ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಡಿ.ಕೆ. ಶಿವಕುಮಾರ್

ಬೆಂಗಳೂರು, ಸೋಮವಾರ, 7 ಆಗಸ್ಟ್ 2017 (12:32 IST)

ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ 2 ದಿನಗಳಿಂದ ನಿರಾಳರಾಗಿದ್ದ ಸಚಿವ ಡಿ.ಕೆ. ಶಿವಕುಮಾರ್ ಇವತ್ತು ಮತ್ತೆ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಐಟಿ ಇಲಾಖೆ ಸಮನ್ಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.


ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿಗೆ ತೆರಳಿರುವ ಡಿಕೆಶಿ ವಿಚಾರಣೆಗೆ ಹಾಜರಾಗಿದ್ದಾರೆ. ಡಿ.ಕೆ. ಶಿವಕುಮಾರ್`ಗೆ ಸಹೋದರ ಡಿ.ಕೆ. ಸುರೇಶ್ ಸಹ ಸಾಥ್ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿನ  ವಶಪಡಿಸಿಕೊಂಡ ದಾಕಲೆ ಪತ್ರಗಳಿಗೆ ಸಂಬಂಧಪಟ್ಟಂತೆ ಐಟಿ ಅಧಿಕಾರಿಗಳು ಸ್ಪಷ್ಟನೆ ಮತ್ತು ದಾಖಲೆಗಳನ್ನನೀಡಬೇಕಿದೆ. ದಾಖಲೆಗಳು ಸರಿ ಎನಿಸಿದರೆ ವಶಪಡಿಸಿಕೊಂಡ ಸಂಪತ್ತನ್ನ ವಾಪಸ್ ನೀಡಲಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ಧೈರ್ಯವಾಗಿದ್ದೇನೆ. ಯಾವುದಕ್ಕೂ ಹೆದರುವುದಿಲ್ಲ. ಐಟಿ ಅಧಿಕಾರಿಗಳಿಗೆ ಸಮರ್ಪಕ ಉತ್ತರ ಕೊಡುತ್ತೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಸಂಪುಟ ಸಭೆ ಇರುವುದರಿಂದ ಗುಜರಾತ್ ಶಾಸಕರ ಜೊತೆ ಅಹಮದಾಬಾದ್`ಗೆ ತೆರಳಲು ಸಾಧ್ಯವಾಗಿಲ್ಲ. ಮುಂದೆ ತೆರಳುತ್ತೇನೆ ಎಂದು ಹೇಳಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಡಿ.ಕೆ. ಶಿವಕುಮಾರ್ ಐಟಿ ಇಲಾಖೆ ಡಿ.ಕೆ. ಸುರೇಶ್ Dkshivakumar Dksuresh It Raid

ಸುದ್ದಿಗಳು

news

ಯುವತಿಯ ಬೆತ್ತಲೆ ಫೋಟೋ, ವಿಡಿಯೋ ಕಳುಹಿಸಿ ಖೆಡ್ಆಗೆ ಕೆಡವುತ್ತಾರೆ..!

ಭಾರತೀಯ ಹುಡುಗಿಯರನ್ನ ಕಳುಹಿಸುತ್ತೇವೆ ಎಂದು ವಿದೇಶಿಯರಿಗೆ ಆಮಿಶವೊಡ್ಡಿ ಸಾವಿರಾರು ಡಾಲರ್ ಹಣ ಪಡೆದು ...

news

ಊಟಕ್ಕಾಗಿ ಪತ್ನಿ ಜತೆ ಜಗಳವಾಡಿ ಮಕ್ಕಳನ್ನೇ ಕೊಂದ ಪಾಪಿ ತಂದೆ!

ನವದೆಹಲಿ: ಊಟದ ವಿಚಾರಕ್ಕಾಗಿ ಪತ್ನಿ ಜತೆ ಜಗಳವಾಡಿ ಕೊಲೆಯ ಹಂತಕ್ಕೆ ತಲುಪುವ ಕೆಲವು ಘಟನೆಗಳು ಇತ್ತೀಚೆಗೆ ...

news

ನಮಗೆ ಶಾಂತಿ ಬೇಕು ಆದರೆ ಭಾರತವೇ ಪ್ರತಿಕ್ರಿಯಿಸುತ್ತಿಲ್ಲ ಎಂದ ಪಾಕ್ ಸಚಿವ

ಇಸ್ಲಾಮಾಬಾದ್: ಪಾಕಿಸ್ತಾನ ಕಾಶ್ಮೀರ ವಿವಾದದ ಬಗ್ಗೆ ಮಾತುಕತೆಗೆ ಸಿದ್ಧ. ಆದರೆ ಭಾರತವೇ ಸಕಾರಾತ್ಮಕ ...

news

ಮುಸ್ಲಿಂ ಯುವತಿಯರ ವಿದ್ಯಾಭ್ಯಾಸಕ್ಕಾಗಿ ಕೇಂದ್ರದಿಂದ ಶಾದಿ ಶಗುನ್ ಯೋಜನೆ

ಮುಸ್ಲಿಂ ಯುವತಿಯರ ಉನ್ನತ ಶಿಕ್ಷಣ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ 51,000 ರೂ. ಪ್ರೋತ್ಸಾಹ ಧನ ನೀಡುವ ...

Widgets Magazine