ಕೋಡ್ ವರ್ಡ್ ಹೇಳದೇ ಸತಾಯಿಸುತ್ತಿರುವ ಡಿಕೆಶಿ?

ಬೆಂಗಳೂರು, ಗುರುವಾರ, 3 ಆಗಸ್ಟ್ 2017 (09:17 IST)

ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ನಿವಾಸದಲ್ಲಿ ಮೊಕ್ಕಾಂ ಹೂಡಿರುವ ಐಟಿ ಅಧಿಕಾರಿಗಳು ರಹಸ್ಯ ಲಾಕರ್ ಗಳನ್ನು ತೆರೆಯಲು ಹರಸಾಹಸ ನಡೆಸುತ್ತಿದ್ದಾರೆ. ಆದರೆ ಡಿಕೆಶಿ ಕೋಡ್ ವರ್ಡ್ ಹೇಳದೇ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.


 
ಪವರ್ ಮಿನಸ್ಟರ್ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ನಾಲ್ಕು ಸೀಕ್ರೆಟ್ ಲಾಕರ್ ಪತ್ತೆಯಾಗಿತ್ತು. ಆದರೆ ಈ ಪೈಕಿ ಮೂರು ಲಾಕರ್ ಗಳನ್ನು ತೆರೆಯಬೇಕಿದೆ. ಇದನ್ನು ತೆರೆಯಬೇಕೆಂದರೆ ರಹಸ್ಯ ಪಾಸ್ ವರ್ಡ್ ಬೇಕು. ಆದರೆ ಪಾಸ್ ವರ್ಡ್ ಗೊತ್ತಿರುವುದು ಡಿಕೆಶಿಗೆ ಮಾತ್ರ. ಆದರೆ ಸಚಿವರು ಮಾತ್ರ ಪಾಸ್ ವರ್ಡ್ ನೀಡದೇ ಸತಾಯಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
 
ಈ ಲಾಕರ್ ಗಳನ್ನು ತೆರೆದರೆ ಮತ್ತಷ್ಟು ದಾಖಲೆಗಳ ಸಂಗ್ರಹ ಸಿಗಬಹುದೆಂದು ಲೆಕ್ಕಾಚಾರ ಹಾಕಲಾಗಿದೆ. ರಾತ್ರಿಯೂ ಡಿಕೆಶಿ ನಿವಾಸದಲ್ಲೇ ಮೊಕ್ಕಾಂ ಹೂಡಿದ್ದ ಅಧಿಕಾರಿಗಳು ಅಲ್ಲಿಗೇ ತಿಂಡಿ ತರಿಸಿಕೊಂಡು ಉಪಾಹಾರ ಸೇವಿಸಿ ಮತ್ತೆ ತಮ್ಮ ಕೆಲಸ ಮುಂದುವರಿಸಿದ್ದಾರೆ.
 
ಇದನ್ನೂ ಓದಿ..  ಬಾಳೆ ಹಣ್ಣು ತಿನ್ನುವುದರಿಂದ ದಪ್ಪಗಾಗುವುದು ನಿಜವೇ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಶ್ವಬ್ಯಾಂಕ್`ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಬಹುದೊಡ್ಡ ಜಯ

ಜೇಲಬ್ ಮತ್ತು ಚೆನಬ್ ನದಿಗಳಲ್ಲಿ ಜಲವಿದ್ಯುತ್ ಸ್ಥಾವರ ನಿರ್ಮಾಣ ವಿಚಾರದಲ್ಲಿ ಪಾಕಿಸ್ತಾನ ವಿರುದ್ಧ ...

news

ಐಟಿ ದಾಳಿಗೂ, ಪ್ರಧಾನಿಗೂ, ಸಂಬಂಧ ಕಲ್ಪಿಸುವುದು ಬಾಲಿಶ: ಶ್ರೀನಿವಾಸ್ ಪ್ರಸಾದ್

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ನಡೆದ ಐಟಿ ದಾಳಿಗೂ ಪ್ರಧಾನಿ ಮೋದಿಗೂ ಸಂಬಂಧ ...

news

ಐಟಿ ದಾಳಿ: ಕಾಂಗ್ರೆಸ್‌ನಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆಯದೆ ...

news

ಐಟಿ ದಾಳಿಗೆ ಭಯಪಡುವ ಅಗತ್ಯವಿಲ್ಲ: ಸಿಎಂಗೆ ವೇಣುಗೋಪಾಲ್ ಅಭಯ

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿಗೆ ಭಯಪಡುವ ಅಗತ್ಯವಿಲ್ಲ ...

Widgets Magazine