ಜಾರಿ ನಿರ್ದೇಶನಾಲಯದಿಂದ ಕರೆ ಬಂದಿದ್ದು ನಿಜ: ಡಿ.ಕೆ. ಶಿವಕುಮಾರ್

ಬೆಂಗಳೂರು, ಬುಧವಾರ, 13 ಸೆಪ್ಟಂಬರ್ 2017 (14:14 IST)

ಜಾರಿ ನಿರ್ದೇಶನಾಲಯದಿಂದ ಕರೆ ಬಂದಿದ್ದು ನಿಜ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕರೆ ಮಾಡಿ ನೋಟಿಸ್ ಕಳುಹಿಸುವುದಕ್ಕೆ ಅಡ್ರೆಸ್ ಬೇಕು ಎಂದು ಕೇಳಿದರು. ಆಯ್ತು ಕಳುಹಿಸಿ ಎಂದು ತಿಳಿಸಿರುವುದಾಗಿ ಹೇಳಿದ್ದೇನೆ ಎಂದು ಹೇಳಿದ್ದಾರೆ.


ನಿನ್ನೆ ನನಗೆ ಜಾರಿ ನಿರ್ದೇಶನಾಲಯದಿಂದ ಕರೆ ಬಂದಿದ್ದು ನಿಜ. ಕ್ರಾಸ್ ಚೆಕ್ ಮಾಡಿದಾಗ ಇಡಿ ಕಚೇರಿ ಎಂದು ತಿಳಿದುಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಕ್ಕೆ ನನ್ನ ತಮ್ಮ ಸಂಸದ ಡಿ.ಕೆ. ಸುರೇಶ್`ಗೆ ಮಾಹಿತಿ ನೀಡಿದ್ದೇನೆ. ಪರಿಶೀಲನೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಈ ವಿಷಯವನ್ನ ಬಹಿರಂಗಪಡಿಸುವುದು ಬೇಡವೆಂದು ಸುಮ್ಮನಿದ್ದೆ. ನಿನ್ನೆ ಪತ್ರಕರ್ತರೊಬ್ಬರು ಕರೆ ಮಾಡಿ ಕೇಳಿದರು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ ಬಳಿಕ ಪ್ರಕರಣ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗುವ ಬಗ್ಗೆ ವರದಿಗಳು ಕೇಳಿ ಬಂದಿದ್ದವು. ಇದೀಗ, ಜಾರಿ ನಿರ್ದೇಶನಾಲಯದಿಂದ ಡಿಕೆಶಿ ಅವರಿಗೆ ನೋಟಿಸ್ ನೀಡಲು ಕರೆ ಬಂದಿರುವುದು ಸಚಿವರಿಗೆ ಹೊಸ ಸಂಕಷ್ಟ ಉಂಟು ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ಡಿಕೆಶಿವಕುಮಾರ್ ಜಾರಿ ನಿರ್ದೇಶನಾಲಯ ಐಟಿ ದಾಳಿ Dkshivakumar Ed Income Tax Department

ಸುದ್ದಿಗಳು

news

ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಗೆ ಮತ್ತೆ ಸಂಕಷ್ಟ

ಮೈಸೂರು: ಮರಳು ಸಾಗಾಣಿಕೆಗೆ ಅಕ್ರಮ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ ಪುತ್ರ ...

news

ಯುವತಿಯ ಮೇಲೆ ಅತ್ಯಾಚಾರವೆಸಗಿದ ಬಿಜೆಪಿ ಕಾರ್ಪೋರೇಟರ್ ಅರೆಸ್ಟ್

ಮುಂಬೈ: ಠಾಣೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ...

news

ಸಿಎಂ ಸಿದ್ದರಾಮಯ್ಯರಲ್ಲಿ ರಾಕ್ಷಸ, ರಾವಣ, ಕೌರವ, ಕಂಸನ ಗುಣಗಳಿವೆ: ಕಲ್ಲಡ್ಕ ಪ್ರಭಾಕರ್

ದಕ್ಷಿಣ ಕನ್ನಡ: ಸಿಎಂ ಸಿದ್ದರಾಮಯ್ಯರಲ್ಲಿ ರಾವಣ, ಕೌರವ, ಕಂಸನಿಗಿದ್ದ ರಾಕ್ಷಸಿಯ ಪ್ರವೃತ್ತಿಯಿದೆ ಎಂದು ...

news

ರಾಹುಲ್‌ಗಿನ್ನೂ ಚಿಕ್ಕ ವಯಸ್ಸು, ಇಂದಲ್ಲಾ ನಾಳೆ ಪ್ರಧಾನಿಯಾಗ್ತಾರೆ: ಸಿಎಂ

ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗಿನ್ನೂ ಚಿಕ್ಕ ವಯಸ್ಸು ಇಂದಲ್ಲಾ ನಾಳೆ ...

Widgets Magazine