸುವುದು ನಮಗೆ ಅಭ್ಯಾಸವಾಗಿದೆ. ನಾವು ಭಾರತೀಯರ ಮೂಲಮಂತ್ರವಾದ ವಿವಿಧತೆಯಲ್ಲಿ ಏಕತೆಯ ಧೈಯವಾಕ್ಯವನ್ನ ಸಾರುತ್ತಿದ್ದೇವೆ.
  


ಒಬ್ಬ ಗೃಹಿಣಿ ಮತ್ತು ಎರಡು ಹೆಣ್ಣುಮಕ್ಕಳ ತಾಯಿಯಾಗಿರುವ ನನಗೆ ಶೋಭಾ ಕರಂದ್ಲಾಜೆ ತಮ್ಮ ಸಂಕುಚಿತ ರಾಜಕೀಯ ಲಾಭಕ್ಕಾಗಿ ನಮ್ಮ ಖಾಸಗಿ ಜೀವನಕ್ಕೆ ಅತಿಕ್ರಮಣ ಮಾಡಿರುವುದು ಅತ್ಯಂತ ನೋವು ತಂದಿದೆ. ಸಂಬಂಧವಿಲ್ಲದ ವಿಷಯಕ್ಕೆ ನಮ್ಮ ಕುಟುಂಬವನ್ನ ಎಳೆದು ತಂದಿರುವ ಅವರ ಉದ್ದೇಶ ಧಾರ್ಮಿಕ ಸಾಮರಸ್ಯ ಹಾಳುಮಾಡುವುದಾಗಿದೆ. ಶೋಭಾ ಕರಂದ್ಲಾಜೆ ಈ ಹಂತಕ್ಕೆ ಇಳಿದಿರುವುದು ನಿಜಕ್ಕೂ ದುರದೃಷ್ಟಕರ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನನಗೆ ಮದುವೆಯಾಗಿ ಹಲವು ವರ್ಷ ಕಳೆದಿವೆ, ನಿಮಗೆ ಮದುವೆಯಾಗುವ ಅವಕಾಶ ಇದೆ: ಶೋಭಾ ಕರಂದ್ಲಾಜೆಗೆ ದಿನೇಶ್ ತಿರುಗೇಟು

ದಲಿತ ಯುವತಿ ನನಗೆ ಇಷ್ಟವಾಗಿದ್ದರೆ ಅವರನ್ನೇ ಮದುವೆಯಾಗುತ್ತಿದ್ದೆ. ನನಗೆ ಯಾವುದೇ ಕಟ್ಟುಪಾಡುಗಳಿರಲಿಲ್ಲ ...

news

ಪರ ಪುರುಷನ ಜೊತೆ ಬೆಡ್ ರೂಮಿನಲ್ಲಿ ಪತಿ ಕೈಗೆ ಸಿಕ್ಕಿಬಿದ್ದ ಮಹಿಳೆ ಮಾಡಿದ್ದೇನು ಗೊತ್ತಾ..?

ಪರ ಪುರುಷನ ಜೊತೆ ಮಂಚವೇರಿ ಸಂಭೋಗದಲ್ಲಿ ತೊಡಗಿದ್ದ ಪತ್ನಿ ಗಂಡನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಾಗ ...

news

ಜಂತಕಲ್ ಮೈನಿಂಗ್ ಅಕ್ರಮ: ಗಗನ್ ಬಡೇರಿಯಾಗೆ ನಿರೀಕ್ಷಣಾ ಜಾಮೀನು ಮಂಜೂರು

ಜಂತಕಲ್ ಮೈನಿಂಗ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗಂಗರಾಮ್ ಬಡೇರಿಯಾ ಪುತ್ರ ಗಗನ್ ...

news

ಕಾಮುಕ ಉಮೇಶ್‌ರೆಡ್ಡಿಗಿಂತಲೂ ವಿಕೃತ ಕಾಮಿ ಅರೆಸ್ಟ್

ವಿಜಯಪುರ: ಕುಖ್ಯಾತ ಉಮೇಶ್‌ರೆಡ್ಡಿಗಿಂತಲೂ ವಿಕೃತ ಕಾಮಿಯಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ...

Widgets Magazine