ಐಟಿ ದಾಳಿ ಬೆನ್ನಲ್ಲೇ ಡಿಕೆಶಿ ಬೆನ್ನತ್ತಿದ ಮತ್ತೊಂದು ಪ್ರಕರಣ..?

ಬೆಂಗಳೂರು, ಶುಕ್ರವಾರ, 4 ಆಗಸ್ಟ್ 2017 (08:27 IST)

ವರ ಮಹಾಲಕ್ಷ್ಮೀ ಹಬ್ಬದ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಮುಂದುವರೆದಿರುವ ಬೆನ್ನಲ್ಲೇ ಐಟಿ ಇಲಾಖೆಯಿಂದ ನಿನ್ನೆ ಬೆಳಗ್ಗೆಯೇ ಬೆಚ್ಚಿ ಬೀಳಿಸುವ ಸುದ್ದಿ ಹೊರಬಿದ್ದಿದೆ.


ಈಗಲ್ ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ ಸಚಿವ ಡಿ.ಕೆ. ಶಿಎವಕುಮಾರ್ ಹರಿಯುತ್ತಿದ್ದರೆನ್ನಲಾದ ಕೆಲ ಡೈರಿ ದಾಖಲೆಗಳನ್ನ ಮಮಜರ್ ಮಾಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ದಾಖಲೆಗಳು ಸಚಿವರು ಮತ್ತು ಹೈಕಮಾಂಡ್ ನಡುವಿನ ಹಣ ವರ್ಗಾವಣೆ ಮಾಹಿತಿ ಬಿಚ್ಚಿಟ್ಟವೆ ಎನ್ನಲಾಗುತ್ತಿದೆ. ಯಾವ ಯಾವ ಮುಖಂಡರಿಗೆ ಎಷ್ಟೆಷ್ಟು ಹಣ ನೀಡಲಾಗಿದೆ ಎಂಬ ಮಾಹಿತಿಯೂ ಇದರಲ್ಲಿದೆ ಎನ್ನಲಾಗಿದೆ.

ಈ ಮಧ್ಯೆ ಐಟಿ ಅಧಿಕಾರಿಗಳು ವಶಪಡಿಸಿಕೊಮಡಿರುವ ಹರಿದ ದಾಖಲೆಗಳು ಸಿಕ್ಕಿರುವುದು ಟೈಮ್ಸ್ ನೌ ವರದಿ ಮಾಡಿದೆ. ಈಗಾಗಲೇ ಐಟಿ ದಾಳಿಯಿಂದ ತತ್ತರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಇದು ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಐಟಿ ದಾಳಿ ವೇಳೆ ದಾಖಲೆ ಹರಿಯುವ ಕೆಲಸ ನಡೆಯುತ್ತಿತ್ತು ಎಂದು ಜೇಟ್ಲಿ ಹೇಳಿದ್ದರು.
 ಇದರಲ್ಲಿ ಇನ್ನಷ್ಟು ಓದಿ :  
ಡಿಕೆಶಿವಕುಮಾರ್ ಐಟಿ ತನಿಖೆ ನವದೆಹಲಿ Itraid Dkshivakumar Bengaluru

ಸುದ್ದಿಗಳು

news

ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳ ವಿರುದ್ಧ ಡಿಕೆಶಿ ಗರಂ

ಸತತ 3ನೇ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಐಟಿ ಅಧಿಕಾರಿಗಳ ಡ್ರಿಲ್ ಮುಂದುವರೆದಿದೆ. ...

news

ಅಪರೂಪಕ್ಕೆ ರಾಜ್ಯ ಸಭೆಗೆ ಕಾಲಿಟ್ಟ ಸಚಿನ್ ತೆಂಡುಲ್ಕರ್

ನವದೆಹಲಿ: ಸಚಿನ್ ತೆಂಡುಲ್ಕರ್ ಸಂಸದ ಎನ್ನುವ ವಿಚಾರ ಬಹುತೇಕರಿಗೆ ಮರೆತು ಹೋಗಿದೆ. ಅದನ್ನು ...

news

ಗುಜರಾತ್ ರಾಜ್ಯದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ: ಪರೇಶ್ ರಾವಲ್

ಬೆಂಗಳೂರು: ನಿನ್ನೆ ಸಿಆರ್‌ಪಿಎಫ್‌ ಜೊತೆಯಲ್ಲಿ ಬಂದವರು ನಮ್ಮನ್ನು ಹೆದರಿಸಿದ್ದಾರೆ. ಗುಜರಾತ್ ರಾಜ್ಯದಲ್ಲಿ ...

news

ಪಾಕ್ ಜತೆ ಮಾತುಕತೆಗೆ ಪ್ರಧಾನಿ ಮೋದಿ ಸಿದ್ದ: ಸುಷ್ಮಾ ಸ್ವರಾಜ್

ನವದೆಹಲಿ: ಪಾಕಿಸ್ತಾನದೊಂದಿಗೆ ಪ್ರಧಾನಿ ಮೋದಿ ಮಾತುಕತೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಕೇಂದ್ರ ...

Widgets Magazine