ಹನುಮ ಜಯಂತಿ ಮೆರವಣಿಗೆಗೆ ಅಡ್ಡಿ- ಸಂಸದ ಪ್ರತಾಪ ಸಿಂಹ ಸೇರಿ ಹಲವರ ಬಂಧನ

ಮೈಸೂರು, ಭಾನುವಾರ, 3 ಡಿಸೆಂಬರ್ 2017 (13:28 IST)

ಮೈಸೂರಿನ ಹುಣಸೂರಿನಲ್ಲಿ ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆ ಅಡ್ಡಿ ಪಡಿಸಲಾಗಿದ್ದು, ಮೆರವಣಿಗೆಗೆ ಹೊರಡುವ ಮುನ್ನವೇ ಭಕ್ತರನ್ನು ಹಾಗೂ ಸಂಸದ ಅವರನ್ನು ಬಂಧಿಸಲಾಗಿದೆ.

ಹನುಮ ಜಯಂತಿ ಮೆರವಣಿಗೆಯಲ್ಲಿ ಸಂಸದ ಪ್ರತಾಪಸಿಂಹ ಭಾಗವಹಿಸಲು ಹುಣಸೂರಿನ ಟೌನ್‍‍ಹಾಲ್‍‍ ಹತ್ತಿರ ಬಂದಾಗ ಪೊಲೀಸರುವ ವಶಕ್ಕೆ ಪಡೆದಿದ್ದಾರೆ. ಹನುಮ ಜಯಂತಿಯ ಮೆರವಣಿಗೆಗೆ ಸಿದ್ಧವಾಗಿದ್ದ 50 ಕ್ಕೂ ಅಧಿಕ ಭಕ್ತರನ್ನು ಕೂಡ ಬಂಧಿಸಲಾಗಿದೆ.

ಪ್ರತಾಪಸಿಂಹ ಅವರು ಬರುವವರೆಗೆ ಮೆರವಣಿಗೆ ನಡೆಸಲ್ಲ ಎಂದು ಭಕ್ತರು ಪಟ್ಟು ಹಿಡಿದು ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದಾರೆ. ಈ ನಡುವೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ.
 
ಮಾಧ್ಯಮಗಳೊಂಡಿಗೆ ಮಾತನಾಡಿದ ಪ್ರತಾಪಸಿಂಹ ಅವರು, ಸರ್ಕಾರ ಪೊಲೀಸರ ಮೂಲಕ ಮೆರವಣಿಗೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹನುಮ ಮೆರವಣಿಗೆ: ಸಂಸದ ಪ್ರತಾಪ್ ಸಿಂಹ ಬಂಧನ

ಹುಣಸೂರು; ನಿಷೇಧಧ ನಡುವೆಯೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಿಜೆಪಿ ಸಂಸದ ಪ್ರತಾಪ್ ...

news

ರಾಜೀನಾಮೆ ನೀಡಿ ಸಿಬಿಐ ತನಿಖೆ ಎದುರಿಸಿ: ಸಚಿವ ಕುಲ್ಕರ್ಣಿಗೆ ಸ್ವಾಮಿಜಿ ಸಲಹೆ

ಬೆಂಗಳೂರು: ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ ಎದುರಿಸುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಖಾತೆ ...

news

ಓಖಿ ಚಂಡಮಾರುತ ಹೊಡೆತಕ್ಕೆ ಮದುವೆ ಮನೆ ಓಡಿದ ವಧು-ವರ, ಸಂಬಂಧಿಕರು!

ಕಡಲ ತೀರದಲ್ಲಿ ಚಂಡಮಾರುತ ಅಬ್ಬರ ಜೋರಾಗಿದ್ದು, ಓಖಿಯ ಹೊಡೆತಕ್ಕೆ ಮದುವೆ ಮನೆಯಿಂದ ವಧು-ವರ ಹಾಗೂ ...

news

ಬಿಜೆಪಿ ನಾಯಕರು ಸಂಸ್ಕಾರ,ಸಂಸ್ಕ್ರತಿಯಿಲ್ಲದ ಪುಡಾರಿಗಳು: ಸಚಿವ ರಾಯರೆಡ್ಡಿ

ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸಂಸ್ಕಾರವಿಲ್ಲದ ...

Widgets Magazine
Widgets Magazine