ಹೈಕಮಾಂಡ್`ನಿಂದ ಡಿ.ಕೆ. ಶಿವಕುಮಾರ್`ಗೆ ಭರ್ಜರಿ ಗಿಫ್ಟ್..?

ಬೆಂಗಳೂರು, ಬುಧವಾರ, 9 ಆಗಸ್ಟ್ 2017 (09:23 IST)

ರಾಜ್ಯಸಭೆ ಚುನಾವಣೆಯ ಕುದುರೆ ವ್ಯಾಪಾರದಿಂದ ಪಾರಾಗಲು ರಾಜ್ಯಕ್ಕೆ ಬಂದ ಗುಜರಾತ್`ನ 44 ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದು ಸಚಿವ ಡಿ.ಕೆ. ಶಿವಕುಮಾರ್. ಐಟಿ ದಾಳಿ ನಡೆದರೂ ವಿಚಲಿತರಾಗದೇ ಶಾಸಕರನ್ನ ಸುರಕ್ಷಿತವಾಗಿ ಆಗಸ್ಟ್ 7ರಂದು ಅಹಮದಾಬಾದ್`ಗೆ ಕಳುಹಿಸಿಕೊಟ್ಟಿದ್ದರು. ಪಕ್ಷ ನಿಷ್ಠೆ ಮೆರೆದ ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ್ ಭಾರೀ ಗಿಫ್ಟ್ ನೀಡುವ ಸಾಧ್ಯತೆ ಇದೆ ಮಾಧ್ಯಮಗಳು ವರದಿ ಮಾಡಿವೆ.


ಮಾಧ್ಯಮಗಳ ವರದಿಗಳ ಪ್ರಕಾರ, ಡಿಸೆಂಬರ್`ನಲ್ಲಿ ನಡೆಯಲಿರುವ ಗುಜರಾತ್ ಚುನಾವಣಾ ಉಸ್ತುವಾರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನ ನಿಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಜೆಪಿಯ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಸೆಡ್ಡು ಹೊಡೆಯಲು ಡಿ.ಕೆ. ಶಿವಕುಮಾರ್ ಸೂಕ್ತ ವ್ಯಕ್ತಿ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಹಾಗೇನಾದರೂ ಆದಲ್ಲಿ ಗುಜರಾತ್ ವಿಧಾನಸಭಾ ಚುನಾವಣಾ ರಂಗೇರಲಿದೆ. ರಾಷ್ಟ್ರೀಯ ನಾಯಕರಾಗಿ ಡಿ.ಕೆ. ಶಿವಕುಮಾರ್ ಗುರುತಿಸಿಕೊಳ್ಳಲಿದ್ದಾರೆ.

ಗುಜರಾತ್ ಕಾಂಗ್ರೆಸ್ ಶಾಸಕರಿಗೆ 9 ದಿನ ರಕ್ಷಣೆ ನೀಡಿದ ಡಿ.ಕೆ. ಶಿವಕುಮಾರ್ ಅವರ ಶ್ರಮ ಫಲ ಕೊಟ್ಟಿದೆ. ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ರಾಹುಲ್ ಗಾಂಧಿ ವಿದೇಶಕ್ಕೆ ರಹಸ್ಯವಾಗಿ ಹೋಗುವುದೇಕೆ?’

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವಾಗ ಯಾಕೆ ಭದ್ರತಾ ಸಿಬ್ಬಂದಿಗಳನ್ನು ...

news

ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಜಯಭೇರಿ: ಅಮಿತ್ ಶಾಗೆ ಮುಖಭಂಗ

ನಿನ್ನೆ ದಿನಪೂರ್ತಿ ನಡೆದ ಗುಜರಾತ್ ರಾಜ್ಯಸಭೆ ಚುನಾವಣೆಯ ಮೇಲಾಟಗಳ ಬಳಿಕ ಸೋನಿಯಾ ಗಾಂಧಿ ರಾಜಕೀಯ ...

news

ಕಾಶ್ಮಿರ ಗಡಿಯೊಳಗೆ ನುಗ್ಗುತ್ತೇವೆ ಏನ್‌ ಮಾಡ್ತೀರಾ?: ಪ್ರಧಾನಿ ಮೋದಿಗೆ ಚೀನಾ ನೇರ ಎಚ್ಚರಿಕೆ

ಬೀಜಿಂಗ್: ಡೊಕ್ಲಾಮ್‌ನಲ್ಲಿ ಎರಡು ಸೇನಾಪಡೆಗಳು ಒಂದೇ ಬಾರಿಗೆ ಹಿಂಪಡೆಯಬೇಕು ಎನ್ನುವ ಭಾರತದ ಮನವಿಯನ್ನು ...

news

ಎಐಸಿಸಿ ಕಚೇರಿಯಲ್ಲಿ ಸೋನಿಯಾ ನೇತೃತ್ವದಲ್ಲಿ ತುರ್ತುಸಭೆ

ನವದೆಹಲಿ: ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ತುರ್ತುಸಭೆ ...

Widgets Magazine