ವರ್ಗಾವಣೆ ವಿಚಾರದಲ್ಲಿ ಡಿಕೆಶಿ-ಎಚ್ ಡಿ ರೇವಣ್ಣ ಫೈಟ್

ಬೆಂಗಳೂರು, ಶುಕ್ರವಾರ, 15 ಜೂನ್ 2018 (09:32 IST)

ಬೆಂಗಳೂರು: ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ತಮಗೆ ಸಂಬಂಧಪಡದ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಆಕ್ರೋಶಗೊಂಡಿದ್ದಾರೆ.
 
ತಮ್ಮ ಗಮನಕ್ಕೆ ಬಾರದೇ ತಮ್ಮ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಸಚಿವ ಡಿಕೆಶಿ, ಸಿಎಂ ಕುಮಾರಸ್ವಾಮಿಯವರಿಗೆ ದೂರವಾಣಿ ಮುಖಾಂತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
 
ಆದರೆ ಡಿಕೆಶಿ ಆರೋಪಕ್ಕೆ ಉತ್ತರಿಸಿರುವ ಎಚ್ ಡಿ ರೇವಣ್ಣ ತನಗೆ ಸಂಬಂಧಪಡದ ಇಲಾಖೆಗಳ ಬಗ್ಗೆ ನಾನೇಕೆ ಹಸ್ತಕ್ಷೇಪ ಮಾಡಲಿ? ವರ್ಗಾವಣೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಆದರೆ ಸಮನ್ವಯ ಸಮಿತಿ ಸಭೆಯಲ್ಲೂ ಡಿಕೆಶಿ ಈ ವಿಚಾರ ಪ್ರಸ್ತಾಪಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ನಿವಾಸದ ಬಳಿ ಆತಂಕ ಸೃಷ್ಟಿಸಿದ ಹಾರುವ ವಸ್ತು

ನವದೆಹಲಿ: ಪ್ರಧಾನಿ ಮೋದಿಯ ನವದೆಹಲಿಯ ನಿವಾಸದ ಬಳಿ ಹಾರುವ ವಸ್ತುವೊಂದು ಪತ್ತೆಯಾಗಿದ್ದು, ಆತಂಕಕ್ಕೆ ...

news

ಶೃಂಗೇರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ

ಬೆಂಗಳೂರು: ಮುಂಗಾರು ಮಳೆಯ ಅಬ್ಬರಕ್ಕೆ ಶೃಂಗೇರಿ, ಮಡಿಕೇರಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ...

news

ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿ ಒಪ್ಪುವಿರಾ ಎಂಬ ಪ್ರಶ್ನೆಗೆ ಲಾಲೂ ಪುತ್ರನ ಉತ್ತರ ಹೇಗಿತ್ತು ನೋಡಿ!

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಮಹಾಘಟಬಂಧನ್ ...

news

ನಾನು ಸಿಎಂ ಆಗುವುದು ತಂದೆ ದೇವೇಗೌಡರಿಗೂ ಇಷ್ಟವಿರಲಿಲ್ಲ: ಸಿಎಂ ಎಚ್ ಡಿಕೆ

ಬೆಂಗಳೂರು: ನಾನು ಸಿಎಂ ಆಗುವುದು ತಂದೆ , ಜೆಡಿಎಸ್ ವರಿಷ್ಠ ದೇವೇಗೌಡರೂ ಇಷ್ಟವಿರಲಿಲ್ಲ. ಕಾಂಗ್ರೆಸ್ ನಿಂದ ...

Widgets Magazine
Widgets Magazine