ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಆಗುತ್ತಿರುವ ಅಪಘಾತಗಳನ್ನ ತಡೆಯಲು ನಿನ್ನೆಯಿಂದ ಬೈಕ್, ಆಟೋ, ಟ್ರ್ಯಾಕ್ಟರ್ ಮತ್ತು ಮಲ್ಟಿ ಆ್ಯಕ್ಸೆಲ್ ವಾಹನಗಳಿಗೆ ನಿಷೇಧ ಹೇರಿದೆ. ಆದರೂ ಕೋಣನ ಮುಂದೆ ಕಿನ್ನರಿ ಬಾರಿಸಿ ಏನು ಪ್ರಯೋಜನ ಎಂಬಂತೆ ನಿನ್ನೆಯಿಂದಲೇ ದ್ವಿಚಕ್ರ ವಾಹನ ಸವಾರರು ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿದ್ದಾರೆ. ಆದ್ದರಿಂದ ಆದೇಶ ಉಲ್ಲಂಘಿಸಿ ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡಿದ ಬೈಕ್ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.ಮದ್ದೂರು ಪೊಲೀಸರು ನಿನ್ನೆ ಒಂದೇ ದಿನ