ಅಹ್ಮದ್ ಪಟೇಲ್ ಗೆಲುವಿನ ಕ್ರೆಡಿಟ್ ನಾನು ಅಪೇಕ್ಷಿಸುವುದಿಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು, ಬುಧವಾರ, 9 ಆಗಸ್ಟ್ 2017 (11:21 IST)

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರ ಸಚಿವ ಡಿ.ಕೆ. ಶಿವಕುಮಾರ್, ಪಕ್ಷ ನೀಡಿದ್ದ ಜವಾಬ್ದಾರಿಯನ್ನ ನಿರ್ವಹಿಸಿದ್ದೇನೆ. ನನಗೆ ಗೆಲುವಿನ ಕ್ರೆಡಿಟ್ ಬೇಡ ಎಂದಿದ್ದಾರೆ.


ನಮ್ಮ ಅಭ್ಯರ್ಥಿ ಅಹ್ಮದ್ ಪಟೇಲ್ ಗೆಲ್ಲುವಷ್ಟು ಶಾಸಕರ ಬೆಂಬಲವಿತ್ತು. ಆದರೂ ಬಿಜೆಪಿಯಿಂದ ಆಫರೇಶನ್ ಕಮಲದ ಯತ್ನ ನಡೆದಿತ್ತು. ಹೀಗಾಗಿ, ಅನಿವಾರ್ಯವಾಗಿ ನಮ್ಮ ಶಾಸಕರನ್ನ ಗುಜರಾತ್`ನಿಂದ ರಾಜ್ಯಕ್ಕೆ ಕರೆತರಬೇಕಾಯ್ತು. ನಮ್ಮ ನಾಯಕರು ಇದೀಗ ಗೆಲುವು ಸಾಧಿಸಿದ್ದಾರೆ.  ಒಬ್ಬ ಶಾಸಕರು ಅಡ್ಡ ಮತದಾನ ಮಾಡಿದ್ದಾರೆಂದು ತಿಳಿದು ಬಂದಿದೆ. ಪಕ್ಷ ನೀಡಿದ್ದ ಜವಾಬ್ದಾರಿಯನ್ನಷ್ಟೇ ನಾನು ನಿರ್ವಹಿಸಿದ್ದೇನೆ ಎಂದರು.

ಇದೇವೇಳೆ, ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸಿದ ಡಿ.ಕೆ. ಶಿವಕುಮಾರ್, ಅನ್ಯಾಯದ ಮಾರ್ಗದಿಂದ ನಡೆದರೆ ಯಾರಿಗೂ ಒಳ್ಳೆಯದಾಗುವುದಿಲ್ಲ. ಎಲ್ಲ ಪಕ್ಷಗಳಿಗೂ ಚುನಾವಣಾ ಆಯೋಗ ಪಾಠ ಕಲಿಸಿದೆ. ಮತದಾನದ ಗೌಪ್ಯತೆ ಕಾಪಾಡುವುದು ಬಹು ಮುಖ್ಯ ಎಂದು ಪಾಠ ಹೇಳಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  
ಸೋನಿಯಾ ಗಾಂಧಿ ಅಹ್ಮದ್ ಪಟೇಲ್ ಕಾಂಗ್ರೆಸ್ Congress Ahmedh Patel Sonia Gandhi

ಸುದ್ದಿಗಳು

news

ರಾಜ್ಯಸಭೆ ಚುನಾವಣೆ ಬಿಜೆಪಿಗೆ ಅಪಾಯದ ಸೂಚನೆಯೇ?

ನವದೆಹಲಿ: ರಾಜ್ಯಸಭೆ ಚುನಾವಣೆಯಲ್ಲಿ ಗುಜರಾತ್ ನ ಮೂರೂ ಸೀಟ್ ಗಳನ್ನು ತನ್ನ ತೆಕ್ಕೆಗೆ ...

news

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ‘ನಾಪತ್ತೆ’!

ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ಅಮೇಠಿ ಸಂಸದ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ! ಹೀಗಂತ ಅವರ ಸಂಸದೀಯ ...

news

ಡಿಕೆಶಿಗೆ ಅಭಿನಂದನೆ ಸಲ್ಲಿಸಿದ ಸೋನಿಯಾ ಗಾಂಧಿ, ಅಹ್ಮದ್ ಪಟೇಲ್

ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ ಎಲ್ಲ ಪ್ರಹಸನಗಳು ಮುಗಿದು ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ...

news

ಹೈಕಮಾಂಡ್`ನಿಂದ ಡಿ.ಕೆ. ಶಿವಕುಮಾರ್`ಗೆ ಭರ್ಜರಿ ಗಿಫ್ಟ್..?

ರಾಜ್ಯಸಭೆ ಚುನಾವಣೆಯ ಕುದುರೆ ವ್ಯಾಪಾರದಿಂದ ಪಾರಾಗಲು ರಾಜ್ಯಕ್ಕೆ ಬಂದ ಗುಜರಾತ್`ನ 44 ಕಾಂಗ್ರೆಸ್ ...

Widgets Magazine