ಚಾಮುಂಡಿ ತಾಯಿಗೆ ಬೆಳ್ಳಿ ಆನೆಗಳನ್ನ ಸಮರ್ಪಿಸಿದ ಡಿ.ಕೆ. ಶಿವಕುಮಾರ್

ಮೈಸೂರು, ಸೋಮವಾರ, 25 ಸೆಪ್ಟಂಬರ್ 2017 (12:28 IST)

ಸಚಿವ ಡಿ.ಕೆ. ಶಿವಕುಮಾರ್ ಶರನ್ನವರಾತ್ರಿ ಪ್ರಯುಕ್ತ ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಡಿ.ಕೆ. ಶಿಮಕುಮಾರ್ ಚಾಮುಂಡಿ ತಾಯಿಗೆ ಎರಡು ಬೆಳ್ಳಿ ಆನೆಗಳನ್ನ ಸಮರ್ಪಿಸಿದ್ದಾರೆ.


ಈ ಸಂದರ್ಭ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ಈ ಹಿಂದೆಯೂ ಹಲವು ಬಾರಿ ಚಾಮುಂಡಿ ತಾಯಿಗೆ ಸೇವೆ ಸಲ್ಲಿಸಿದ್ದೇನೆ. ಈ ಬಾರಿ ಬೆಳ್ಳಿ ಆನೆಗಳನ್ನ ಸಮರ್ಪಿಸಿದ್ದೇನೆ. ನಮ್ಮ ಕುಟುಂಬ ಮತ್ತು ರಾಜ್ಯದ ಜನತೆಗೆ ಒಳಿತಾಗಲೆಂದು ಹರಕೆ ಸಲ್ಲಿಸಿದ್ದೇನೆ. ಮನಸ್ಸಿನಲ್ಲಿ ಪ್ರಾರ್ಥಿಸಿ ದೇವಿ ಬಳಿ ಬೇಡಿಕೆಗಳನ್ನ ಇಟ್ಟಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ತಮ್ಮ ಮನೆ ಮೇಲಿನ ಐಟಿ ದಾಳಿ ಬಳಿಕ ಸಚಿವ ಡಿ.ಕೆ. ಶಿವಕುಮಾರ್  ದೇಗುಲಗಳ ಭೇಟಿ ಸಾಮಾನ್ಯವಾಗಿದೆ. ಐಟಿ ದಾಳಿ ಮುಗಿದ ಬಳಿಕವೇ ಅಜ್ಜಯ್ಯನನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇತ್ತೀಚೆಗೆ ಕಬ್ಬಾಳಮ್ಮ ದೇಗುಲಕ್ಕೂ ಡಿಕೆಶಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಚಾಮುಂಡಿ ತಾಯಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ Chamundeshwari Dkshivakumar Congress

ಸುದ್ದಿಗಳು

news

ತಿರುಪತಿ ತಿಮ್ಮಪ್ಪನಿಗೆ 1008 ಬಂಗಾರದ ನಾಣ್ಯಗಳ ಹಾರ ಸಮರ್ಪಿಸಿದ ಭಕ್ತ

ದೇಶದ ಅತ್ಯಂತ ಶ್ರೀಮಂತ ದೈವ ತಿರುಪತಿ ತಿಮ್ಮಪ್ಪನಿಗೆ ಅನಿವಾಸಿ ಭಾರತೀಯನೊಬ್ಬ ಬಂಗಾರದ ನಾಣ್ಯಗಳ ಹಾರವನ್ನ ...

news

ಪತಿಯನ್ನು ದುಷ್ಟಶಕ್ತಿಯಿಂದ ರಕ್ಷಿಸುವ ನೆಪದಲ್ಲಿ ನವವಧುವಿನ ಮೇಲೆ ರೇಪ್

ಲಕ್ನೋ: ಪತಿಯನ್ನು ದುಷ್ಟಶಕ್ತಿಯಿಂದ ರಕ್ಷಿಸಿ ಸಾವಿನಿಂದ ಕಾಪಾಡುವ ನೆಪದಲ್ಲಿ ಪ್ರಥಮ ರಾತ್ರಿಯಂದು ...

news

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಇಬ್ಬರು ಶಂಕಿತರ ಬಂಧನ, ವಿಚಾರಣೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್`ಐಟಿ ಅಧಿಕಾರಿಗಳು ತನಿಖೆ ...

news

ಹರಕೆ ತೀರಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಡಿಕೆಶಿ

ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ಕುಟುಂಬ ...

Widgets Magazine
Widgets Magazine